w
ಭಾಷೆಯಲ್ಲಿ ಅಕೀದಃ ಎಂಬುದರ ಅರ್ಥ :
ಇದು ‘ಅಲ್-ಅಕ್‍ದ್’ (العَقْدُ) ಎಂಬ ಪದದಿಂದ ಪಡೆಯಲಾಗಿದೆ. ಅಂದರೆ ಒಂದು ವಸ್ತುವನ್ನು ಗಂಟು ಹಾಕಿ ದೃಢಗೊಳಿಸುವುದು ಎಂದಾಗಿದೆ. ಯಾವುದಾದರೊಂದರ ಮೇಲೆ ನಾನು ಅಕೀದಃ ಹೊಂದಿರುವೆನು (ಅಂದರೆ) : ನನ್ನ ಹೃದಯ ಹಾಗೂ ಮನಸ್ಸು ಅದರ ಮೇಲೆ ದೃಢವಾಗಿದೆ ಎಂದರ್ಥ.
وَالْعَقِيدَةُ : مَا يَدِينُ بِهِ الْإِنْسَانُ
ಅಕೀದಃವೆಂದರೆ ಓರ್ವ ವ್ಯಕ್ತಿಯು ಯಾವುದನ್ನು ತನ್ನ ಧರ್ಮವಾಗಿ ಸ್ವೀಕರಿಕೊಳ್ಳುವನೋ ಅದಾಗಿದೆ. (ಉದಾಹರಣೆಗೆ) ಹೇಳುವುದಾದರೆ :
لَهُ عَقِيدَةٌ حَسَنَةٌ. أَيْ : سَالِمَةٌ مِنَ الشَّكِّ
“ಅವನಿಗೆ ಸರಿಯಾದ ಅಕೀದಃವಿದೆ” ಅಂದರೆ (ಅವನ ವಿಶ್ವಾಸವು) ಸಂಶಯಗಳಿಂದ ಮುಕ್ತವಾಗಿದೆ ಎಂದರ್ಥ.
وَالْعَقِيدَةُ : عَمَلٌ قَلْبِيٌّ ، وَهِيَ إِيمَانُ الْقَلْبِ بِالشَّيْءِ ، وَتَصْدِيقُهُ بِهِ
ಅಕೀದಃ ಎಂಬುದು ಹೃದಯದ ಒಂದು ಕ್ರಿಯೆಯಾಗಿದೆ ಹಾಗೂ ಹೃದಯದೊಳಗೆ ಯಾವುದಾದರೊಂದರ ಮೇಲೆ ವಿಶ್ವಾಸವಿಡುವುದು ಹಾಗೂ ಅದನ್ನು ಸತ್ಯವೆಂದು ದೃಢೀಕರಿಸುವುದಾಗಿದೆ.
ಶರೀಅತ್‍ನಲ್ಲಿ ಅಕೀದಃ ಎಂಬುದರ ಅರ್ಥ :
ಅದು ಅಲ್ಲಾಹುವಿನಲ್ಲಿ, ಅವನ ಮಲಕ್‍ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅಂತ್ಯ ದಿನದಲ್ಲಿ ಹಾಗೂ ಖದರ್‌ನಲ್ಲಿ (ವಿಧಿಯಲ್ಲಿ) ಅದರ ಒಳಿತು ಮತ್ತು ಕೆಡುಕುಗಳಲ್ಲಿ- ವಿಶ್ವಾಸವಿಡುವುದಾಗಿದೆ. ಇವುಗಳನ್ನು ಈಮಾನಿನ ಸ್ತಂಭಗಳೆಂದು (أَرْكَانُ الْإِيمَان) ಎಂದು ಕರೆಯಲಾಗುತ್ತದೆ.
ಶರೀಅತನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ :
1) ವಿಶ್ವಾಸಗಳು (اعْتِقَادِيَّاتٌ)
2) ಕರ್ಮಗಳು. (عَمَلِيَّاتٌ)
1) ವಿಶ್ವಾಸಗಳು (الْاعْتِقَادِيَّاتُ) : ಇದು ಕರ್ಮವನ್ನು ನಿರ್ವಹಿಸುವ ವಿಧಾನ ಮತ್ತು ಕ್ರಮಕ್ಕೆ (ಅಂದರೆ ಕರ್ಮವನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಸುವ ವಿಧಾನಗಳಿಗೆ) ಸಂಬಂಧವಿಲ್ಲದ ವಿಚಾರಗಳಾಗಿವೆ. ಉದಾಹರಣೆಗೆ ಮಹೋನ್ನತನಾದ ಅಲ್ಲಾಹುವಿನ ರುಬೂಬಿಯ್ಯತ್‍ನ (ಪ್ರಭುತ್ವದ) ಮೇಲೆ ವಿಶ್ವಾಸ, ಅವನನ್ನು ಮಾತ್ರ ಆರಾಧಿಸಬೇಕೆಂಬ ಬಾಧ್ಯತೆ ಹಾಗೂ ಈ ಮೇಲೆ ಉಲ್ಲೇಖಿಸಲಾದ ಈಮಾನಿನ ಇತರ ಸ್ತಂಭಗಳಲ್ಲಿರುವ ವಿಶ್ವಾಸ (ಇತ್ಯಾದಿ). ಇವುಗಳನ್ನು ಮೂಲ ಬುನಾದಿಗಳೆಂದು (أَصْلِيَّةٌ) ಕರೆಯಲಾಗುತ್ತದೆ.
2) ಕರ್ಮಗಳು (الْعَمَلِيَّاتُ) : ಇದು ಕರ್ಮಗಳನ್ನು ಹೇಗೆ ನಿರ್ವಹಿಸುವುದು (ಎಂದು ತಿಳಿಸುವ ವಿಧಾನಗಳಿಗೆ) ಸಂಬಂಧಿಸಿದ ವಿಚಾರಗಳಾಗಿವೆ. ಉದಾಹರಣೆಗೆ : ನಮಾಝ್, ಝಕಾತ್, ಉಪವಾಸ ಹಾಗೂ ಇನ್ನಿತರ ಕರ್ಮಗಳಿಗೆ ಸಂಬಂಧಿಸಿದ ವಿಧಿ-ವಿಧಾನಗಳು. ಇವುಗಳನ್ನು ಶಾಖೆಗಳೆಂದು (فَرْعِيَّةٌ) ಕರೆಯಲಾಗುತ್ತದೆ, ಏಕೆಂದರೆ (ವಿಶ್ವಾಸಗಳು) ಸರಿಯಿದ್ದರೂ ಅಥವಾ ಸರಿಯಿಲ್ಲದಿದ್ದರೂ ಇವುಗಳು (ಕರ್ಮಗಳು) ಅವುಗಳ (ವಿಶ್ವಾಸವೆಂಬ ಮೂಲ ಬುನಾದಿಯ) ಮೇಲೆ ಸ್ಥಾಪಿತಗೊಂಡಿದೆ (ಅರ್ಥಾತ್ ಕರ್ಮಗಳು ವಿಶ್ವಾಸದ ಮೇಲೆ ಸ್ಥಾಪಿತವಾಗಿದೆ. ಕರ್ಮಗಳು ಸರಿಯಾದ ವಿಶ್ವಾಸದ ಮೇಲೆ ನೆಲೆನಿಂತರೆ ಮಾತ್ರ ಅದು ಸರಿಯಾದುದಾಗಿದೆ, ಇಲ್ಲದಿದ್ದರೆ ಅದು ವ್ಯರ್ಥವಾಗಿ ಬಿಡುವುದು) (ಶರ್ಹ್ ಅಲ್-ಅಕೀದಃ ಅಸ್ಸಫಾರೀನಿಯ್ಯಃ 1/4)
ಹಾಗಾಗಿ, ಸರಿಯಾದ ಅಕೀದಃ ಎಂಬುದು ದೀನ್‍ನ ಮೂಲ ಬುನಾದಿಯಾಗಿದೆ. ಅದರ ಮೂಲಕ ಮಾತ್ರವೇ ಕರ್ಮಗಳು ಸರಿಯಾಗುತ್ತವೆ. ಮಹೋನ್ನತನಾದ ಅವನು (ಅಲ್ಲಾಹು) ಹೇಳಿದಂತೆ :
﴿ فَمَنْ كَانَ يَرْجُو لِقَاءَ رَبِّهِ فَلْيَعْمَلْ عَمَلًا صَالِحًا وَلَا يُشْرِكْ بِعِبَادَةِ رَبِّهِ أَحَدًا ٠١١ ﴾
“ಆದ್ದರಿಂದ ಯಾರು ತನ್ನ ರಬ್ಬ್‌ನ (ಸೃಷ್ಟಿಕರ್ತನೂ ಜಗದೊಡೆಯನಾದ ಪರಿಪಾಲಕನ) ಭೇಟಿಯನ್ನು ನಿರೀಕ್ಷಿಸುತ್ತಾನೋ ಅವನು ಒಳ್ಳೆಯ ಕಾರ್ಯವನ್ನು ಮಾಡಲಿ ಮತ್ತು ತನ್ನ ರಬ್ಬ್‌ನ ಆರಾಧನೆಯಲ್ಲಿ ಬೇರೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ.” (ಸೂರಃ ಅಲ್-ಕಹ್‍ಫ್ : 110)
﴿ وَلَقَدْ أُوحِيَ إِلَيْكَ وَإِلَى الَّذِينَ مِن قَبْلِكَ لَئِنْ أَشْرَكْتَ لَيَحْبَطَنَّ عَمَلُكَ وَلَتَكُونَنَّ مِنَ الْخَاسِرِين ٦٥ ﴾
“ಖಂಡಿತವಾಗಿಯೂ ನಿಮಗಿಂತ ಮುಂಚಿನವರಿಗೆ (ಅಲ್ಲಾಹುವಿನ ಪ್ರವಾದಿಗಳಿಗೆ) ಅವತೀರ್ಣಗೊಳಿಸಲಾದಂತೆ, ನಿಮಗೂ ಅವತೀರ್ಣಗೊಳಿಸಲಾಗಿದೆ (ಓ ಪ್ರವಾದಿಯವರೇ!) (ಅದೇನೆಂದರೆ) “ಒಂದುವೇಳೆ ನೀವು ಅಲ್ಲಾಹುವಿನೊಂದಿಗೆ ಆರಾಧನೆಯಲ್ಲಿ ಇತರರನ್ನು ಸಹಭಾಗಿಗಳಾಗಿ ಮಾಡುವುದಾದರೆ ಖಂಡಿತವಾಗಿಯೂ ನಿಮ್ಮ (ಸರ್ವ) ಕರ್ಮಗಳೂ ನಿಷ್ಫಲವಾಗಿಬಿಡುವುದು ಹಾಗೂ ನಿಶ್ಚಯವಾಗಿಯೂ ನೀವು ನಷ್ಟಹೊಂದಿದವರ ಪೈಕಿ ಸೇರುವವರಾಗುವಿರಿ.” (ಸೂರಃ ಅಝ್ಝುಮರ್ : 65)
﴿ فَاعْبُدِ اللَّـهَ مُخْلِصًا لَّهُ الدِّينَ ٢ أَلَا لِلَّـهِ الدِّينُ الْخَالِصُ ﴾
“ಅಲ್ಲಾಹುವಿಗೆ ಮಾತ್ರ ಮುಡಿಪಾಗಿಟ್ಟುಕೊಂಡು ದೀನ್‍ನ ಕರ್ಮಗಳನ್ನು ಮಾಡುವ ಮೂಲಕ ಅಲ್ಲಾಹುವನ್ನು ಏಕಮಾತ್ರವಾಗಿ ಆರಾಧಿಸಿರಿ. ಖಂಡಿತವಾಗಿಯೂ ದೀನ್ (ಆರಾಧನೆ ಹಾಗೂ ವಿಧೇಯತೆ) ಅಲ್ಲಾಹುವಿಗೆ ಮಾತ್ರವಾಗಿದೆ.” (ಸೂರಃ ಅಝ್ಝುಮರ್ : 2-3)
ಹಾಗಾಗಿ, ಈ ಆದರಣೀಯ ಆಯತ್‍ಗಳು ಹಾಗೂ ಆ ಅರ್ಥದಲ್ಲಿ ಬಂದಿರುವ ಹಲವಾರು ಉಲ್ಲೇಖಗಳು ಸಾಬೀತುಪಡಿಸುವುದೇನೆಂದರೆ :
ಶಿರ್ಕ್‍ನಿಂದ (ಅಲ್ಲಾಹುವಿನ ಸಹಭಾಗಿತ್ವದಿಂದ) ಮುಕ್ತವಾಗದ ಹೊರತು ಕರ್ಮಗಳು (ಅಲ್ಲಾಹುವಿನ ಬಳಿ) ಸ್ವೀಕೃತವಾಗದು. ಇದಕ್ಕಾಗಿದೆ (ಎಲ್ಲಾ) ಸಂದೇಶವಾಹಕರು ಮೊತ್ತಮೊದಲಾಗಿ ಅಕೀದಃವನ್ನು (ವಿಶ್ವಾಸವನ್ನು) ಸರಿಪಡಿಸುವ ಮೂಲಕ ಅದಕ್ಕೆ (ಹೆಚ್ಚು) ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡಿರುವುದು. ಆದ್ದರಿಂದ ಪ್ರಥಮವಾಗಿ ಅವರು ತಮ್ಮ ಜನತೆಯನ್ನು ಆಹ್ವಾನಿಸಿದ್ದು ಏಕೈಕನಾದ ಅಲ್ಲಾಹುವಿನ ಆರಾಧನೆಯೆಡೆಗಾಗಿತ್ತು ಹಾಗೂ ಅವನ ಹೊರತು ಇತರೆಲ್ಲದರ ಆರಾಧನೆಗಳನ್ನು ತೊರೆಯಬೇಕು ಎಂಬುದಾಗಿತ್ತು. ಮಹೋನ್ನತನಾದ ಅವನು ಹೇಳಿದಂತೆ :
﴿ وَلَقَدْ بَعَثْنَا فِي كُلِّ أُمَّةٍ رَّسُولًا أَنِ اعْبُدُوا اللَّـهَ وَاجْتَنِبُوا الطَّاغُوتَ ﴾
“ಅಲ್ಲಾಹುವನ್ನು ಮಾತ್ರ ಆರಾಧಿಸಿರಿ ಹಾಗೂ ತಾಗೂತನ್ನು (ಅಲ್ಲಾಹುವಿನ ಹೊರತು ಇತರೆಲ್ಲಾ ಆರಾಧ್ಯರನ್ನು) ವರ್ಜಿಸಿರಿ” (ಎಂಬ ಸಂದೇಶ ನೀಡುವ) ಒಂದು ಸಂದೇಶವಾಹಕರನ್ನು ಎಲ್ಲಾ ಜನತೆಗೂ ನಾವು ಖಂಡಿತವಾಗಿಯೂ ನಿಯೋಗಿಸಿರುವೆವು.” (ಸೂರಃ ಅನ್ನಹ್ಲ್ : 36)
ಸರ್ವ ಪ್ರವಾದಿಗಳೂ ತಮ್ಮ ಜನತೆಗೆ ಮೊತ್ತಮೊದಲಾಗಿ ಉಪದೇಶಿಸಿದ್ದು :
﴿ اعْبُدُوا اللَّـهَ مَا لَكُم مِّنْ إِلَـٰهٍ غَيْرُهُ ﴾
“ಅಲ್ಲಾಹುವನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಯಾವುದೇ ಇಲಾಹ್ (ಆರಾಧನೆಗೆ ಅರ್ಹನು) ಇಲ್ಲ.” (ಸೂರಃ ಅಲ್-ಅಅ್‍ರಾಫ್ : 59) – ಎಂದಾಗಿತ್ತು.
ಪ್ರವಾದಿಗಳಾದ ನೂಹ್, ಹೂದ್, ಸಾಲಿಹ್, ಶುಐಬ್ ಹಾಗೂ ಇನ್ನಿತರ ಪ್ರವಾದಿಗಳೆಲ್ಲರೂ ತಮ್ಮ ಜನರೊಂದಿಗೆ ಹೇಳಿರುವುದು ಇದೇ ಮಾತುಗಳನ್ನಾಗಿತ್ತು :
﴿ وَإِلَىٰ عَادٍ أَخَاهُمْ هُودًا ۗ قَالَ يَا قَوْمِ اعْبُدُوا اللَّـهَ مَا لَكُم مِّنْ إِلَـٰهٍ غَيْرُهُ ﴾
“ಆದ್ (ಜನತೆಯೆಡೆಗೆ) (ನಾವು) ಅವರ ಸಹೋದರ ಹೂದ್‍ಅನ್ನು ಕಳುಹಿಸಿದೆವು. ಅವರು (ತಮ್ಮ ಜನರೊಡನೆ) ಹೇಳಿದರು : “ಓ ನನ್ನ ಜನರೇ! ಅಲ್ಲಾಹುವನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಯಾವುದೇ ಇಲಾಹ್ (ಆರಾಧನೆಗೆ ಅರ್ಹನು) ಇಲ್ಲ.” (ಸೂರಃ ಅಲ್-ಅಅ್‍ರಾಫ್ 7 : 65)
﴿ وَإِلَىٰ ثَمُودَ أَخَاهُمْ صَالِحًا ۗ قَالَ يَا قَوْمِ اعْبُدُوا اللَّـهَ مَا لَكُم مِّنْ إِلَـٰهٍ غَيْرُهُ ﴾
“ಸಮೂದ್ (ಜನತೆಯೆಡೆಗೆ) (ನಾವು) ಅವರ ಸಹೋದರ ಸಾಲಿಹ್‍ರನ್ನು ಕಳುಹಿಸಿದೆವು. ಅವರು (ತಮ್ಮ ಜನರೊಡನೆ) ಹೇಳಿದರು : “ಓ ನನ್ನ ಜನರೇ! ಅಲ್ಲಾಹುವನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಯಾವುದೇ ಇಲಾಹ್ (ಆರಾಧನೆಗೆ ಅರ್ಹನು) ಇಲ್ಲ.” (ಸೂರಃ ಅಲ್-ಅಅ್‍ರಾಫ್ : 73)
﴿ وَإِلَىٰ مَدْيَنَ أَخَاهُمْ شُعَيْبًا ۗ قَالَ يَا قَوْمِ اعْبُدُوا اللَّـهَ مَا لَكُم مِّنْ إِلَـٰهٍ غَيْرُهُ ﴾
“ಮದ್‍ಯನ್ (ಜನತೆಯೆಡೆಗೆ) (ನಾವು) ಅವರ ಸಹೋದರ ಶುಐಬ್‍ನನ್ನು ಕಳುಹಿಸಿದೆವು. ಅವರು (ತಮ್ಮ ಜನರೊಡನೆ) ಹೇಳಿದರು : “ಓ ನನ್ನ ಜನರೇ! ಅಲ್ಲಾಹುವನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಯಾವುದೇ ಇಲಾಹ್ (ಆರಾಧನೆಗೆ ಅರ್ಹನು) ಇಲ್ಲ.” (ಸೂರಃ ಅಲ್-ಅಅ್‍ರಾಫ್ : 85)
ಪ್ರವಾದಿಯಾಗಿ ನಿಯೋಗಿಸಲ್ಪಟ್ಟ ಬಳಿಕ ಪ್ರವಾದಿ (H) ರವರು ಹದಿಮೂರು ವರ್ಷಗಳ ಕಾಲ ಮಕ್ಕಾದಲ್ಲಿ ಉಳಿದುಕೊಂಡು ಜನರನ್ನು ತೌಹೀದ್‍ನೆಡೆಗೆ ಹಾಗೂ (ಅವರ) ಅಕೀದಃವನ್ನು ಸರಿಪಡಿಸುವುದರೆಡೆಗೆ ಕರೆ ನೀಡಿದರು. ಏಕೆಂದರೆ ಇವುಗಳು (ಅಕೀದಃ ಮತ್ತು ತೌಹೀದ್) ದೀನ್‍ನ ಮೂಲ ಬುನಾದಿಯಾಗಿದೆ.
(ಸಲಫೀ) ದಾಈಗಳು (ಇಸ್ಲಾಮಿನ ಪ್ರಚಾರಕರು) ಹಾಗೂ ಸುಧಾರಕರು ಎಲ್ಲಾ ಕಾಲಘಟ್ಟದಲ್ಲೂ ಪ್ರವಾದಿ ಮತ್ತು ಸಂದೇಶವಾಹಕರ ಮಾದರಿಯನ್ನು ಅನುಸರಿಸಿದರು. ಏಕೆಂದರೆ ಅವರು (ಪ್ರವಾದಿ ಮತ್ತು ಸಂದೇಶವಾಹಕರು) ತೌಹೀದ್‍ನೆಡೆಗೆ ಆಹ್ವಾನಿಸುವ ಮೂಲಕ ಹಾಗೂ ಅಕೀದಃ ಸರಿಪಡಿಸುವ ಮೂಲಕ ತಮ್ಮ ದಅ್‍ವತ್ಅನ್ನು (ಸಂದೇಶ ಪ್ರಚಾರವನ್ನು) ಆರಂಭಿಸಿರುವರು, ಆ ನಂತರ ಅವರು ದೀನ್‍ನ ಇನ್ನಿತರ ಕಾರ್ಯಗಳಾದ ಆಜ್ಞೆ ನಿಯಮಗಳೆಡೆಗೆ ಗಮನ ಹರಿಸಿರುವರು.
-ಶೈಖ್ ಸಾಲಿಹ್ ಅಲ್ ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
(ಅಕೀದಃ ಅತ್ತೌಹೀದ್ ಪುಟ : 9 – 10, ಅನುವಾದ : ಅಬೂ ಹಮ್ಮಾದ್)