ಮುಸ್ಲಿಮ್ ಸಮುದಾಯದಲ್ಲಿ ಐಕ್ಯತೆಗಳಿಸುವುದು ಹೇಗೆ? -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರಶ್ನಿಸಲಾಯಿತು :

ಪ್ರಶ್ನೆ : (ಮುಸ್ಲಿಮ್ ಸಮುದಾಯದಲ್ಲಿ) ಐಕ್ಯತೆಗಳಿಸುವ ಕಾರಣಗಳು ಹಾಗೂ ಮಾರ್ಗಗಳಾವುವು?

ಉತ್ತರ : (ಮುಸ್ಲಿಮ್ ಸಮುದಾಯದಲ್ಲಿ) ಐಕ್ಯತೆಗಳಿಸುವ ಮಾರ್ಗಗಳಾವುದೆಂದರೆ :

ಒಂದನೆಯದು : ಶಿರ್ಕ್‌ನಿಂದ ಮುಕ್ತವಾಗುವ ಮೂಲಕ ಅಕೀದಃವನ್ನು (ವಿಶ್ವಾಸವನ್ನು) ಸರಿಪಡಿಸುವುದು.

ಅಲ್ಲಾಹು (E) ಹೇಳುತ್ತಾನೆ :

﴿ وَإِنَّ هَـٰذِهِ أُمَّتُكُمْ أُمَّةً وَاحِدَةً وَأَنَا رَبُّكُمْ فَاتَّقُونِ

“ಖಂಡಿತವಾಗಿಯೂ, ನಿಮ್ಮ ಈ ಸಮುದಾಯವು (ಏಕೈಕ ಧರ್ಮದ ಮೇಲೆ ಐಕ್ಯಗೊಂಡ) ಏಕೈಕ ಸಮುದಾಯವಾಗಿದೆ, ಮತ್ತು ನಾನು ನಿಮ್ಮ ರಬ್ಬ್ ಆಗಿರುವೆನು, ಹಾಗಾಗಿ (ನನ್ನ ಆಜ್ಞೆ ನಿಷೇಧಗಳನ್ನು ಪಾಲಿಸುವ ಮೂಲಕ) ನನಗೆ (ನೀವು) ವಿಧೇಯರಾಗಿರಿ.” (ಸೂರಃ ಅಲ್-ಮುಅ್‌ಮಿನೂನ್, 23 : 52)

 

ಯಾಕೆಂದರೆ ಅವರ ವಿವಿಧ ವಿಶ್ವಾಸ ನಂಬಿಕೆಗಳು ಹಾಗೂ ಅನೇಕ ಆರಾಧ್ಯರುಗಳಿಗೆ ಪ್ರತಿಯಾಗಿ ಪರಸ್ಪರ ಹೃದಯಗಳನ್ನು ಬೆಸೆಯುವುದು ಹಾಗೂ ಹಗೆತನಗಳನ್ನು ನಿವಾರಿಸುವುದು ಸರಿಯಾದ ಅಕೀದಃ ಮಾತ್ರವಾಗಿದೆ. ಆದ್ದರಿಂದ ಪ್ರತಿಯೊಂದು ವಿಶ್ವಾಸ ನಂಬಿಕೆಯನ್ನು ಹೊಂದಿರುವ ಜನರು ತಮ್ಮ ಹೊರತು ಇತರರು ಇರುವುದು ಮಿಥ್ಯತೆಯ ಮೇಲಾಗಿದೆಯೆಂದು ಭಾವಿಸುತ್ತಾ ಸ್ವತಃ ತಮ್ಮದೇ ಆದ ವಿಶ್ವಾಸ ನಂಬಿಕೆಗಳಿಗೆ ಹಾಗೂ ಆರಾಧ್ಯರುಗಳಿಗೆ ಒಲವನ್ನು ಹೊಂದಿರುವರು. ಇದಕ್ಕಾಗಿಯೇ ಅಲ್ಲಾಹು ಹೇಳುತ್ತಾನೆ :

﴿ أَأَرْبَابٌ مُّتَفَرِّقُونَ خَيْرٌ أَمِ اللَّـهُ الْوَاحِدُ الْقَهَّارُ

“(ಉಪಕಾರವಾಗಲೀ ಉಪದ್ರವಾಗಲೀ ಮಾಡಲಾಗದ) ಅನೇಕ ವಿವಿಧ ಆರಾಧ್ಯರೋ ಉತ್ತಮರು ಅಥವಾ ಏಕೈಕನೂ ಸರ್ವರ ಮೇಲೆ ಅಧಿಕಾರ ಪ್ರಾಬಲ್ಯವಿರುವ ಅಲ್ಲಾಹು ಆಗಿರುವನೋ (ಉತ್ತಮನು)?” (ಸೂರಃ ಯೂಸುಫ್, 12 : 39)

 

ಆದ್ದರಿಂದಲೇ ಜಾಹಿಲಿಯ್ಯಃದ (ಇಸ್ಲಾಮಿನ ಪೂರ್ವ) ಕಾಲಘಟ್ಟದಲ್ಲಿ ಅರಬ್‌ಗಳು ವಿಭಜಿತರಾಗಿದ್ದರು ಮತ್ತು ಭೂಮಿಯಲ್ಲಿ ಬಲಹೀನರಾಗಿದ್ದರು. ಆದರೆ ಯಾವಾಗ ಅವರು ಇಸ್ಲಾಮ್ ಪ್ರವೇಶಿಸಿದರೋ ಮತ್ತು ಅವರ ಅಕೀದಃವು ಸರಿಯಾಯಿತೋ, (ಆಗ) ಅವರು (ಪರಸ್ಪರ) ಐಕ್ಯಗೊಂಡರು ಮತ್ತು ಅವರ ಆಡಳಿತವು ಸಂಘಟಿತವಾಯಿತು.

ಎರಡನೆಯದು : ಮುಸ್ಲಿಮ್ (ದೇಶಗಳಲ್ಲಿ ವಾಸಿಸುವವರು ಅಲ್ಲಿಯ) ಆಡಳಿತಗಾರರ (ಆಜ್ಞೆಗಳನ್ನು) ಆಲಿಸಿ ಪಾಲಿಸುವುದು ಮತ್ತು ಅನುಸರಿಸುವುದು.

ಇದಕ್ಕಾಗಿದೆ ಪ್ರವಾದಿ (H) ರವರು ಹೇಳಿರುವುದು :

« أُوصِيكُمْ بِتَقْوَى اللَّهِ وَالسَّمْعِ وَالطَّاعَةِ وَإِنْ أُمِّرَ عَلَيْكُمْ عَبْدٌ حَبَشِيٌّ، فَإِنَّهُ مَنْ يَعِشْ مِنْكُمْ فَسَيَرَى اخْتِلَافًا كَثِيرًا »

“ನೀವು ಅಲ್ಲಾಹುವಿನ ತಕ್ವಾ (ಭಯಭಕ್ತಿ) ಹೊಂದುವಂತೆಯೂ, ಅಬಿಸ್ಸಿನಿಯಾದ ಓರ್ವ ಗುಲಾಮನು ನಿಮ್ಮ ಮೇಲೆ ಅಧಿಕಾರ ವಹಿಸಿಕೊಂಡರೂ (ಆ ನಿಮ್ಮ ಆಡಳಿತಗಾರರ ಆಜ್ಞೆಗಳನ್ನು) ಆಲಿಸಿ ಅನುಸರಿಸುವಂತೆಯೂ ನಾನು ಉಪದೇಶಿಸುತ್ತೇನೆ. ಏಕೆಂದರೆ ಖಂಡಿತವಾಗಿಯೂ, ನಿಮ್ಮ ಪೈಕಿ ಮುಂದೆ ಬದುಕಿರುವವರು ಅನೇಕ ಭಿನ್ನಾಭಿಪ್ರಾಯಗಳನ್ನು ಕಾಣುವರು…” (ವರದಿಯು ಸಹೀಹ್ ಆಗಿದೆ. ವರದಿ ಮಾಡಿದವರು ಅಬೂ ದಾವುದ್ : 4607, ಅತ್ತಿರ್ಮಿದೀ : 2776, ಪ್ರಸ್ತುತ ವಚನವು ಅಲ್-ಹಾಕಿಮ್ 1 : 96ರಲ್ಲಿ ವರದಿಯಾಗಿದೆ)

 

ಇದೇಕೆಂದರೆ ಆಡಳಿತಗಾರರಿಗೆ ಅವಿಧೇಯತೆ ತೋರುವುದು ಭಿನ್ನತೆಗೆ ಕಾರಣವಾಗುತ್ತದೆ.

ಮೂರನೆಯದು : ವಿವಾದಗಳನ್ನು ಅಂತ್ಯಗೊಳಿಸಲು ಹಾಗೂ ಭಿನ್ನತೆಯನ್ನು ಕೊನೆಗೊಳಿಸಲು ಕುರ್‌ಆನ್ ಮತ್ತು ಸುನ್ನತ್‌ನೆಡೆಗೆ ಮರಳುವುದು.

ಅಲ್ಲಾಹು ಹೇಳುತ್ತಾನೆ :

﴿ فَإِن تَنَازَعْتُمْ فِي شَيْءٍ فَرُدُّوهُ إِلَى اللَّـهِ وَالرَّسُولِ إِن كُنتُمْ تُؤْمِنُونَ بِاللَّـهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلً

“ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ, ನಿಮ್ಮ ನಡುವೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ಉಂಟಾದರೆ ನೀವದನ್ನು (ತೀರ್ಪಿಗಾಗಿ) ಅಲ್ಲಾಹುವಿನೆಡೆಗೂ ಮತ್ತು ಅವನ ರಸೂಲ್‌ರವರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವೂ, ಅಂತಿಮ ಪರಿಣಾಮವು ಹೆಚ್ಚು ಯೋಗ್ಯವೂ ಅತ್ಯುತ್ತಮವೂ ಆಗಿದೆ.” (ಸೂರಃ ಅನ್ನಿಸಾಅ್, 4 : 59)

 

ಹಾಗಾಗಿ, (ಭಿನ್ನತೆಯನ್ನು ಕೊನೆಗೊಳಿಸಲು) ಯಾರೊಬ್ಬರೂ ಸಹ ಜನರ ಅಭಿಪ್ರಾಯಗಳೆಡೆಗೆ ಮತ್ತು ಪದ್ಧತಿ ಸಂಪ್ರದಾಯಗಳೆಡೆಗೆ ಮರಳಬಾರದಾಗಿದೆ.

ನಾಲ್ಕನೆಯದು : ವ್ಯಕ್ತಿಗಳ ನಡುವೆ ಅಥವಾ ಸಮುದಾಯಗಳ ನಡುವೆ ವಿವಾದಗಳು ಉಂಟಾದರೆ ಸರಿಪಡಿಸುವುದು ಮತ್ತು ಬಗೆಹರಿಸುವುದು.

ಅಲ್ಲಾಹು ಹೇಳುತ್ತಾನೆ :

﴿ فَاتَّقُوا اللَّـهَ وَأَصْلِحُوا ذَاتَ بَيْنِكُمْ

“ಹಾಗಾಗಿ ನೀವು ಅಲ್ಲಾಹುವನ್ನು (ಅವನ ಆಜ್ಞೆ ನಿಷೇಧಗಳನ್ನು ಪಾಲಿಸುವ ಮೂಲಕ) ಭಯಪಡಿರಿ ಮತ್ತು ನಿಮ್ಮ ಮಧ್ಯೆಯಿರುವ (ಎಲ್ಲಾ ವಿವಾದದ ವಿಚಾರಗಳನ್ನು ಬಗೆಹರಿಸಿ) ಸಂಬಂಧಗಳನ್ನು ಸರಿಪಡಿಸಿರಿ.” (ಸೂರಃ ಅಲ್-ಅನ್ಫಾಲ್, 8 : 1)

 

ಐದನೆಯದು : ಮುಸ್ಲಿಮರ ಐಕ್ಯತೆಯನ್ನು ಒಡೆಯಲು ಬಯಸುವ ಅತಿಕ್ರಮಿಗಳು ಮತ್ತು ಖವಾರಿಜ್‌ಗಳ (ಅರ್ಥಾತ್ ಉಗ್ರವಾದಿಗಳ) ವಿರುದ್ಧ ಹೋರಾಡುವುದು.

ಒಂದುವೇಳೆ ಅವರು ಶಕ್ತಿ ಮತ್ತು ಪ್ರಾಬಲ್ಯವುಳ್ಳವರಾಗಿದ್ದರೆ ಅವರು ಮುಸ್ಲಿಮ್ ಸಮಾಜಕ್ಕೆ ಅಪಾಯವನ್ನು ತಂದೊಡ್ಡುವರು ಮತ್ತು ಅದರ ಶಾಂತಿ ಹಾಗೂ ಸುರಕ್ಷತೆಗೆ ಹಾನಿಯನ್ನುಂಟು ಮಾಡುವರು. ಅಲ್ಲಾಹು ಹೇಳುತ್ತಾನೆ :

﴿ فَإِن بَغَتْ إِحْدَاهُمَا عَلَى الْأُخْرَىٰ فَقَاتِلُوا الَّتِي تَبْغِ

“ಒಂದುವೇಳೆ ಅವರ ಪೈಕಿ ಒಬ್ಬರು ಇನ್ನೊಬ್ಬರ ವಿರುದ್ಧ ಅತಿಕ್ರಮಿಸಿದರೆ (ಆಗ ಅವರ ಪೈಕಿ) ಅತಿಕ್ರಮಿಸುವವರ ವಿರುದ್ಧ ನೀವು ಹೋರಾಡಿರಿ.” (ಸೂರಃ ಅಲ್-ಹುಜುರಾತ್, 49 : 9)

 

ಇದಕ್ಕಾಗಿಯೇ, ಸತ್ಯವಿಶ್ವಾಸಿಗಳ ನೇತಾರರಾದ ಅಲೀ ಬಿನ್ ಅಬೀ ತಾಲಿಬ್ (I) ರವರು ಅತಿಕ್ರಮಿಗಳು ಮತ್ತು ಖವಾರಿಜ್‌ಗಳ ವಿರುದ್ಧ ಹೋರಾಡಿರುವುದು. ಇದನ್ನು ಅವರ (ಶ್ರೇಷ್ಠತೆಗಳ ಪೈಕಿ) ಒಂದು ಮಹಾ ಶ್ರೇಷ್ಠತೆಯೆಂದು ಪರಿಗಣಿಸಲಾಗಿದೆ.

ಮೂಲ : ಅಲ್-ಅಜ್‌ವಿಬತುಲ್ ಮುಫೀದಃ ಅನ್ ಅಸ್‌ಯಿಲತಿಲ್ ಮನಾಹಿಜಿಲ್ ಜದೀದಃ, ಪುಟ 198-200
ಅನುವಾದ : ಅಬೂ ಹಮ್ಮಾದ್