ಹಾಡುಗಾರರ ಶೈಲಿಯಲ್ಲಿ ಕುರ್‌ಆನ್ ಪಠಿಸುವುದುರ ವಿಧಿಯೇನು? : ಅಲ್-ಇಮಾಮ್ ಇಬ್ನ್ ಬಾಝ್

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (V) ರವರೊಂದಿಗೆ ಈ ಕುರಿತು ಪ್ರಶ್ನಿಸಲಾಯಿತು :

ಪ್ರಶ್ನೆ : ಹಾಡುಗಳ ದಾಟಿಯಂತೆ ಅಥವಾ ಹಾಡುಗಳಂತೆ ಕುರ್‌ಆನ್ಅನ್ನು ಪಠಿಸುವ ವ್ಯಕ್ತಿಯ ಕುರಿತು ಆದರಣೀಯರೇ, ತಾವೇನು ಹೇಳುತ್ತೀರಿ? ದಯವಿಟ್ಟು ನನಗೆ ಉಪದೇಶಿಸಿ! ಅಲ್ಲಾಹು ನಿಮಗೆ ಒಳಿತನ್ನು ಪ್ರತಿಫಲವಾಗಿ ನೀಡಲಿ.

ಉತ್ತರ : ಹಾಡುಗಳ ದಾಟಿಯಲ್ಲಿ ಅಥವಾ ಹಾಡುಗಾರರ ಶೈಲಿಯಲ್ಲಿ ಕುರ್‌ಆನ್ ಪಠಿಸುವುದು ಓರ್ವ ಮುಅ್‌ಮಿನ್‌ಗೆ (ಸತ್ಯವಿಶ್ವಾಸಿಗೆ) ಸಮ್ಮತಾರ್ಹವಲ್ಲ. ಅವರದನ್ನು (ಅರ್ಥಾತ್ ಕುರ್‌ಆನ್ಅನ್ನು) ಸಲಫುಸ್ಸಾಲಿಹೀನ್‌ಗಳು, ಸಹಾಬಿಗಳು ಮತ್ತು ಅವರನ್ನು ಪರಿಪೂರ್ಣವಾಗಿ ಅನುಸರಿಸಿದವರು ಪಠಿಸಿದಂತೆಯೇ ಪಠಿಸಬೇಕಾಗಿದೆ. ಅದು ಸರಿಯಾದ ತರ್‌ತೀಲ್‌ನಲ್ಲೇ (ಸಾವಧಾನವಾಗಿ), ಗಂಭೀರ ಮತ್ತು ವಿನಮ್ರ ರೀತಿಯಲ್ಲಿ ಪಠಿಸಬೇಕಾಗಿದೆ, ಅದರಿಂದಾಗಿ ಅದನ್ನು ಆಲಿಸುವವರ ಹೃದಯಗಳ ಮೇಲೆ ಹಾಗೂ ಅದನ್ನು ಪಠಿಸುವವರ ಹೃದಗಳ ಮೇಲೆ ಅದು ಪರಿಣಾಮ ಬೀರಬಹುದು.

ಅದಾಗ್ಯೂ, ಹಾಡುಗಾರರ ಶೈಲಿಯಲ್ಲಿ ಅಥವಾ ವಿಧಾನದಲ್ಲಿ ಅದನ್ನು ಪಠಿಸುವುದು ಸಮ್ಮತಾರ್ಹವಲ್ಲ.

ಮೂಲ : ಮಜ್‌ಮೂಅ್ ಫತಾವಾ ವಮಕಾಲಾತ್ ಅಶ್ಶೈಖ್ ಇಬ್ನ್ ಬಾಝ್ : 9/290
ಅನುವಾದ : ಅಬೂ ಹಮ್ಮಾದ್

ನೋಡಿರಿ : https://binbaz.org.sa/fatwas/2505/حكـم-قـراءة-القـران-على-طريقة-المغنين