w
“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”
ರಾಜಸ್ಥಾನದ ಉದಯಪುರದಲ್ಲಿ ದುಷ್ಕರ್ಮಿಗಳಿಬ್ಬರು ಪ್ರವಾದಿ ಮುಹಮ್ಮದ್ (H) ರವರ ಹೆಸರಿನಲ್ಲಿ ಗ್ರಾಹಕರಂತೆ ನಟಿಸಿಕೊಂಡು ಹೊಲಿಗೆ ಅಂಗಡಿಗೆ ನುಗ್ಗಿ ಟೈಲರಿಂಗ್ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆಗೈದು ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ವಿಜೃಂಭಿಸಿ ವಿಕೃತವನ್ನು ಮೆರೆದ ದುಷ್ಟರಿಬ್ಬರ ಇಂತಹ ಘನಘೋರ ಕೃತ್ಯವು ನಾಡಿನ ಜನತೆಯನ್ನು ದಿಗ್ಭ್ರಮೆಗೊಳಿಸಿದೆ. ಕ್ರೌರ್ಯದ ಅಟ್ಟಹಾಸವನ್ನು ಮೆರೆಯುವ ಇಂತಹ ಪಾತಕಿಗಳನ್ನು ಒಕ್ಕೊರಲಿನಿಂದ ಖಂಡಿಸಬೇಕು. ಈ ಘನಘೋರ ಕೃತ್ಯವನ್ನೆಸಗಲು ಹೇಡಿಗಳು ಇಸ್ಲಾಮ್ ಮತ್ತು ಪ್ರವಾದಿಯ ಹೆಸರನ್ನು ಬಳಸಿರುವುದು ಅತ್ಯಂತ ಖಂಡನೀಯ. ಯಾವುದೇ ಜನತೆಯೊಂದಿಗೆ ಅವರು ಯಾವುದೇ ಧರ್ಮದವರಾಗಿದ್ದರೂ ಸರಿ!, ಅವರೊಂದಿಗೆ ಅನ್ಯಾಯವೆಸಗುವುದನ್ನು, ಅನೀತಿ ತೋರುವುದನ್ನು ಇಸ್ಲಾಮ್ ಖಂಡತುಂಡವಾಗಿ ನಿಷೇಧಿಸಿದೆ.
ಇಸ್ಲಾಮಿನ ಈ ಸ್ಪಷ್ಟ ಹಾಗೂ ಸುಂದರವಾದ ಸಂದೇಶಗಳಿದ್ದರೂ ಇಂತಹ ತೀವ್ರವಾದಿಗಳು ಇವೆಲ್ಲವುಗಳನ್ನು ನೋಡುವುದಿಲ್ಲವೇಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಹೌದು! ವಾಸ್ತವದಲ್ಲಿ ಕುರುಡಾಗಿರುವುದು ಅವರ ಕಣ್ಣುಗಳಲ್ಲ, ಎದೆಗಳೊಳಗಿರುವ ಅವರ ಹೃದಯಗಳಾಗಿವೆ !!!
– ಅಬೂ ಹಮ್ಮಾದ್ ಸಲಾಹುದ್ದೀನ್