ವಿಮಾನ ಅಪಹರಣ, ಬಾಂಬ್ ಸ್ಪೋಟ ಮುಂತಾದ ಉಗ್ರಗಾಮಿಗಳ ವಿಧ್ವಂಸಕ ಕೃತ್ಯಗಳೆಲ್ಲವೂ ವಿನಾಶವನ್ನೇ ಹೊರತು ಇನ್ನೇನನ್ನೂ ತರದು : ಅಶ್ಶೈಖ್ ಇಬ್ನ್ ಬಾಝ್

w

“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”

  ಸೌದಿ ಅರೇಬಿಯಾದ ಶ್ರೇಷ್ಠ ಸಲಫೀ ವಿದ್ವಾಂಸರಾದ ಅಲ್ಲಾಮಃ ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹೇಳಿದರು :

ಸರ್ವಸ್ತುತಿಗಳೂ ಅಲ್ಲಾಹುವಿಗಾಗಿದೆ, ಸಲಾತ್ ಮತ್ತು ಸಲಾಮ್‌ಗಳು ಅಲ್ಲಾಹುವಿನ ಸಂದೇಶವಾಹಕರ ಮೇಲೂ, ಅವರ ಕುಟುಂಬದ ಮೇಲೂ, ಅವರ ಸಹಾಬಿಗಳ ಮೇಲೂ ಹಾಗೂ ಅವರನ್ನು ಪರಿಪೂರ್ಣವಾಗಿ ಅನುಸರಿಸುವವರ ಮೇಲೂ ಇರಲಿ.

ವಿಮಾನಗಳನ್ನು ಅಪಹರಣ ಮಾಡುವುದು, ರಾಯಭಾರಿ ಕಛೇರಿಯ ಅಧಿಕಾರಿಗಳನ್ನು ಅಪಹರಿಸುವುದು ಮುಂತಾದವುಗಳೆಲ್ಲವೂ ಘೋರ ಅಪರಾಧಾಗಳಾಗಿವೆ, ಇವುಗಳು ಬಹುದೊಡ್ಡ ಹಾನಿ ಮತ್ತು ವಿನಾಶವನ್ನೇ ಹೊರತು ಇನ್ನೇನನ್ನೂ ತರದು ಎಂಬುದು ಅಲ್ಪ ಪ್ರಮಾಣದ ಸಾಮಾನ್ಯ ತಿಳುವಳಿಕೆಯಿರುವವನಿಗೂ ತಿಳಿದಿರುವ ವಿಚಾರವಾಗಿದೆ. ಇಂತಹ ದುಷ್ಕೃತ್ಯಗಳು ಅಮಾಯಕ ಜನರ ಮೇಲೆ ತೀವ್ರ ಹಾನಿ ಹಾಗೂ ಸಂಕಷ್ಟಕ್ಕೆ ತಂದೊಡ್ಡುತ್ತದೆ. ಅದರ ಭಯಾನಕ ಮತ್ತು ಭೀಕರತೆಯನ್ನು ಅಲ್ಲಾಹುವೇ ಬಲ್ಲ!.

ಇಂತಹ ಅಪರಾಧಗಳ ದುಷ್ಟತೆ ಹಾಗೂ ಹಾನಿಯು ಕೇವಲ ಒಂದು ನಿರ್ದಿಷ್ಟ ರಾಷ್ಟ್ರಕ್ಕೆ ಮಾತ್ರ ಬಾಧಿಸದೆ, ವಿಶ್ವದುದ್ದಕ್ಕೂ ಅದರ ಕೆಟ್ಟ ಪರಿಣಾಮವು ಬೀರುತ್ತವೆ.

ನಿಸ್ಸಂದೇಹವಾಗಿಯೂ, ಯಾವಾಗಲೆಲ್ಲಾ ಇಂತಹ ಅಪರಾಧಗಳು ಉದ್ಭವಿಸುವಿಸುವುದೋ, ಆಗ ಅದರ ದುಷ್ಪರಿಣಾಮಗಳನ್ನು ತಡೆಗಟ್ಟಲು ಮತ್ತು ಅವುಗಳನ್ನು ನಿರ್ಮೂಲನೆ ಮಾಡಲು, ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಲು ಅತೀ ಹೆಚ್ಚಿನ ಕಾಳಜಿಯನ್ನು ವಹಿಸುವುದು -ಸರ್ಕಾರ ಮತ್ತು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿದ್ವಾಂಸರ ಮೇಲೆ ಕಡ್ಡಾಯವಾಗಿದೆ.

[ಮೂಲ : ಮಜ್‌ಮೂಅ್ ಅಲ್-ಫತಾವಾ 1/272]
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್