ಉಗ್ರವಾದಿ ಹಾಗೂ ತೀವ್ರವಾದಿಗಳ ವಿರುದ್ಧ ಸೌದಿ ಅರೇಬಿಯಾದ ಗ್ರಾಂಡ್ ಮುಫ್ತೀ ಅಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲ ಆಲ್ ಶೈಖ್ حفظه الله ರವರು ನೀಡಿರುವ ಎಚ್ಚರಿಕೆಗಳು
ಪ್ರಶ್ನೆ :
ಇಂದಿನ ಕಾಲದಲ್ಲಿ ಕೆಲವರು ಮುಸ್ಲಿಮ್ ಯುವಕರನ್ನು ಹಾಗೂ ಅವರಲ್ಲಿರುವ ಸಾಮಾನ್ಯ ಮುಸ್ಲಿಮರನ್ನು ಹೊಸದೊಂದು ತತ್ವಾದರ್ಶಗಳೆಡೆಗೆ ಮತ್ತು (ಕೆಲವೊಂದು) ಸಂಘಟನಾ ಗುಂಪುಗಳ ಆದರ್ಶದೆಡೆಗೆ ಆಹ್ವಾನವನ್ನು ನೀಡುತ್ತಾ ಆ ಮೂಲಕ ಅವರನ್ನು ಗುಂಪುಗಳನ್ನಾಗಿ, ಸಂಘಟನೆಗಳನ್ನಾಗಿ ವಿಭಜಿಸುತ್ತಾರೆ ಮತ್ತು ಇದೊಂದು ಸರಿಯಾದ (ಆದರ್ಶ) ಮಾರ್ಗವಾಗಿದೆ ಎಂದು ಅವರು ಹೇಳುತ್ತಾರೆ. ಅಂದರೆ :- ಜಬ್’ಹತುನ್ನುಸ್ರ, ಐಸಿಸ್, ಅಲ್-ಖಾಯಿದ ಮತ್ತು ಇಖ್ವಾನುಲ್ ಮುಸ್ಲಿಮೀನ್ (ಮುಸ್ಲಿಮ್ ಬ್ರದರ್’ಹುಡ್) ಮುಂತಾದವರನ್ನು ( ಅವರ ಸಂಘಟನೆಗಳೊಂದಿಗೆ) ಜೊತೆ ಸೇರಿ ಅವರೊಂದಿಗೆ ಕೈ ಜೋಡಿಸುವುದರ ಬಗ್ಗೆ. ಅವುಗಳ ಕುರಿತು ತಮ್ಮ ಅಭಿಪ್ರಾಯವೇನು?
ಉತ್ತರ:
ಮುಫ್ತೀ ಅಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲ ಆಲ್ ಶೈಖ್ حفظه الله ಉತ್ತರಿಸುತ್ತಾರೆ :
ಇಂದಿನ (ಆಧುನಿಕ) ಕಾಲದ ಈ (ಮೇಲೆ ತಿಳಿಸಿದ) ಗುಂಪುಗಳೆಲ್ಲವೂ ದಾರಿಗೆಟ್ಟ (ಸನ್ಮಾರ್ಗದಿಂದ ವ್ಯತಿಚಲಿಸಿದ) ಗುಂಪುಗಳಾಗಿವೆ. ಅವರಿಗೂ ಇಸ್ಲಾಮಿಗೂ ಕಿಂಚಿತ್ತೂ ಸಂಬಂಧವಿಲ್ಲವೆಂದು ನೀನು ಅವರನ್ನು ಸರಿಯಾಗಿ ಗಮನಿಸಿದರೆ (ಅವರ ಬಗ್ಗೆ) ನಿನಗೆ ಮನವರಿಕೆಯಾಗುವುದು.
ತನ್ನ ಸ್ವಂತ ಅಭಿಪ್ರಾಯ ಮತ್ತು ದೇಹೇಚ್ಚೆಗಳಿಂದ ಇಸ್ಲಾಮನ್ನು ವ್ಯಾಖ್ಯಾನಿಸಿ ಆ ಮೂಲಕ ಜನರನ್ನು ವಂಚಿಸುತ್ತಾರೆ.
ನಿಸ್ಸಂಶಯವಾಗಿಯೂ ಅವರು ದಾರಿಗೆಟ್ಟವರಾಗಿರುವರು. ರಕ್ತಪಾತ ನಡೆಸುವುದನ್ನು ಅವರು ಧರ್ಮಸಮ್ಮತಗೊಳಿಸಿರುವರು, ಜನರ ಪಾವಿತ್ರ್ಯತೆಯನ್ನು ಹಾಳುಗೆಡವಿ ಸಂಪತ್ತನ್ನು ಕೊಳ್ಳೆ ಹೊಡೆದು ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುತ್ತಾರೆ.
ಸಹೋದರರೇ, ಇದರ ಹಿಂದೆ ಯಾರೇ ಇದ್ದರೂ ಇವುಗಳೆಲ್ಲವೂ ಮಿಥ್ಯ (ಉಗ್ರವಾದ, ತೀವ್ರವಾದ ಮತ್ತು ದಾರಿಗೆಟ್ಟ) ಮಾರ್ಗಗಳಾಗಿವೆ. ಅವರಲ್ಲಿ ಅಥವಾ ಅವರನ್ನು ಅನುಸರಿಸುವವರಲ್ಲಿ ಯಾವುದೇ ಒಳಿತಿಲ್ಲ.
ಯಾರು ನಮ್ಮ ಯುವಕರನ್ನು ಈ ದಾರಿಗೆಟ್ಟ ಸಂಘಟನೆಗಳೊಂದಿಗೆ (ಐಸಿಸ್, ಅಲ್-ಖಾಯಿದ ಮುಂತಾದ ತೀವ್ರವಾದಿ ಗುಂಪುಗಳೊಂದಿಗೆ) ಸೇರಿಕೊಳ್ಳಲು ಆಹ್ವಾನವನ್ನು ನೀಡುತ್ತಾನೋ, ಖಂಡಿತವಾಗಿಯೂ ಅವನು (ದೊಡ್ಡ) ಪ್ರಮಾದವನ್ನು ಎಸಗಿರುವನು ಮತ್ತು (ಇಸ್ಲಾಮಿನ) ಸನ್ಮಾರ್ಗದಿಂದ (ಸ್ಪಷ್ಟವಾಗಿ) ದಾರಿತಪ್ಪಿದವನಾಗಿರುವನು.
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್
Reference: