ರಾತ್ರಿಯ ಅಂತ್ಯ ವೇಳೆಯಲ್ಲಿ ಈ ರೀತಿ ಪ್ರಾರ್ಥಿಸಿದರೆ…

ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯ್ಯಃ ( رحمه الله) ಹೇಳಿದರು :

ಓರ್ವ ವ್ಯಕ್ತಿಯು ತನ್ನ ರಬ್ಬ್ ನೊಂದಿಗೆ ಮುಂಜಾವಿಗೆ ಮುನ್ನ (ರಾತ್ರಿಯ ಅಂತ್ಯ ವೇಳೆಗಳಲ್ಲಿ) ರಹಸ್ಯವಾಗಿ ಪ್ರಾರ್ಥಿಸಿ. ಹಾಗೂ ಅವನೊಂದಿಗೆ ಸಹಾಯವನ್ನು ಯಾಚಿಸಿ (ಈ ರೀತಿ) ಹೇಳಿದರೆ :

يَا حَيُّ يَا قَيُّومُ بِرَحْمَتِكَ أَسْتَغِيثُ

“ಎಂದೆಂದಿಗೂ ಬದುಕಿರುವವನೇ, ಸ್ವಯಂ ಅಸ್ತಿತ್ವದಲ್ಲಿರುವವನೂ ಇತರರಿಗೂ ಅಸ್ತಿತ್ವವವನ್ನು ಒದಗಿಸುವವನೇ (ಅಲ್ಲಾಹುವೇ) ನಿನ್ನ ಕಾರುಣ್ಯದೊಂದಿಗೆ ನಾನು ಸಹಾಯ ಯಾಚಿಸುತ್ತಿದ್ದೇನೆ.”

(ಆಗ) ಅಲ್ಲಾಹುವಿನ ಹೊರತು ಅದನ್ನು ಇತರ ಯಾರೂ ತಿಳಿಯದ ರೀತಿಯಲ್ಲಿ ಅಲ್ಲಾಹು ಅವನಿಗೆ ಶಕ್ತಿ ಮತ್ತು ಬಲವನ್ನು ಒದಗಿಸುವನು.”

(ಮಜ್ಮೂಅ್ ಅಲ್-ಫತಾವ 28 : 242)