ಮಹೋನ್ನತನಾದ ಅಲ್ಲಾಹು ಹೇಳುತ್ತಾನೆ :
﴿ وَمَا خَلَقْنَا السَّمَاوَاتِ وَالْأَرْضَ وَمَا بَيْنَهُمَا لَاعِبِينَ مَا خَلَقْنَاهُمَا إِلَّا بِالْحَقِّ وَلَـٰكِنَّ أَكْثَرَهُمْ لَا يَعْلَمُونَ ﴾
“ನಾವು ಆಕಾಶಗಳನ್ನೂ, ಭೂಮಿಯನ್ನೂ ಹಾಗೂ ಅವುಗಳ ಮಧ್ಯೆಯಿರುವುದನ್ನೂ ವಿನೋದಕ್ಕಾಗಿ ಸೃಷ್ಟಿಸಿಲ್ಲ. ನಾವದನ್ನು ಸತ್ಯಪೂರ್ಣವಾಗಿಯೇ (ಅರ್ಥಾತ್ ಅಲ್ಲಾಹುವಿಗೆ ವಿಧೇಯರಾಗುವವರಾರು ಹಾಗೂ ಅವಿಧೇಯರಾಗುವವರಾರು ಎಂದು ಪರೀಕ್ಷಿಸಿ ನಂತರ ವಿಧೇಯರಾದವರಿಗೆ ಪ್ರತಿಫಲವೂ ಅವಿಧೇಯರಾದವರಿಗೆ ಶಿಕ್ಷೆಯೂ ನೀಡುವ ಸಲುವಾಗಿಯೇ) ಹೊರತು ಸೃಷ್ಟಿಸಿಲ್ಲ. ಆದರೆ ಅವರ ಪೈಕಿ ಹೆಚ್ಚಿನವರೂ ಅರಿತಿಲ್ಲ.” (ಕುರ್’ಆನ್ 44 : 38-39)
ಅವನು (ಅಲ್ಲಾಹು), ಮಹೋನ್ನತನು, ಹೇಳುತ್ತಾನೆ :
وَمَا خَلَقْنَا السَّمَاءَ وَالْأَرْضَ وَمَا بَيْنَهُمَا بَاطِلًا ۚ ذَٰلِكَ ظَنُّ الَّذِينَ كَفَرُوا
“ನಾವು ಆಕಾಶಗಳನ್ನೂ, ಭೂಮಿಯನ್ನೂ ಹಾಗೂ ಅವುಗಳ ಮಧ್ಯೆಯಿರುವುದನ್ನೂ ವ್ಯರ್ಥವಾಗಿ ಸೃಷ್ಟಿಸಿಲ್ಲ. ಅದು ಸತ್ಯನಿಷೇಧಿಗಳ ಭ್ರಮೆಯಾಗಿದೆ.” (ಕುರ್’ಆನ್ 38 : 27)
ಅವನು (ಅಲ್ಲಾಹು), ಮಹೋನ್ನತನು, ಹೇಳುತ್ತಾನೆ :
وَخَلَقَ اللَّـهُ السَّمَاوَاتِ وَالْأَرْضَ بِالْحَقِّ وَلِتُجْزَىٰ كُلُّ نَفْسٍ بِمَا كَسَبَتْ وَهُمْ لَا يُظْلَمُونَ
“ಅಲ್ಲಾಹು ಆಕಾಶಗಳನ್ನೂ ಹಾಗೂ ಭೂಮಿಯನ್ನೂ ಸತ್ಯದೊಂದಿಗೆ (ನ್ಯಾಯಪೂರ್ಣವಾಗಿ) ಸೃಷ್ಟಿಸಿದನು. ಅದು ಪ್ರತಿಯೋರ್ವ ವ್ಯಕ್ತಿಯೂ ತಾನೇನು ಸಂಪಾದಿಸಿರುವನೋ ಅದರ ಪ್ರತಿಫಲವನ್ನು ನೀಡುವ ಸಲುವಾಗಿದೆ. ಅವರಿಗೆ ಅನ್ಯಾಯವೆಸಗಲಾಗದು.” (ಕುರ್’ಆನ್ 45 : 22)
ಅವನು (ಅಲ್ಲಾಹು), ಮಹೋನ್ನತನು, ಹೇಳುತ್ತಾನೆ :
وَمَا خَلَقْتُ الْجِنَّ وَالْإِنسَ إِلَّا لِيَعْبُدُونِ
“ನನ್ನನ್ನು ಆರಾಧಿಸುವುದಕ್ಕಾಗಿಯೇ ಹೊರತು ಜಿನ್ನ್’ಗಳನ್ನೂ ಹಾಗೂ ಮನುಷ್ಯರನ್ನೂ ನಾನು ಸೃಷ್ಟಿಸಿಲ್ಲ.” (ಕುರ್’ಆನ್ 51 : 56)
– ಅಶ್ಶೈಖ್ ಅಲ್-ಹಾಫಿದ್ ಅಲ್-ಹಕಮೀ (V), ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
(ಮೂಲ : ಅಅ್’ಲಾಮ್ ಅಸ್ಸುನ್ನಃ ಅಲ್-ಮನ್’ಶೂರಃ ಲಿ ಇಅ್’ತಿಕಾದ್ ಅತ್ತಾಇಫಃ ಅನ್ನಾಜಿಯಃ ಅಲ್-ಮನ್’ಸೂರಃ – ಪುಟ : 5)