ಪ್ರಶ್ನೆ : ಓ ಶೈಖ್ರವರೇ, ಪ್ರಶ್ನಿಸುವವನು – ತವಸ್ಸುಲ್, ಅದರ ವಿಧಗಳ ಬಗ್ಗೆ ಹಾಗೂ ಸಜ್ಜನರ ಪ್ರಾರ್ಥನೆಗಳ ಮೂಲಕ (ತವಸ್ಸುಲ್ ಮಾಡುವ ಬಗ್ಗೆ) ಕೇಳುತ್ತಾನೆ.
ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರು ಉತ್ತರಿಸುತ್ತಾರೆ : ತವಸ್ಸುಲ್ (ಅರ್ಥಾತ್ ಅಲ್ಲಾಹುವಿನ ಸಾಮಿಪ್ಯವನ್ನು ಅರಸುವುದು) ಎರಡು ವಿಧದಲ್ಲಿದೆ (ಅವುಗಳೆಂದರೆ) :
1) ಅನುಮತಿಸಲ್ಪಟ್ಟ ತವಸ್ಸುಲ್ ಮತ್ತು 2) ನಿಷೇಧಿಸಲ್ಪಟ್ಟ ತವಸ್ಸುಲ್.
ಅನುಮತಿಸಲ್ಪಟ್ಟ ತವಸ್ಸುಲ್ ಅಂದರೆ ಅಲ್ಲಾಹುವಿನ ನಾಮ ಗುಣ-ವಿಶೇಷಣೆಗಳ (ಅಸ್ಮಾಉಸ್ಸಿಫಾತ್ಗಳ) ಮೂಲಕ ಅಲ್ಲಾಹುವಿನೆಡೆಗೆ ತವಸ್ಸುಲ್ ಮಾಡುವುದು, ಅಥವಾ ಸತ್ಕರ್ಮಗಳ ಮೂಲಕ ತವಸ್ಸುಲ್ (ಮಾಡುವುದು), ಅಥವಾ ಜೀವಂತವಿರುವ, (ನಿನ್ನ ಮುಂದೆ) ಹಾಜರಿರುವ ವ್ಯಕ್ತಿಗಳೊಂದಿಗೆ ನಿನ್ನ ಕಾರ್ಯಗಳ (ಈಡೇರಿಕೆಗೆ) ನಿನಗಾಗಿ ಪ್ರಾರ್ಥಿಸಲು ವಿನಂತಿಸುವುದರ ಮೂಲಕ ತವಸ್ಸುಲ್ (ಮಾಡುವುದು). ಇವೆಲ್ಲವೂ ಸಮ್ಮತಾರ್ಹವಾಗಿದೆ.
ನಿಷೇಧಿಸಲ್ಪಟ್ಟ ತವಸ್ಸುಲ್ ಅಂದರೆ ಸೃಷ್ಟಿಗಿರುವ (ಅರ್ಥಾತ್ ಅಲ್ಲಾಹುವಿನ ಸಜ್ಜನ ದಾಸರ) ಮಹಿಮೆ ಹಾಗೂ ಉತ್ಕೃಷ್ಟ ಸ್ಥಾನದ ಮೂಲಕ, ಅಥವಾ ಅವರ ಹಕ್ಕುಗಳ ಮೂಲಕ ಅಥವಾ ಅವರ ವ್ಯಕ್ತಿತ್ವ ಅಥವಾ ಅವರ ಸದಾಚಾರ ಮತ್ತು ಧರ್ಮನಿಷ್ಠೆಯ ಮೂಲಕ ತವಸ್ಸುಲ್ ಮಾಡುವುದು. ಇದು ನಿಷಿದ್ಧವಾದ ತವಸ್ಸುಲ್ ಆಗಿದೆ. ಒಂದು ವೇಳೆ (ತಾನು) ತವಸ್ಸುಲ್ ಮಾಡುತ್ತಿರುವವರಿಗೆ ಯಾರಾದರೂ (ತನ್ನ) ಆರಾಧನೆಯಿಂದ (ಪ್ರಾರ್ಥನೆ, ಹರಕೆ ಮುಂತಾದ ಇಬಾದತ್) ಏನನ್ನಾದರೂ ಅರ್ಪಿಸಿದರೆ ಆಗ ಇದು ಶಿರ್ಕ್ ಅಲ್-ಅಕ್ಬರ್ (ದೊಡ್ಡ ಶಿರ್ಕ್) ಆಗುವುದು. ಜಾಹಿಲಿಯ್ಯಃದ ಜನರು (ಮಕ್ಕಾದ ಮುಶ್ರಿಕರು) ಯಾವುದರಲ್ಲಿದ್ದರೋ (ಅದಕ್ಕೆ ಇದು ಸರಿಸಮವಾಗಿದೆ) (ಅಲ್ಲಾಹು ಹೇಳುತ್ತಾನೆ) :
﴿ وَيَعْبُدُونَ مِن دُونِ اللَّـهِ مَا لَا يَضُرُّهُمْ وَلَا يَنفَعُهُمْ وَيَقُولُونَ هَـٰؤُلَاءِ شُفَعَاؤُنَا عِندَ اللَّـهِ ﴾
“ಅಲ್ಲಾಹುವಿನ ಹೊರತು ತಮಗೆ ಹಾನಿಯೋ, ಲಾಭವೋ ಮಾಡದವುಗಳನ್ನು ಅವರು ಆರಾಧಿಸುತ್ತಾರೆ. ಅವರು ಹೇಳುತ್ತಾರೆ ಇವರು ಅಲ್ಲಾಹುವಿನ ಬಳಿ ನಮ್ಮ ಶಿಫಾರಸುದಾರರಾಗಿರುವರು.” (ಕುರ್ಆನ್ 10 : 18)
(ಇಂದಿನ) ಬಹುತೇಕ ಗೋರಿಯಾರಾಧಕರು ಇರುವಂತೆ (ಅಂದಿನ ಮುಶ್ರಿಕರು ಕೂಡ ಇದ್ದರು) ; ಅವರು (ಗೋರಿಯಾರಾಧಕರು) ವಿವಿಧ ಆರಾಧನೆಗಳ ಮೂಲಕ ಮೃತರೊಂದಿಗೆ (ಸಜ್ಜನರೊಂದಿಗೆ) (ಅಲ್ಲಾಹುವಿನೆಡೆಗೆ) ಸಾಮಿಪ್ಯತೆಯನ್ನು ಬಯಸುತ್ತಾರೆ. ಮತ್ತು ಅವರು ಹೇಳುತ್ತಾರೆ “ಇವರು ಅಲ್ಲಾಹುವಿನ ಬಳಿ ನಮಗಾಗಿ ಶಿಫಾರಸು ಮಾಡುವರು” – ಇದು ಶಿರ್ಕ್ ಅಲ್-ಅಕ್ಬರ್ (ಇಸ್ಲಾಮಿನಿಂದ ಹೊರತಳ್ಳಲ್ಪಡುವ ದೊಡ್ಡ ಶಿರ್ಕ್) ಆಗಿದೆ.