ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂಬ ಸಾಕ್ಷ್ಯವಚನದ ಅರ್ಥವೇನು?

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (V) ರವರೊಂದಿಗೆ ಪ್ರಶ್ನಿಸಲಾಯಿತು :

ಪ್ರಶ್ನೆ : ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ (ಅರ್ಥಾತ್ ಅಲ್ಲಾಹುವಿನ ಹೊರತು ಆರಾಧನೆ ಹಕ್ಕುದಾರನು ಯಾರೂ ಇಲ್ಲ ಹಾಗೂ ಮುಹಮ್ಮದ್ H ಅಲ್ಲಾಹುವಿನ ಸಂದೇಶವಾಹಕರಾಗಿರುವರು) ಎಂಬ ಸಾಕ್ಷ್ಯವಚನದ ಅರ್ಥವೇನು?

ಉತ್ತರ : (ಲಾ ಇಲಾಹ ಇಲ್ಲಲ್ಲಾಹ್ ಅಂದರೆ) ಅಲ್ಲಾಹುವಿನ ಹೊರತು ಆರಾಧನೆಗೆ ನೈಜವಾಗಿ ಅರ್ಹತೆಯುಳ್ಳವನು ಇನ್ನಾರೂ ಇಲ್ಲವೆಂದು ಓರ್ವನು ತನ್ನ ನಾಲಗೆ ಹಾಗೂ ಹೃದಯದೊಂದಿಗೆ ಸಾಕ್ಷ್ಯವಹಿಸುವುದಾಗಿದೆ. ಅಲ್ಲಾಹುವಿನ ಹೊರತು ಜನರು ಆರಾಧಿಸುವ ಪೈಕಿಯಿರುವ ವಿಗ್ರಹಗಳಾಗಲೀ ಮರಣ ಹೊಂದಿದವರಾಗಲೀ ಮರಗಳಾಗಲೀ ಕಲ್ಲುಗಳಾಗಲೀ ದೇವಚರರಾಗಲೀ ಅಥವಾ ಇನ್ನಿತರರಾಗಲೀ ಇವೆಲ್ಲವೂ (ಇವೆಲ್ಲದರ ಆರಾಧನೆಯು) ಮಿಥ್ಯೆಯಾಗಿದೆ.

ಅಲ್ಲಾಹು (E) ಹೇಳಿದನು :

﴿ ذَٰلِكَ بِأَنَّ اللَّـهَ هُوَ الْحَقُّ وَأَنَّ مَا يَدْعُونَ مِن دُونِهِ هُوَ الْبَاطِلُ وَأَنَّ اللَّـهَ هُوَ الْعَلِيُّ الْكَبِيرُ ٦٢ 

“ಅದೇಕೆಂದರೆ, ಅಲ್ಲಾಹು ಸತ್ಯವಾಗಿರುವನು (ಅವನ ವಾಗ್ದಾನವು ಸತ್ಯವಾಗಿದೆ, ಅವನ ದೀನ್ ಸತ್ಯವಾಗಿದೆ ಹಾಗೂ ಅವನ ಆರಾಧನೆಯು ಸತ್ಯವಾಗಿದೆ) ಹಾಗೂ ಅವನ ಹೊರತು ಅವರು ಯಾವುದನ್ನು ಕರೆದು ಪ್ರಾರ್ಥಿಸುತ್ತಾರೋ ಅದು ಮಿಥ್ಯೆಯಾಗಿದೆ ಮತ್ತು ಖಂಡಿತವಾಗಿಯೂ ಅಲ್ಲಾಹು, ಅವನು ಅತ್ಯುನ್ನತನೂ ಮಹಾನನೂ ಆಗಿರುವನು.” (ಕುರ್‌ಆನ್ 22 : 62)

 

(ಮುಹಮ್ಮದುರ್ರಸೂಲುಲ್ಲಾಹ್ ಅರ್ಥಾತ್) ಮುಹಮ್ಮದ್ (H) ಅಲ್ಲಾಹುವಿನ ಸಂದೇಶವಾಹಕರಾಗಿದ್ದಾರೆ ಎಂಬ ಸಾಕ್ಷ್ಯವಚನದ ಅರ್ಥವು : ಮುಹಮ್ಮದ್ ಬಿನ್ ಅಬ್ದಿಲ್ಲಾಹ್ ಬಿನ್ ಅಬ್ದಿಲ್ ಮುತ್ತಲಿಬ್ (H) ರವರು ಸತ್ಯವಾಗಿಯೂ ಸಕಲ ಜಿನ್ನ್ ಹಾಗೂ ಮನುಷ್ಯರೆಡೆಗೆ ಕಳುಹಿಸಲಾದ ಅಲ್ಲಾಹುವಿನ ಸಂದೇಶವಾಹಕರಾಗಿದ್ದಾರೆ ಹಾಗೂ ಅವರು ಪ್ರವಾದಿಗಳ ಪೈಕಿ ಕೊನೆಯವರೂ, ಅವರ ಬಳಿಕ ಯಾವ ಪ್ರವಾದಿಯೂ ಇಲ್ಲವೆಂದು ನೀನು ಅರಿವಿನೊಂದಿಗೆ, ಖಚಿತತೆಯೊಂದಿಗೆ ಹಾಗೂ ನಿಷ್ಕಪಟತೆಯೊಂದಿಗೆ ಸಾಕ್ಷ್ಯವಹಿಸುವುದಾಗಿದೆ.

ನೋಡಿರಿ : binbaz.org.sa/fatwas/18975/معنى-شهادة-ان-لا-اله-الا-الله-وان-محمدا-رسول-الله
ಸಂಕ್ಷಿಪ್ತ ಅನುವಾದ : ಅಬೂ ಹಮ್ಮಾದ್

ಹೆಚ್ಚಿನ ಓದಿಗಾಗಿ : 

ಮರಣಹೊಂದಿದವರೊಡನೆ ಬೇಡುವುದು ಮತ್ತು ಅವರೊಂದಿಗೆ ಸಹಾಯ ಯಾಚಿಸುವುದರ ವಿಧಿಯೇನು? -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವುದು ಶಿರ್ಕ್ಆಗಿದೆ -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ತೌಹೀದ್‍ನ ವಿಧಗಳಾವುವು? ಹಾಗೂ ಅವುಗಳ ಅರ್ಥವಿವರಣೆಯೇನು? -ಹಿರಿಯ ಉಲಮಾಗಳ ಫತ್ವ ಸಮಿತಿ, ಸೌದಿ ಅರೇಬಿಯಾ