ಇಬಾದತ್ (ಅಥವಾ ಆರಾಧನೆ) ಎಂದರೇನು? -ಅಶ್ಶೈಖ್ ಝೈದ್ ಅಲ್-ಮದ್‌ಖಲೀ

w

ಪ್ರಶ್ನೆ : ಇಬಾದತ್ (ಅಥವಾ ಆರಾಧನೆ) ಎಂದರೇನು? ಯಾವಾಗ ಒಂದು ಕರ್ಮವು ಆರಾಧನೆಯೆಂದು ಪರಿಗಣಿಸಲ್ಪಡುವುದು? ಹಾಗೂ ಅದರ ಷರತ್ತುಗಳೇನು?

ಉತ್ತರ : ಇಬಾದತ್‌ನ ಅರ್ಥವನ್ನು ಹಲವಾರು ರೀತಿಯಲ್ಲಿ ವಿವರಿಸಲಾಗಿದೆ. ಪ್ರಾಯಶಃ (ಇಬಾದತ್‌ನ ಕುರಿತು) ಅತ್ಯಂತ ಸಮಗ್ರವಾದ ವಿವರಣೆಯು ಶೈಖುಲ್ ಇಸ್ಲಾಮ್ ಇಬ್ನ್ ತಯ್‍ಮಿಯ್ಯಃ (V) ರವರದಾಗಿದೆ, ಈ ಬಗ್ಗೆ ಅವರು ಹೇಳಿರುವುದು :

« اسْمٌ جَامِعٌ لِكُلِّ مَا يُحِبُّهُ اللَّهُ وَيَرْضَاهُ مِنَ الْأَقْوَالِ وَالْأَعْمَالِ الظَّاهِرَةِ وَالْبَاطِنَةِ »

ಇಬಾದತ್ ಅಂದರೆ –ವಚನಗಳಲ್ಲಿ1ನಾಲಗೆಯ ಮೂಲಕ ನಿರ್ವಹಿಸುವ ಪ್ರಾರ್ಥನೆ, ದಿಕ್ರ್, ಕುರ್‌ಆನ್ ಪಾರಾಯಣ ಇತ್ಯಾದಿ ಮತ್ತು ಕರ್ಮಗಳಲ್ಲಿ (ಅದು) ಬಾಹ್ಯವಾಗಿರುವುದಾಗಲೀ2ನಮಾಝ್, ಝಕಾತ್, ಹಜ್ಜ್ ಇತ್ಯಾದಿ ಅಥವಾ ಆಂತರಿಕವಾಗಿರುವುದಾಗಲೀ3ಭಯ, ನಿರೀಕ್ಷೆ, ಭರವಸೆ ಇತ್ಯಾದಿ ಹೃದಯದ ಮೂಲಕ ನಿರ್ವಹಿಸುವ ಆಂತರಿಕ ಕರ್ಮಗಳು. -ಅಲ್ಲಾಹು ಇಷ್ಟಪಡುವ ಮತ್ತು ತೃಪ್ತಿಪಡುವ ಎಲ್ಲಾ ಕಾರ್ಯಗಳನ್ನು ಒಳಗೊಂಡಿರುವ ಸಮಗ್ರ ನಾಮವಾಗಿದೆ.

ಹಾಗೂ ಅವುಗಳನ್ನು (ಇಬಾದತ್ಅನ್ನು) ನಿರಾಕರಿಸುವ ಮತ್ತು ಅದಕ್ಕೆ ವಿರುದ್ಧವಾಗಿರುವ (ಅರ್ಥಾತ್ ಇಬಾದತ್ ಭಂಗಗೊಳಿಸುವ ಶಿರ್ಕ್) ಕಾರ್ಯಗಳಿಂದ ದೂರವುಳಿಯುವುದಾಗಿದೆ.4ಅಲ್-ಫತಾವಾ ಅಲ್-ಕುಬ್ರಾ 5:154, ಅ‌ಅ್‌‍ಲಾಮ್ ಅಸ್ಸುನ್ನತಿಲ್ ಮನ್ಶೂರಃ ಪುಟ : 6

ಒಂದು ಕರ್ಮವು (ಈ ಕೆಳಗಿನ) ಎರಡು ಕಾರ್ಯಗಳನ್ನು ಒಳಗೊಂಡಿದ್ದರೆ ಅದನ್ನು ಇಬಾದತ್ ಎಂದು ಪರಿಗಣಿಸಲಾಗುವುದು. ಅವೇನೆಂದರೆ, ಮಹೋನ್ನತನಾದ ಅಲ್ಲಾಹುವಿನೊಂದಿಗಿರುವ ಪರಿಪೂರ್ಣವಾದ ಪ್ರೀತಿ, ಜೊತೆಗೆ ಅವನಿಗೆ ತೋರುವ ಪೂರ್ಣವಾದ ನಮ್ರತೆ. ಮಹೋನ್ನತನಾದ ಅಲ್ಲಾಹು ಹೇಳಿದನು :

﴿ إِنَّهُمْ كَانُوا يُسَارِعُونَ فِي الْخَيْرَاتِ وَيَدْعُونَنَا رَغَبًا وَرَهَبًا ۖ وَكَانُوا لَنَا خَاشِعِينَ

“ಖಂಡಿತವಾಗಿಯೂ, ಅವರು (ಅರ್ಥಾತ್ ಪ್ರವಾದಿಗಳು) ಸತ್ಕರ್ಮಗಳನ್ನು ನಿರ್ವಹಿಸಲು ತವಕದಿಂದ ಧಾವಿಸುವವರೂ, ನಿರೀಕ್ಷೆ ಮತ್ತು ಭಯದಿಂದ ನಮ್ಮನ್ನು ಕರೆದು ಪ್ರಾರ್ಥಿಸುವವರೂ ಆಗಿದ್ದರು. ಹಾಗೂ ಅವರು ನಮ್ಮೊಂದಿಗೆ ನಮ್ರತೆಯುಳ್ಳವರಾಗಿದ್ದರು.” (ಸೂರಃ ಅಲ್-ಅಂಬಿಯಾಅ್ 21:90)


ಇಬಾದತ್‌ನ ಷರತ್ತುಗಳೆಂದರೆ:
(1) ತನ್ನ ಸಂಕಲ್ಪದಲ್ಲಿ ಸತ್ಯಸಂಧತೆ ಪಾಲಿಸುವುದು (ಅರ್ಥಾತ್ ಸತ್ಕರ್ಮವನ್ನು ನಿರ್ವಹಿಸಲು ದೃಢ ನಿಶ್ಚಯವನ್ನು ಹೊಂದುವುದು, ಆಲಸ್ಯವನ್ನು ತೊರೆಯುವುದು ಹಾಗೂ ತನ್ನ ಮಾತನ್ನು ತನ್ನ ಕೃತ್ಯದೊಂದಿಗೆ ಪ್ರಾಮಾಣಿಕವಾಗಿರಿಸಲು ಶ್ರಮವಹಿಸುವುದು).

(2) ತನ್ನ ಉದ್ದೇಶದಲ್ಲಿ ಇಖ್‌ಲಾಸ್ (ನಿಷ್ಕಳಂಕತೆ) ಹೊಂದುವುದು
(ಅರ್ಥಾತ್ ಬಾಹ್ಯ ಹಾಗೂ ಆಂತರಿಕವಾದ ತನ್ನ ಎಲ್ಲಾ ನಡೆ ಮತ್ತು ನುಡಿಗಳನ್ನು ಅಲ್ಲಾಹುವಿನ ಮುಖವನ್ನು ಮಾತ್ರ ಅರಸಿಕೊಂಡು ಮಾಡಬೇಕೆನ್ನುವ ಸಂಕಲ್ಪ ಹೊಂದುವುದು).

(3) ಶರೀಅತ್‌ಗೆ ಅನುಗುಣವಾಗಿರುವುದು
(ಅರ್ಥಾತ್ ಪ್ರವಾದಿ H ರವರು ಕಲಿಸಿಕೊಟ್ಟ ರೀತಿಯಲ್ಲೇ ಇಬಾದತ್‌ಗಳನ್ನು ನಿರ್ವಹಿಸುವುದು). ಮಹೋನ್ನತನಾದ ಅಲ್ಲಾಹು ಹೇಳಿದನು :

﴿ فَمَن كَانَ يَرْجُو لِقَاءَ رَبِّهِ فَلْيَعْمَلْ عَمَلًا صَالِحًا وَلَا يُشْرِكْ بِعِبَادَةِ رَبِّهِ أَحَدًا

“ಹಾಗಾಗಿ ಯಾರು ತನ್ನ ರಬ್ಬ್ಅನ್ನು ಭೇಟಿಯಾಗಲು ನಿರೀಕ್ಷಿಸುತ್ತಾನೋ, ಅವನು ಸತ್ಕರ್ಮಗಳನ್ನು ನಿರ್ವಹಿಸಲಿ ಮತ್ತು ತನ್ನ ರಬ್ಬ್‌ನೊಂದಿಗೆ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ.” (ಸೂರಃ ಅಲ್-ಕಹ್‌ಫ್ 18:110)


ಮೂಲ : ಇಆನತುಲ್ ಖುತಬಾಇ ವಲ್-ಅ‍ಇಮ್ಮಃ ಬಿಫಿಕ್ಹಿ ಇಮಾಮತಿಲ್ ಉಮ್ಮಃ -ಪುಟ : 12
ಅನುವಾಸ : ಅಬೂ ಹಮ್ಮಾದ್