ನೀವು ತಿನ್ನಿರಿ ಹಾಗೂ ಕುಡಿಯಿರಿ ಆದರೆ ದುಂದುಗಾರಿಕೆ ಮಾಡದಿರಿ

ಅಶ್ಶೈಖ್ ಸಾಲಿಹ್ ಅಲ್ ಉಸೈಮೀನ್ (رحمه الله) ಹೇಳಿದರು :

ಸಂಪತ್ತು ಎಂಬುದು ಅತಿಮುಖ್ಯವಾದ ವಸ್ತುವಾಗಿದೆ ಆದ್ದರಿಂದ ಅದನ್ನು ಅನಗತ್ಯ ಕಾರ್ಯದಲ್ಲಿ ವ್ಯರ್ಥಗೊಳಿಸುವುದು ಓರ್ವ ವ್ಯಕ್ತಿಗೆ ಸಮ್ಮತಾರ್ಹವಲ್ಲ.
ಅನಗತ್ಯವಾಗಿ ಸಂಪತ್ತನ್ನು ವ್ಯರ್ಥಗೊಳಿಸುವುದು ವಿವಿಧ ರೀತಿಯಲ್ಲಿದೆ ಅವುಗಳ ಪೈಕಿ : ಅದನ್ನು ಖರ್ಚು ಮಾಡುವುದರಲ್ಲಿ ದುಂದುವೆಚ್ಚ ಮಾಡುವುದು (ಸೇರಿದೆ), ಯಾಕೆಂದರೆ ದುಂದುವೆಚ್ಚ ಮಾಡುವುದು ನಿಷಿದ್ಧವಾಗಿದೆ. ಅದು ತಿನ್ನುವುದರಲ್ಲಾದರೂ ಕುಡಿಯುವುದರಲ್ಲಾದರೂ ಬಟ್ಟೆಗಳಲ್ಲಾದರೂ ವಾಹನಗಳಲ್ಲಾದರೂ ಮನೆಗಳಲ್ಲಾದರೂ ಸರಿ! ಯಾವಾಗ ಮನುಷ್ಯನು ಇತಿಮಿತಿ ಮೀರುತ್ತಾನೋ ಆಗ ಅವನು ತಪ್ಪಿತಸ್ಥನಾಗಿರುವನು. ಅಲ್ಲಾಹು ಹೇಳಿದಂತೆ :

“ನೀವು ತಿನ್ನಿರಿ ಹಾಗೂ ಕುಡಿಯಿರಿ ಆದರೆ ದುಂದುಗಾರಿಕೆ ಮಾಡದಿರಿ. ಖಂಡಿತವಾಗಿಯೂ ಅವನು (ಅಲ್ಲಾಹು) ದುಂದುಗಾರಿಕೆ ಮಾಡುವವರನ್ನು ಮೆಚ್ಚುವುದಿಲ್ಲ.” (ಕುರ್’ಆನ್ 7 : 31)

ಹಾಗೆಯೇ ಅನವಶ್ಯಕವಾಗಿ ಹಲವು ಬಟ್ಟೆಗಳನ್ನು ಖರೀದಿಸುವುದು (ಕೂಡ) ದುಂದುಗಾರಿಕೆಯಲ್ಲಿ ಒಳಪಡುತ್ತದೆ. ಇಂದು ಮಹಿಳೆಯರಲ್ಲಿ ಹಲವರು ಯಾವಾಗಲೆಲ್ಲ ವಿವಿಧ ಮಾದರಿಯ ಬಟ್ಟೆಗಳ ಪೈಕಿ ಯಾವುದಾದರೊಂದು (ಹೊಸ) ಮಾದರಿಯ ಬಟ್ಟೆಯು ಕಾಣಿಸಿಕೊಂಡರೆ, ಬಟ್ಟೆಗಳಿಂದ ಅವಳ ಮನೆ ತುಂಬಿದರೂ, ಆವಶ್ಯಕತೆಯಿಲ್ಲದಿದ್ದರೂ ಅದನ್ನು ಖರೀದಿಸಲು ಅವಳು ಹೊರಡುತ್ತಾಳೆ.

ಇನ್ನು ಮೊದಲು ಖರೀದಿ ಮಾಡಿದ ಬಟ್ಟೆಗಿಂತ ಕೊಂಚ ಭಿನ್ನವಾಗಿ ಯಾವುದಾದರೊಂದು ಕಾಣಿಸಿಕೊಂಡರೆ ಅದನ್ನು ಖರೀದಿಸಲು ಅತ್ಯವಸರದಿಂದ ಓಡುತ್ತಾಳೆ. ಹಾಗೂ ಅವರ ಪೈಕಿ ಇನ್ನೂ ಕೆಲವರು ಖರೀದಿಸಲು ಮತ್ತು ದುಂದುವೆಚ್ಚ ಮಾಡಲು ತನ್ನ ಗಂಡನ ಮೇಲೆ ಸ್ವಾಧೀನಪಡಿಸಿಕೊಳ್ಳುವಲ್ಲಿ ಶಕ್ತರಾಗಿರುತ್ತಾರೆ. ಆದ್ದರಿಂದ ತನ್ನ ಅಧೀನದಲ್ಲಿರುವವರ (ಮನೆಯವರ) ಬಗ್ಗೆ ಎಚ್ಚರ ವಹಿಸುವುದು (ಪ್ರತಿಯೊಬ್ಬ) ವ್ಯಕ್ತಿಯ ಮೇಲೆ ಕಡ್ಡಾಯವಾಗಿದೆ. ಈ ಮೂಲಕ ದುಂದುಗಾರಿಕೆಯಿಂದ ತನ್ನ ಪತ್ನಿಯನ್ನು ಅವನು ತಡೆಹಿಡಿಯಬಹುದು.

(ಶರ್ಹ್ ರಿಯಾದ್ ಅಸ್ಸಾಲಿಹೀನ್ 6 : 549 – 550)

“ಮಹಿಳೆಯು ತನ್ನ ಮೇಲ್ವಿಚಾರಕನಲ್ಲಿ (ತಂದೆ, ಸಹೋದರ ಅಥವಾ ಗಂಡನಲ್ಲಿ) ಕಟ್ಟುನಿಟ್ಟು, ಸಾಮರ್ಥ್ಯ ಹಾಗೂ ಎದೆಗಾರಿಕೆಯನ್ನು ಕಂಡರೆ ಅವಳು ಅವನಿಗೆ ವಿಧೇಯಳಾಗುವಳು. ಆದರೆ ಅವಳು ಅವನಲ್ಲಿ (ಮೇಲ್ವಿಚಾರಕನಲ್ಲಿ) ನಿರ್ಲಕ್ಷ್ಯ ಧೋರಣೆಯನ್ನು ಕಂಡರೆ ತಾನಿಚ್ಚಿಸಿದ್ದನ್ನು ಅವಳು ಮಾಡುವಳು. “

(ಸಿಲ್’ಸಿಲಃ ಅಲ್-ಲಿಖಾಅ್ – ಅಶ್- ಶಹ್’ರೀ : 11)