ಈದ್ ದಿನದಂದು ಉಡುಗೊರೆಗಳನ್ನು ನೀಡಬಹುದೇ? -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರಶ್ನಿಸಲಾಯಿತು :

ಪ್ರಶ್ನೆ : ಗೌರವಾನ್ವಿತರಾದ ಶೈಖ್‌ರವರೇ, ಈದ್ ದಿನದಂದು ಉಡುಗೊರೆಯನ್ನು ನೀಡುವುದರ ವಿಧಿಯೇನು?

ಉತ್ತರ : ಅದರಲ್ಲಿ ಯಾವುದೇ ತೊಂದರೆಯಿಲ್ಲ, ಈದ್ ದಿನದಂದು ಆಹಾರ, ಪಾನೀಯ, ಉಡುಗೊರೆ ಹಾಗೂ ಭೇಟಿ ಸಂದರ್ಶನಗಳನ್ನು ಹೆಚ್ಚಿಸುವುದು ಅಪೇಕ್ಷಣೀಯವಾದ ಕಾರ್ಯವಾಗಿದೆ. ಯಾಕೆಂದರೆ ಅದು ಬಾಂಧವ್ಯವನ್ನು ಮತ್ತು ಮುಸ್ಲಿಮರ ನಡುವೆ ಪರಸ್ಪರ ಪ್ರೀತಿಯನ್ನು ತಂದುಕೊಡುತ್ತದೆ. ಆದ್ದರಿಂದ ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ.

ಅನುವಾದ : ಅಬೂ ಹಮ್ಮಾದ್