w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರಶ್ನಿಸಲಾಯಿತು :
ಪ್ರಶ್ನೆ : ಇಸ್ಲಾಮಿಕ ವರ್ಷವು ಅಂತ್ಯವಾಗುವಾಗ (ಅಲ್ಲಾಹುವಿನೊಂದಿಗೆ) ಕ್ಷಮೆಯಾಚಿಸುವಂತೆ ಮತ್ತು ಪಶ್ಚಾತ್ತಾಪಪಡುವಂತೆ ಜನರಿಗೆ ಉಪದೇಶಿಸುವುದು ಅದೇವೇಳೆ ಹೊಸವರ್ಷ ಆರಂಭವಾದಕ್ಕೆ ಅವರಿಗೆ ಶುಭಾಶಯಗಳನ್ನು ಕೋರುವುದು – (ಇವೆಲ್ಲವೂ) ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಹಬ್ಬಿಕೊಂಡಿದೆ. (ಆದ್ದರಿಂದ ಇದು ಸಮ್ಮತಾರ್ಹವೇ?)
ಉತ್ತರ : ಇವುಗಳೆಲ್ಲವೂ ಬಿದ್ಅತ್ ಆಗಿವೆ (ನವೀನಾಚಾರವಾಗಿದೆ). ಇದು ಹೊಸವರ್ಷವೇನಲ್ಲ; ಇದು ಕೇವಲ ಸಾಂಕೇತಿಕ ಪದಬಳಕೆಯಾಗಿದೆ. ಇದು ಹೊಸವರ್ಷವಲ್ಲ. ನೀವು ಯಾವಾಗ ಜನಿಸಿರುವಿರೋ ಅದರಂತೆ ಪ್ರತಿದಿನ, ಪ್ರತಿವರ್ಷ ಮತ್ತು ಪ್ರತಿವಾರ- (ಹೀಗೆ) ಪ್ರತಿಯೊಂದು ದಿನವೂ ನಿಮ್ಮ ವಯಸ್ಸಿನ ವರ್ಷವು ಪೂರ್ಣಗೊಳ್ಳಬಹುದು; ಇದು ಮುಹರ್ರಮ್ ತಿಂಗಳಿಗೆ ಸೀಮಿತವಾಗಿಲ್ಲ. ಈ ಕಾರ್ಯವು ಕೇವಲ ಒಂದು ಸಾಂಕೇತಿಕ ಪದಬಳಕೆಯಾಗಿದೆ. ಉಮರ್ (I) ರವರು ಸಹಾಬಿಗಳೊಂದಿಗೆ ಸಮಾಲೋಚನೆ ನಡೆಸಿದರು ಏಕೆಂದರೆ ಅವರ (ಆಡಳಿತ) ಕಚೇರಿಗಳಿಂದ ಕೆಲಸ ಮಾಡುವವರು ಅವರ ಬಳಿಗೆ ಬರುತ್ತಿದ್ದರು ಆದರೆ ಯಾವ (ವಾರ್ಷಿಕ) ದಿನಾಂಕವನ್ನು ಬಳಸಬೇಕೆಂದು ಅವರಿಗೆ ತಿಳಿದಿರಲಿಲ್ಲ. ಆದುದರಿಂದ, ಅವರು (ಉಮರ್ I ರವರು) ಸಹಾಬಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಹಿಂದೆ (ಅವರ ಬಳಿಯಿದ್ದ) ಕ್ಯಾಲೆಂಡರ್ ಕ್ರೈಸ್ತ ಕ್ಯಾಲೆಂಡರ್ ಪ್ರಕಾರವಾಗಿತ್ತು ಆದರೆ ಅವರು ಯಹೂದಿ ಮತ್ತು ಕ್ರೈಸ್ತರನ್ನು ಅನುಸರಿಸಲು ಬಯಸಲಿಲ್ಲ. ಹಾಗಾಗಿ ಅವರು ಪ್ರವಾದಿ (H) ರವರ ಹಿಜ್ರಾವನ್ನು ಅನುಸರಿಸಿಕೊಂಡು ಕ್ಯಾಲೆಂಡರ್ ನಿರ್ಮಿಸುವಂತೆ ನಿರ್ಧರಿಸಿದರು. ಏಕೆಂದರೆ ಅದು ಇಸ್ಲಾಮ್ನಲ್ಲಿ ಸಂಭವಿಸಿದ ಅತ್ಯಂತ ಶ್ರೇಷ್ಠ ಘಟನೆಯಾಗಿತ್ತು. ಅದಕ್ಕಾಗಿ ಅವರು -ಪ್ರಯೋಜನ ಮತ್ತು ಅವಶ್ಯಕತೆಯ ಹಿತದೃಷ್ಟಿಯಿಂದ- ಅದನ್ನು (ಅರ್ಥಾತ್ ಪ್ರವಾದಿ H ರವರ ಹಿಜ್ರಾವನ್ನು) ಹಿಜ್ರಿ ವರ್ಷದ ಆರಂಭವಾಗಿ ಮಾಡಿದರು. (ಅವರು ಮಾಡಿರುವುದು) ಹಿಜ್ರಿ ವರ್ಷವನ್ನು ಶುಭಾಶಯವನ್ನು ಕೋರಲು ಮತ್ತು ದುಆಗಳಿಗೆ ನಿರ್ದಿಷ್ಟಪಡಿಸಿಲಿಕ್ಕಾಗಿ ಅಲ್ಲ. ಇದ್ಯಾವುದೂ (ಸಹಾಬಿಗಳಿಂದ) ವರದಿಯಾಗಿಲ್ಲ. ಹಾಗಾಗಿ ಇದೊಂದು ಬಿದ್ಅತ್ ಆಗಿದೆ.
ಅನುವಾದ : ಅಬೂ ಹಮ್ಮಾದ್