w
ಅಬ್ದುಲ್ಲಾಹ್ ಬಿನ್ ಮಸ್ಊದ್ (I) ರವರಿಂದ ವರದಿ : ಪ್ರವಾದಿ (H) ರವರು ಹೇಳುವುದನ್ನು ನಾನು ಆಲಿಸಿರುವೆನು :
« إِنَّ أَشَدَّ النَّاسِ عَذَابًا عِنْدَ اللَّهِ يَوْمَ الْقِيَامَةِ الْمُصَوِّرُونَ »
“ಖಂಡಿತವಾಗಿಯೂ, ಅಲ್ಲಾಹುವಿನ ಬಳಿ ಅಂತ್ಯದಿನದಂದು ಅತಿ ಕಠಿಣ ಶಿಕ್ಷೆಗೊಳಗಾಗುವವರು ಚಿತ್ರ (ಫೋಟೋ, ರೂಪ) ನಿರ್ಮಿಸುವವರಾಗಿದ್ದಾರೆ.” (ಬುಖಾರಿ : 5950, ಮುಸ್ಲಿಮ್ : 2109)
ಪ್ರಸ್ತುತ ಕಾಲಘಟ್ಟದ ಸೌದಿ ಅರೇಬಿಯಾದ ಅಗ್ರಗಣ್ಯ ವಿದ್ವಾಂಸರಾಗಿರುವ ಅಶ್ಶೈಖ್ ಸಾಲಿಹ್ ಅಲ್ ಫೌಝಾನ್ (حَفِظَهُ اللَّهُ) ರೊಂದಿಗೆ ಪ್ರಶ್ನಿಸಲಾಯಿತು :
ಮೊಬೈಲ್ ಫೋನುಗಳನ್ನು ಬಳಸಿಕೊಂಡು (ಆತ್ಮವಿರುವವುಗಳ) ಫೋಟೋ ತೆಗೆಯುವುದರ ವಿಧಿಯೇನು? ಈ ಕುರಿತಂತೆ ಕೆಲವು ಜನರು ಇದು ಕೇವಲ ನೆರಳಿನ ಸೆರೆಹಿಡಿಯುವಿಕೆ ಮಾತ್ರವಾಗಿದೆ ಮತ್ತು ಅದರಲ್ಲಿ ಯಾವುದೇ ನಿಷೇಧವಿಲ್ಲ ಎಂದು ಹೇಳುತ್ತಾರೆ, ಹಾಗಾಗಿ ಅದರ ವಿಧಿಯೇನು?
ಉತ್ತರ : ಅವನಿಗೆ (ಅವನ ಸ್ವೇಚ್ಛೆಗೆ) ಅದರಲ್ಲಿ ಯಾವುದೇ ನಿಷೇಧವಿಲ್ಲ. ಇನ್ನು ಸುನ್ನತ್ ಮತ್ತು ಪುರಾವೆಗಳ ಪ್ರಕಾರ (ಹೇಳುವುದಾದರೆ), ಫೋಟೋ ತೆಗೆಯುವುದು/ನಿರ್ಮಿಸುವುದು ಸಾರ್ವತ್ರಿಕವಾಗಿ ನಿಷಿದ್ಧವಾಗಿದೆ ಹಾಗೂ ಚಿತ್ರಗಾರನು ಶಾಪಗ್ರಸ್ತನಾಗಿರುತ್ತಾನೆ. ತೀರ್ಪಿನ ದಿನದಂದು ಆತನು ಕಠೋರ ಶಿಕ್ಷೆಯನ್ನು ಪಡೆಯುತ್ತಾನೆ. ಹಾಗಾಗಿ ಈ ಸಾರ್ವತ್ರಿಕತೆಯಿಂದ ಮೊಬೈಲ್ ಫೋನನ್ನು ಯಾವುದು ಹೊರತುಪಡಿಸುತ್ತದೆ? ರಸೂಲ್ (H) ರವರು ಚಿತ್ರ ರಚಿಸುವುದನ್ನು ಯಾವುದೇ ರೀತಿಗಳಲ್ಲೂ ವಿನಾಯಿತಿಯಿಲ್ಲದೆ ನಿಷೇಧಿಸಿದ್ದಾರೆ, ಅದು ಮೊಬೈಲ್ ಫೋನಿನ ಮೂಲಕವಾಗಲಿ, ಕ್ಯಾಮೆರಾ ಮೂಲಕವಾಗಲಿ, ಕೈ ಮೂಲಕವಾಗಲಿ ಅಥವಾ ಚಿತ್ರಬರೆಯುವ ಮೂಲಕವಾಗಲಿ, ಅವರು ಅದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ರಸೂಲ್ (H) ರವರು ಹೇಳಿರುವುದನ್ನು ನಿರ್ಲಕ್ಷಿಸಿ ರಸೂಲ್ (H) ರವರನ್ನು ನೆಟ್ಟಗೆಗೊಳಿಸಲು ಪ್ರಯತ್ನಿಸಲು ಅವನ್ಯಾರು?
ಅದನ್ನು ಹೊರತುಪಡಿಸಿ ಹಿರಿಯ ವಿದ್ವಾಂಸರು (ಮುಹಕ್ಕಿಕೀನ್‌ಗಳು) ಅನಿವಾರ್ಯತೆಯ ಸಂದರ್ಭಗಳಲ್ಲಿ (ಉದಾ : ಪಾಸ್‌ಪೋರ್ಟ್, ಗುರುತಿನ ಚೀಟಿ ಮುಂತಾದವುಗಳಿಗೆ) ವಿನಾಯಿತಿ ನೀಡಿದ್ದಾರೆ. ಒಂದುವೇಳೆ ಒರ್ವ ವ್ಯಕ್ತಿಗೆ ಅನಿವಾರ್ಯವಾಗಿ ಫೋಟೋ ತೆಗೆಯುವುದರ ಅಗತ್ಯವಿದ್ದರೆ, ಆಗ ಆತನ ಅನಿವಾರ್ಯತೆಯಿಂದಾಗಿ, ಇದು (ಫೋಟೋ ತೆಗೆಯುವುದನ್ನು) ಅನುಮತಿಸಲಾಗಿದೆ. ಅಲ್ಲಾಹುವಿನ ವಚನದ ಕಾರಣದಿಂದಾಗಿ :
﴿ وَقَدْ فَصَّلَ لَكُم مَّا حَرَّمَ عَلَيْكُمْ إِلَّا مَا اضْطُرِرْتُمْ إِلَيْهِ ﴾
“ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದನ್ನು ಅವನು ಈಗಾಗಲೇ ನಿಮಗೆ ವಿವರಿಕೊಟ್ಟಿರುವನು. ಆದರೆ ನೀವು ನಿರ್ಭಂಧಿತರಾಗುವುದರ ಹೊರತು…” (ಕುರ್‌ಆನ್ 6 : 119)
ಇನ್ನು ಹವ್ಯಾಸವಾಗಿಯೋ ಅಥವಾ ಕಲೆಯ ರೂಪವಾಗಿಯೋ ಕ್ಯಾಮರಾ, ಕೈ ಅಥವಾ ಯಾವುದೇ ವಸ್ತುವನ್ನು ಉಪಯೋಗಿಸಿಕೊಂಡು ಫೋಟೋ ತೆಗೆಯುವುದಾದರೆ ಅದು ಹರಾಮ್ಆಗಿದೆ. ಕೇವಲ ಅನಿವಾರ್ಯತೆಯ ಸಂದರ್ಭವನ್ನು ಹೊರತುಪಡಿಸಿ ಇದು ಅನುಮತಿಸಲಾಗಿಲ್ಲ. ಅನಿವಾರ್ಯತೆಗೆ ಅನುಗುಣವಾಗಿ ಇದೊಂದು ವಿನಾಯಿತಿಯಾಗಿದೆ. ಅನಿವಾರ್ಯಕ್ಕಾಗಿ ಮಾತ್ರ ಇದೊಂದು ವಿನಾಯಿತಿಯಾಗಿದೆ.
ಇಮಾಮ್ ಅಶ್ಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ಬಾನಿ (V) ಹೇಳಿದರು :
“ಒಂದು ಕಾಲವು ಬರಲಿದೆ! ಅಂದು ಸಾಮಾನ್ಯ ಮುಸ್ಲಿಮರು ಅದರಲ್ಲೂ ಅವರ ಪೈಕಿಯ ಸಲಫಿಗಳು ಕೂಡ (ಆತ್ಮವಿರುವವುಗಳ) ಚಿತ್ರಗಳನ್ನು (ಫೋಟೊ ತೆಗೆಯುವುದನ್ನು) ಅನುಮತಿಸಲ್ಪಟ್ಟ ಕಾರ್ಯವೆಂದು ಪರಿಗಣಿಸುವುದರ ಬಗ್ಗೆ ನಾನು ಹೆಚ್ಚು ಭಯಪಡುತ್ತೇನೆ. ವಿಶೇಷವಾಗಿ ಅವರ ಪೈಕಿ ಇರುವವರು ಕೈಯಿಂದ ಬಿಡಿಸಿದ ಚಿತ್ರ ಮತ್ತು ಫೋಟೋಗಳ (ಛಾಯಾಚಿತ್ರಗಳ) ಮಧ್ಯೆ ವ್ಯತ್ಯಾಸವನ್ನು (ಅವೆರಡನ್ನೂ ಬೇರೆ ಬೇರೆಯಾಗಿಯೇ) ಕಾಣುವರು . ಇದು ಫೋಟೊ ಎಂದೂ ಇದಕ್ಕೆ (ಕೇವಲ) ಒಂದು ಬಟನ್ ಒತ್ತುವುದು ಮಾತ್ರವೇ ಮಾಡಬೇಕಾಗಿದೆಯೆಂದೂ (ಆ ಮೂಲಕ) ಫೋಟೊ (ಚಿತ್ರ) ಹೊರಬರುವುದೆಂದೂ ಅವರು ಹೇಳುವರು.”
ಮೂಲ : ಸಿಲ್‌ಸಿಲತುಲ್ ಹುದಾ ವನ್ನೂರ್ : 393
ಅನುವಾದ : ಅಬೂ ಹಮ್ಮಾದ್