w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್ ಫೌಝಾನ್ (حَفِظَهُ اللَّهُ) ರವರೊಂದಿಗೆ ಈ ಕುರಿತು ಪ್ರಶ್ನಿಸಲಾಯಿತು :
ಪ್ರಶ್ನೆ : ಓರ್ವೆ ಮುಸ್ಲಿಮ್ ಮಹಿಳೆ ಹೆಚ್ಚಾಗಿ ತನ್ನ ಸಮಯವನ್ನು ಅಡುಗೆ ಕೋಣೆಯಲ್ಲಿ ವಿವಿಧ ಬಗೆಯ ಊಟ ತಿಂಡಿಗಳನ್ನು ತಯಾರಿಸುವುದರಲ್ಲಿ ವ್ಯಯಿಸುತ್ತಾಳೆ, ಹಾಗಾಗಿ ಅವಳು ಈ ತಿಂಗಳ ಅವಧಿಯಲ್ಲಿ (ರಮದಾನಿನ) ಸದವಕಾಶದ ಸದುಪಯೋಗ ಪಡೆಯುವುದನ್ನು ಕಳೆದುಕೊಳ್ಳುತ್ತಾಳೆ. ಆದ್ದರಿಂದ ಅವಳಿಗೇನಾದರೂ ಸಲಹೆ ಇದೆಯೇ ಹಾಗೂ ಅಡುಗೆ ತಯಾರು ಮಾಡುವುದರಿಂದ ಅವಳಿಗೆ ಅಲ್ಲಾಹುವಿನ ಬಳಿ ಪ್ರತಿಫಲ ದೊರೆಯಬಹುದೇ?
ಉತ್ತರ : ಹೌದು! ಇದಕ್ಕೆ ಅವಳಿಗೆ (ಅಲ್ಲಾಹುವಿನ ಬಳಿ) ಪ್ರತಿಫಲ ದೊರೆಯುತ್ತದೆ. ಯಾಕೆಂದರೆ ಅವಳು ಉಪವಾಸಿಗರಿಗೆ ಅಡುಗೆಯನ್ನು ತಯಾರಿಸುತ್ತಾಳೆ. ಇದು ಪುಣ್ಯ ಮತ್ತು ಧರ್ಮನಿಷ್ಠೆಯಲ್ಲಿ (ತಕ್ವಾದಲ್ಲಿ) ಸಹಕರಿಸುವ ಪೈಕಿ ಸೇರಿದ (ಪುಣ್ಯ) ಕಾರ್ಯಗಳಾಗಿವೆ. ಆದ್ದರಿಂದ ಅವಳ ಈ (ಪುಣ್ಯ) ಕಾರ್ಯಗಳಿಗೆ ಪ್ರತಿಫಲ ದೊರೆಯುತ್ತದೆ. ಅವಳ ಅಡುಗೆ ಮತ್ತು ಕೆಲಸ ಕಾರ್ಯಗಳಾವುದೂ ಅವಳನ್ನು ತಸ್ಬೀಹ್ (ಸುಬ್‍ಹಾನಲ್ಲಾಹ್ ಹೇಳುವುದನ್ನು) ತಹ್‍ಲೀಲ್ (ಲಾ ಇಲಾಹ ಇಲ್ಲಲ್ಲಾಹ್ ಹೇಳುವುದನ್ನು) ತಕ್ಬೀರ್ (ಅಲ್ಲಾಹು ಅಕ್ಬರ್ ಹೇಳುವುದನ್ನು) ಹಾಗೂ ಕಂಠಪಾಠ ಮಾಡಿದ ಕುರ್‌ಆನ್‍ನ ಪಾರಾಯಣ ಮಾಡುವುದನ್ನು ತಡೆಯುವುದಿಲ್ಲ. ಅಲ್ಲಾಹುವನ್ನು ಸ್ಮರಿಸಲು ಈ ಅಡುಗೆ ಕೆಲಸಗಳಾವುದೂ ಅವಳನ್ನು ಅಡ್ಡಿಪಡಿಸುವುದಿಲ್ಲ.
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್