ನಮ್ಮ ಮತ್ತು ನಿಮ್ಮ ಮಧ್ಯೆಯಿರುವುದು ಸಲಫ್‍ಗಳ ಗ್ರಂಥಗಳಾಗಿವೆ.




ಶೈಖ್ ರಬೀಅ್ ಬಿನ್ ಹಾದೀ ಅಲ್-ಮದ್’ಖಲೀ (حفظه الله) :

ನೀವೆಲ್ಲರೂ ಒಟ್ಟಾಗಿ ಅಲ್ಲಾಹುವಿನ ಪಾಶವನ್ನು ಬಿಗಿಯಾಗಿ ಹಿಡಿಯಿರಿ ಹಾಗೂ ನಿಮಗೆ ಸಹಾಯವನ್ನು ನೀಡುವ ಮತ್ತು ಸೂರ್ಯನಂತೆ ನಿಮ್ಮನ್ನು (ಈ ಹಾದಿಯಲ್ಲಿ ಬೆಳಕು ಚೆಲ್ಲುವಂತೆ) ಮಾಡುವ (ಕಾರ್ಯವೇನೆಂದರೆ) ನೀವು ಸಜ್ಜನ ಪೂರ್ವಿಕರು (ಸಲಫುಸ್ಸಾಲಿಹೀನ್’ ಗಳು ದೀನನ್ನು) ಅರ್ಥೈಸಿದ (ರೀತಿ ಹಾಗೂ ಮಾರ್ಗದೆಡೆಗೆ) ಮರಳುವುದಾಗಿದೆ.

ಈ ಮೊದಲೇ ನಾನಿದನ್ನು ನಿಮಗೆ ತಿಳಿಸಿದಂತೆ –
ಅವರ (ಸಲಫುಸ್ಸಾಲಿಹೀನ್ ಗಳ ಮಾರ್ಗ ರೀತಿಯು) ವ್ಯಾಪಕವಾಗಿ ಹರಡಿವೆ ಮತ್ತು (ಅದು) ನಿಮಗೆ (ಗ್ರಂಥಗಳಲ್ಲಿ, ಧ್ವನಿ ಮುದ್ರಣ ಹಾಗೂ ವಿದ್ವಾಂಸರ ತರಗತಿಗಳಲ್ಲಿ) ಲಭ್ಯವಿದೆ.

ಯಾರಿದನ್ನು ವಿರೋಧಿಸುವರೋ, ಇದು ಅವರಿಗಿರುವ ಸವಾಲಾಗಿದೆ, ನಾವು ನೂತನವಾದಿಗಳಿಗೆ ಮತ್ತು ದೇಹೇಚ್ಚೆಯ ಜನರಿಗೆ ಸವಾಲೊಡ್ಡುತ್ತೇವೆ. ವಿಶ್ವಾಸ ಕಾರ್ಯಗಳಲ್ಲಿ ನೂತನವಾದಗಳಿರುವ ಜನರಾಗಲೀ, ಅಥವಾ ರಾಜ್ಯನೀತಿಯ (ಕುರಿತು) ನೂತನವಾದಗಳಿರುವ ಜನರಾಗಲೀ, ನಾವು (ಅವರೊಂದಿಗೆ) ಹೇಳುತ್ತೇವೆ “ನಮ್ಮ ಮತ್ತು ನಿಮ್ಮ ಮಧ್ಯೆಯಿರುವುದು ಸಲಫ್’ಗಳಾಗಿದ್ದಾರೆ (ಸಜ್ಜನ ಪೂರ್ವಿಕರಾಗಿದ್ದಾರೆ), ನಮ್ಮ ಮತ್ತು ನಿಮ್ಮ ಮಧ್ಯೆಯಿರುವುದು (ಸಲಫ್’ಗಳ) ಗ್ರಂಥಗಳಾಗಿವೆ.” (ಹೇಗೆ) ಇಮಾಮ್ ಅಹ್ಮದ್ (رحمه الله‎) ನೂತನವಾದಿಗಳೊಂದಿಗೆ ಹೇಳುತ್ತಿದ್ದರೋ “ನಮ್ಮ ಮತ್ತು ನಿಮ್ಮ ಮಧ್ಯೆಯಿರುವುದು ಜನಾಝಃ ನಮಾಝ್ ಆಗಿದೆ.” ಅದರಂತೆ ನಾವಿದನ್ನು ಹೇಳುತ್ತೇವೆ ಮತ್ತು ನಾವು ಹೇಳುತ್ತೇವೆ “ನಮ್ಮ ಮತ್ತು ನಿಮ್ಮ ಮಧ್ಯೆಯಿರುವುದು (ಸಲಫ್’ಗಳ) ಗ್ರಂಥಗಳಾಗಿವೆ” ಅವುಗಳು (ಓದಲು ಮತ್ತು ಖರೀದಿಸಲು) ಲಭ್ಯವಿದೆ.
ಅಲ್ಲಾಹು ತನ್ನ ಸಂದೇಶವಾಹಕರೊಂದಿಗೆ ಹೇಳಿದ್ದಾನೆ :

۞ قُلْ فَأْتُوا بِالتَّوْرَاةِ فَاتْلُوهَا إِن كُنتُمْ صَادِقِينَ
“(ಓ ಪ್ರವಾದಿಯವರೇ) ಹೇಳಿರಿ : ನೀವು ಸತ್ಯಸಂಧರಾಗಿದ್ದರೆ, ತೌರಾತನ್ನು ಇಲ್ಲಿಗೆ ತನ್ನಿರಿ ಮತ್ತು ಅದನ್ನು ಓದಿರಿ” (ಕುರ್’ಆನ್ 3 : 93)

ಹೀಗೆ, ಅವರು (ಯಹೂದಿಯರು) ತೌರಾತ್’ನೊಂದಿಗೆ ಬರುತ್ತಿದ್ದರು, ಮತ್ತು ಅದು ಅವರನ್ನು (ಅವರ ವ್ಯತಿಚಲನೆಯನ್ನು) ಬಯಲಿಗೆಳೆಯುತಿದ್ದವು. (ಅದೇ ರೀತಿ) ಈ ನೂತನವಾದಿಗಳಿಗೆ, ನಾವು ಸಲಫ್’ಗಳ ಗ್ರಂಥಗಳನ್ನು ತರುವೆವು (ಹಾಗೂ) ಕುರ್’ಆನ್ ಮತ್ತು ಸುನ್ನತ್ತನ್ನು ನಾವು ತರುವೆವು, ನಾವು ಅಲ್-ಬುಖಾರಿ, ಮುಸ್ಲಿಮ್, ಅಬೂ ದಾವೂದ್, ಅತ್ತಿರ್ಮಿದಿ, ಅನ್ನಸಾಈ ಹಾಗೂ ಇಮಾಮ್ ಅಹ್ಮದ್ ಮತ್ತು ಇನ್ನಿತರರು ರಚಿಸಿದ ಗ್ರಂಥಗಳನ್ನು ತರುವೆವು.

ನಾವು ಇವುಗಳನ್ನು (ಗ್ರಂಥಗಳನ್ನು) ತರುವೆವು ಮತ್ತು ಯಾರು ಅವರ ಹಾದಿಯಲ್ಲಿರುವರು ಹಾಗೂ ಯಾರು ಅವರನ್ನು ದೂರಕ್ಕೆಸೆದು ಬಿಡುವರು ಮತ್ತು ಯಾರು ಅವರನ್ನು ಧಿಕ್ಕರಿಸುವರು (ಎಂದು ಖಂಡಿತ ನಾವು ಗೊತ್ತು ಮಾಡುವೆವು !!)

(ಹೇಗೆ) ಅಲ್ಲಾಹು ಯಹೂದಿಯರಿಗೆ ತೌರಾತನ್ನು ತರಲು ಸವಾಲೋಡ್ಡಿದನೋ, ಮತ್ತು ಯಾವಾಗ ತೌರಾತನ್ನು ತರಲಾಯಿತೋ, (ಆಗ) ಅದು ಅವರನ್ನು (ಅವರ ಪಥಭ್ರಷ್ಟತೆಯನ್ನು) ಬಯಲು ಮಾಡಿತು. ಅದರಂತೆಯೇ ನಾವು ಅವರಿಗೆ (ನೂತನವಾದಿಗಳಿಗೆ) ಸವಾಲೊಡ್ಡುವೆವು – ಸಲಫ್’ಗಳ ಗ್ರಂಥಗಳನ್ನು ತರಲು, (ಈ ಮೂಲಕ) ದಾರಿಗೆಟ್ಟವರು ಯಾರು? ನಾವೋ ಅಥವಾ ಅವರೋ? ಎಂದು ಖಚಿತಪಡಿಸಲು ಹಾಗೂ ನಮ್ಮ ಅಥವಾ ಅವರ ಪೈಕಿಯಿರುವ ( ವಾಸ್ತವ ) ನೂತನವಾದಿಗಳನ್ನು ಅವಮಾನಗೊಳಿಸುವ ಸಲುವಾಗಿ ( ಸಲಫ್’ಗಳ ಗ್ರಂಥಗಳನ್ನು ತರಲು ನೂತನವಾದಿಗಳಿಗೆ ನಾವು ಸವಾಲೊಡ್ಡುವೆವು ).

ನಮಗೆ ಸವಾಲೊಡ್ಡಲು ಅವರು ಸಮರ್ಥರೇ? ತಮ್ಮ ಬಾಯಿಗಳನ್ನು ತೆರೆದು ಇದನ್ನು ಹೇಳಲು ಅವರು ಸಮರ್ಥರೇ? ನಾವು ನಮ್ಮ ಬಾಯಿಗಳನ್ನು ಸಕಲ ಧೈರ್ಯದಿಂದ ಭರಿಸುತ್ತೇವೆ. ನಾವು ಸಲಫುಸ್ಸಾಲಿಹ್’ಗಳ ಮನ್’ಹಜ್ ಗಿಂತ ಹೊರತಾದ ಮನ್’ಹಜ್ ನಲ್ಲಿರುವೆವು ಎಂದು ವಾದಿಸುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ನಾವು ಸವಾಲೊಡ್ಡುತ್ತೇವೆ.

ಅಲ್ಲಾಹುವಿನ ಮೇಲಾಣೆ, ನಾವು ಆಹ್ವಾನಿಸುವುದು ಸಲಫುಸ್ಸಾಲಿಹೀನ್’ಗಳ ಮನ್’ಹಜ್’ನೆಡೆಗೆ, ಅಲ್ಲಾಹುವಿನ ಗ್ರಂಥದೆಡೆಗೆ ಮತ್ತು ಅಲ್ಲಾಹುವಿನ ರಸೂಲ್  (صلى الله عليه وسلم) ರವರ ಸುನ್ನತ್ತಿನೆಡೆಗಾಗಿದೆ. ನಾವದನ್ನು ನಮ್ಮ ವಿಶ್ವಾಸಕ್ಕೆ, ಇಬಾದತ್’ಗೆ (ಆರಾಧನೆ), ಆಡಳಿತಗಾರರು ಮತ್ತು ಪ್ರಜೆಗಳ ( ಸಂಬಂಧಿಸಿದ ಕಾರ್ಯಗಳ) ಕುರಿತು ಹಾಗೂ (ದಾರಿಗೆಟ್ಟ) ಸಂಘಟನಾ ಗುಂಪು ಮತ್ತು ಪಂಗಡಗಳ (ವಿರೋಧಿಸುವ ಮತ್ತು ಖಂಡಿಸುವ) ಬಗ್ಗೆ ನಮ್ಮ ನಿಲುವುಗಳನ್ನು ಅಲ್ಲಾಹುವಿನ ಗ್ರಂಥ ಮತ್ತು ಸುನ್ನತ್ತಿನ ಬೆಳಕಿನಲ್ಲಿ ಪುರಾವೆಗಳಾಗಿ ತರುವೆವು.

ಇತರರ (ನೂತನವಾದಿಗಳ) ಕುರಿತು ಹೇಳುವುದಾದರೆ, ಅವರಿರುವುದು ಮೋಸಗಾರಿಕೆ ಮತ್ತು ವಂಚನೆಯಲ್ಲಾಗಿದೆ. ಅಲ್ಲಾಹುವಿನ ಮೇಲಾಣೆ, ನೀವವರನ್ನು ಮೋಸಗಾರಿಕೆ ಮತ್ತು ಯುವ ಜನರ ಭಾವನೆಗಳಲ್ಲಿ ಚೆಲ್ಲಾಟವಾಡುವುದರ ಹೊರತು ಕಾಣಲಾರಿರಿ.