ತೌಹೀದ್‍ನ ವಿಧಗಳಾವುವು? ಹಾಗೂ ಅವುಗಳ ಅರ್ಥವಿವರಣೆಯೇನು?

ತೌಹೀದ್‍ನ ವಿಧಗಳು ಮೂರು (ಅವುಗಳೆಂದರೆ) :

1) ತೌಹೀದ್ ಅರ್ರುಬೂಬಿಯ್ಯಃ
2) ತೌಹೀದ್ ಅಲ್ ಉಲೂಹಿಯ್ಯಃ   
3) ತೌಹೀದ್ ಅಲ್ ಅಸ್ಮಾಅ್ ವಸ್ಸಿಫಾತ್

ತೌಹೀದ್ ಅರ್ರುಬೂಬಿಯ್ಯಃ ಅಂದರೆ ಸೃಷ್ಟಿ, ಅನ್ನಾಧಾರ ಒದಗಿಸುವುದು, ಜೀವ ನೀಡುವುದು, ಮರಣ ನೀಡುವುದು, ಮತ್ತು  ಭೂಮಿ-ಆಕಾಶಗಳ ಅಧಿಪತ್ಯವನ್ನು ಸರ್ವರೀತಿಗಳಲ್ಲಿ ನಿಯಂತ್ರಿಸುವುದು ಹಾಗೂ ನಿರ್ವಹಿಸುವುದರಲ್ಲಿ ಅಲ್ಲಾಹುವನ್ನು ಏಕನಾಗಿಸುವುದಾಗಿದೆ. (ಅದರಂತೆಯೇ) ತೀರ್ಪು ನೀಡುವ ಮತ್ತು ಸಂದೇಶವಾಹಕರನ್ನು ನಿಯೋಜಿಸುವ ಮೂಲಕ ಶಾಸನ ನಿರ್ಣಯಿಸುವ ಹಾಗೂ ಗ್ರಂಥಗಳನ್ನು ಅವತೀರ್ಣಗೊಳಿಸುವ ಹಕ್ಕಿನಲ್ಲಿ ಅಲ್ಲಾಹುವನ್ನು ಏಕನಾಗಿಸುವುದಾಗಿದೆ. ಅಲ್ಲಾಹು (E) ಹೇಳಿದನು :

﴿ أَلَا لَهُ الْخَلْقُ وَالْأَمْرُ ۗ تَبَارَكَ اللَّـهُ رَبُّ الْعَالَمِينَ ۝ ﴾

“ನಿಸ್ಸಂದೇಹವಾಗಿಯೂ, ಸೃಷ್ಟಿ ಮತ್ತು ಆಜ್ಞಾಧಿಕಾರವು ಅವನದೇ ಆಗಿವೆ. ಸಕಲ ಲೋಕಗಳ (ಮಾನವರ, ಜಿನ್ನ್‌ಗಳ ಮತ್ತು ಅಸ್ತಿತ್ವದಲ್ಲಿರುವ ಎಲ್ಲದರ) ರಬ್ಬ್ಆದ (ಪರಿಪಾಲಕನಾದ) ಅಲ್ಲಾಹು ಸಮೃದ್ಧಶೀಲನು.” (ಕುರ್‌ಆನ್ 7 : 54)

 

ತೌಹೀದ್ ಅಲ್ ಉಲೂಹಿಯ್ಯಃ ಅಂದರೆ ಇಬಾದತ್‌ನಲ್ಲಿ (ಆರಾಧನೆಯಲ್ಲಿ) ಅಲ್ಲಾಹುವನ್ನು ಏಕನಾಗಿಸುವುದಾಗಿದೆ. ಆದುದರಿಂದ ಅವನ ಹೊರತು ಅನ್ಯರನ್ನು ಆರಾಧಿಸಲಾಗದು, ಅವನ ಹೊರತು ಅನ್ಯರನ್ನು ಕರೆದು ಪ್ರಾರ್ಥಿಸಲಾಗದು, ಅವನ ಹೊರತು ಅನ್ಯರನ್ನು ರಕ್ಷಣೆಗೆ ಅಥವಾ ನೆರವಿಗೆ ಅರಸಲಾಗದು, ಅವನ ಹೊರತು ಇತರರಿಗೆ ಹರಕೆಗಳನ್ನು ಅರ್ಪಿಸಲಾಗದು ಹಾಗೂ ಅವನ ಹೊರತು ಇತರರಿಗೆ ಬಲಿಕರ್ಮವನ್ನು ನೀಡಲಾಗದು ಅಲ್ಲಾಹು (E) ಹೇಳಿದನು :

﴿ قُلْ إِنَّ صَلَاتِي وَنُسُكِي وَمَحْيَايَ وَمَمَاتِي لِلَّـهِ رَبِّ الْعَالَمِينَ ۝ لَا شَرِيكَ لَهُ ۖ وَبِذَٰلِكَ أُمِرْتُ وَأَنَا أَوَّلُ الْمُسْلِمِينَ ۝ ﴾

“ಹೇಳಿರಿ : ನನ್ನ ನಮಾಝ್, ನನ್ನ ಬಲಿಕರ್ಮ, ನನ್ನ ಜೀವನ ಮತ್ತು ಮರಣ ಸಕಲ ಲೋಕಗಳ ರಬ್ಬ್ಆದ ಅಲ್ಲಾಹುವಿಗಿರುವುದಾಗಿವೆ. ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆಜ್ಞಾಪಿಸಲಾಗಿದೆ. ಮತ್ತು ನಾನು ಮುಸ್ಲಿಮರ (ಅರ್ಥಾತ್ ಅಲ್ಲಾಹುವಿಗೆ ಇಸ್ಲಾಮ್ ಮತ್ತು ತೌಹೀದ್‌ನೊಂದಿಗೆ ವಿಧೇಯರಾಗುವವರ) ಪೈಕಿ ಮೊದಲಿಗನಾಗಿರುವೆನು. (ಕುರ್‌ಆನ್ 6 : 162-163)

 

ಮತ್ತು ಅವನು (ಅಲ್ಲಾಹು) ಹೇಳಿದನು :

﴿ فَصَلِّ لِرَبِّكَ وَانْحَرْ ۝ ﴾

“ಆದುದರಿಂದ ತಮ್ಮ ರಬ್ಬ್‌ಗೆ (ಮಾತ್ರ) ನೀವು ನಮಾಝ್ ಮಾಡಿರಿ ಮತ್ತು (ಅವನಿಗೆ ಮಾತ್ರ) ಬಲಿಯರ್ಪಿಸಿರಿ. (ಕುರ್‌ಆನ್ 108 : 2)

 

ತೌಹೀದ್ ಅಲ್ ಅಸ್ಮಾಅ್ ವಸ್ಸಿಫಾತ್ ಅಂದರೆ ಅವನು (ಅಲ್ಲಾಹು) ತನ್ನನ್ನು ತಾನೇ ಹೇಗೆ ಹೆಸರಿಸಿರುವನೋ ಮತ್ತು ವಿವರಿಸಿರುವನೋ, ಹಾಗೂ ಸಹೀಹ್ (ಅಧಿಕೃತ) ಹದೀಸ್ ವಚನಗಳಲ್ಲಿ ಹೇಗೆ ಅವನ ಸಂದೇಶವಾಹಕರು (H) ಅವನನ್ನು ವಿವರಿಸಿರುವರೋ ಮತ್ತು ಹೆಸರಿಸಿರುವರೋ ಅದೇ ರೀತಿ ಅಲ್ಲಾಹುವನ್ನು (E) ಹೆಸರಿಸುವುದು ಮತ್ತು ವಿವರಿಸುವುದಾಗಿದೆ. ಮತ್ತು ಅವುಗಳನ್ನು (ಯಾವುದೇ ಸೃಷ್ಟಿಗಳಿಗೆ) ಹೋಲಿಸದೇ ಹಾಗೂ (ಯಾವುದೇ ಸೃಷ್ಟಿಗಳಿಗೆ) ಸಮಾನಗೊಳಿಸದೇ, ಹಾಗೂ (ಅವುಗಳಾವುದನ್ನೂ ತಪ್ಪಾಗಿ) ವ್ಯಾಖ್ಯಾನಿಸದೇ ಅಥವಾ (ಅವುಗಳಾವುದನ್ನೂ) ನಿರಾಕರಿಸದೇ ಅಲ್ಲಾಹುವಿಗೆ ದೃಢೀಕರಿಸುವುದಾಗಿದೆ.

﴿ لَيْسَ كَمِثْلِهِ شَيْءٌ وَهُوَ السَّمِيعُ الْبَصِيرُ ۝ ﴾

“ಅವನಂತೆ (ಸರಿಸಮಾನವಾಗಿ) ಯಾವುದೂ ಇಲ್ಲ. ಅವನು ಸರ್ವವನ್ನು ಆಲಿಸುವವನೂ ಹಾಗೂ ಸರ್ವವನ್ನು ಕಾಣುವವನೂ ಆಗಿದ್ದಾನೆ.” (ಕುರ್‌ಆನ್ 42 : 11)

 

ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‍ಗಳು ನಮ್ಮ ಪ್ರವಾದಿ ಮುಹಮ್ಮದ್ (H) ರವರ ಮೇಲೂ, ಅವರ ಕುಟುಂಬದ ಮೇಲೂ ಹಾಗೂ ಅವರ ಸಹಚರರ (ಸಹಾಬಾಗಳ) ಮೇಲೂ ಸದಾ ಇರಲಿ.

– ಸೌದಿ ಅರೇಬಿಯಾದ ಫತ್ವ ಸಮಿತಿ 

ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್
ಶೈಖ್ ಅಬ್ದುಲ್ಲಾಹ್ ಬಿನ್ ಗುದಯಾನ್
ಶೈಖ್ ಅಬ್ದುಲ್ಲಾಹ್ ಬಿನ್ ಕುಊದ್
ಶೈಖ್ ಅಬ್ದುರ್ರಝ್ಝಾಕ್ ಅಲ್-ಅಫೀಫೀ

(ಫತಾವಾ ಅಲ್-ಲಜ್‌ನಃ ಅದ್ದಾಇಮಃ ಫತ್ವಾ ಸಂಖ್ಯೆ : 8943)

ಈ ಲೇಖನದ PDF ಪ್ರತಿಯನ್ನು ಇಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಿ