ಪ್ರವಾದಿಯವರ ಮೇಲೆ ಸಲಾತ್ ಹೇಳುವುದು ಹೇಗೆ? : ಅಲ್-ಇಮಾಮ್ ನಾಸಿರುದ್ದೀನ್ ಅಲ್-ಅಲ್ಬಾನೀ

w

ಅಬ್ದುರ್ರಹ್ಮಾನ್ ಬಿನ್ ಅಬೀ ಲೈಲಾ (I) ರವರಿಂದ ವರದಿ, ಕಅ್‌ಬ್ ಬಿನ್ ಉಜ್‌ರಃ (I) ರವರು ನನ್ನನ್ನು ಭೇಟಿಯಾದರು ಮತ್ತು ಹೇಳಿದರು : “ನಾನು ಪ್ರವಾದಿ (H) ರಿಂದ ಪಡೆದುಕೊಂಡ ಕಾಣಿಕೆಯೊಂದನ್ನು ನಾನು ತಮಗೆ ನೀಡಲೇ? ಆಗ ಅಬ್ದುರ್ರಹ್ಮಾನ್ (I) ಹೇಳಿದರು : ಹೌದು, ಅದನ್ನು ನನಗೆ ನೀಡಿ.”

ನಾನು ಹೇಳಿದೆನು : “ನಾವು ಪ್ರವಾದಿ (H) ರವರೊಂದಿಗೆ ಕೇಳಿದೆವು, ‘ಓ ಅಲ್ಲಾಹುವಿನ ಸಂದೇಶವಾಹಕರೇ, ಓರ್ವನು ತಮ್ಮ ಮೇಲೆ ಹಾಗೂ ತಮ್ಮ ಕುಟುಂಬದ ಮೇಲೆ ಸಲಾತ್ ವರ್ಷಿಸಲು (ಅಲ್ಲಾಹುವಿನೊಂದಿಗೆ) ಹೇಳುವುದು ಹೇಗೆ? ಆಗ ಅವರು (H) ಹೇಳಿದರು : ಹೇಳಿರಿ,

« اللَّهُمَّ صَلِّ عَلَى مُحَمَّدٍ، وَعَلَى آلِ مُحَمَّدٍ، كَمَا صَلَّيْتَ عَلَى إِبْرَاهِيمَ وَعَلَى آلِ إِبْرَاهِيمَ، إِنَّكَ حَمِيدٌ مَجِيدٌ، اللَّهُمَّ بَارِكْ عَلَى مُحَمَّدٍ، وَعَلَى آلِ مُحَمَّدٍ، كَمَا بَارَكْتَ عَلَى إِبْرَاهِيمَ، وَعَلَى آلِ إِبْرَاهِيمَ، إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ. ಓ ಅಲ್ಲಾಹ್! ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.” (ಸಹೀಹ್ ಅಲ್–ಬುಖಾರಿ : 3370)

 

ಅಬೂ ಹುಮೈದ್ ಅಸ್ಸಾಇದೀ (I) ರವರಿಂದ ವರದಿ : ಜನರು ಕೇಳಿದರು, “ಓ ಅಲ್ಲಾಹುವಿನ ಸಂದೇಶವಾಹಕರೇ!, ನಾವು ಹೇಗೆ (ಅಲ್ಲಾಹುವಿನೊಂದಿಗೆ) ತಮ್ಮ ಮೇಲೆ ಸಲಾತ್ ವರ್ಷಿಸುವಂತೆ ಹೇಳಬೇಕು? ಆಗ ರಸೂಲ್ (H) ರವರು ಉತ್ತರಿಸಿದರು, ಹೇಳಿರಿ :

« اللَّهُمَّ صَلِّ عَلَى مُحَمَّدٍ وَأَزْوَاجِهِ وَذُرِّيَّتِهِ، كَمَا صَلَّيْتَ عَلَى آلِ إِبْرَاهِيمَ، وَبَارِكْ عَلَى مُحَمَّدٍ وَأَزْوَاجِهِ وَذُرِّيَّتِهِ، كَمَا بَارَكْتَ عَلَى آلِ إِبْرَاهِيمَ، إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಮುಹಮ್ಮದ್ (H) ರವರಿಗೂ ಅವರ ಪತ್ನಿಯರಿಗೂ ಹಾಗೂ ಅವರ ಸಂತತಿಗೂ ಅನುಗ್ರಹಿಸು. ಓ ಅಲ್ಲಾಹ್! ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ಮುಹಮ್ಮದ್ (H) ರವರಿಗೂ ಅವರ ಪತ್ನಿಯರಿಗೂ ಹಾಗೂ ಅವರ ಸಂತತಿಗೂ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.” (ಸಹೀಹ್ ಅಲ್–ಬುಖಾರಿ : 3369)

 

ಅಲ್-ಇಮಾಮ್ ಮುಹಮ್ಮದ್ ನಾಸಿರುದ್ದೀನ್ ಅಲ್-ಅಲ್ಬಾನೀ (V) ರವರು ತಮ್ಮ ‘ಸಿಫತು ಸಲಾತುನ್ನಬಿಯ್ಯ್’ ಎಂಬ ಗ್ರಂಥದಲ್ಲಿ ಉಲ್ಲೇಖಿಸಿರುವರು : ಪ್ರವಾದಿ (H) ರವರು ಸಲಾತ್ ಹೇಳುವ ಹಲವಾರು ವಿಧಾನಗಳನ್ನು ಕಲಿಸಿಕೊಟ್ಟಿರುವರು (ಅವುಗಳೆಂದರೆ) :

01.

« اللَّهُمَّ صَلِّ عَلَى مُحَمَّدٍ وَعَلَى أَهْلِ بَيْتِهِ وَعَلَى أَزْوَاجِهِ وَذُرِّيَّتِهِ، كَمَا صَلَّيْتَ عَلَى آلِ إِبْرَاهِيمَ، إِنَّكَ حَمِيدٌ مَجِيدٌ، وَبَارِكْ عَلَى مُحَمَّدٍ وَعَلَى آلِ بَيْتِهِ، وَعَلَى أَزْوَاجِهِ وَذُرِّيَّتِهِ، كَمَا بَارَكْتَ عَلَى آلِ إِبْرَاهِيمَ، إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಮುಹಮ್ಮದ್ (H) ರವರಿಗೂ ಅವರ ಕುಟುಂಬಗಳಿಗೂ ಅವರ ಪತ್ನಿಯರಿಗೂ ಹಾಗೂ ಅವರ ಸಂತತಿಗೂ ಅನುಗ್ರಹಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ. ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ಮುಹಮ್ಮದ್ (H) ರವರಿಗೂ ಅವರ ಕುಟುಂಬಗಳಿಗೂ ಅವರ ಪತ್ನಿಯರಿಗೂ ಹಾಗೂ ಅವರ ಸಂತತಿಗೂ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.”

 

02.

« اللَّهُمَّ صَلِّ عَلَى مُحَمَّدٍ، وَعَلَى آلِ مُحَمَّدٍ، كَمَا صَلَّيْتَ عَلَى إِبْرَاهِيمَ وَعَلَى آلِ إِبْرَاهِيمَ، إِنَّكَ حَمِيدٌ مَجِيدٌ، اللَّهُمَّ بَارِكْ عَلَى مُحَمَّدٍ، وَعَلَى آلِ مُحَمَّدٍ، كَمَا بَارَكْتَ عَلَى إِبْرَاهِيمَ، وَعَلَى آلِ إِبْرَاهِيمَ، إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೂ ಅನುಗ್ರಹಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ. ಓ ಅಲ್ಲಾಹ್! ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.”

 

03.

« اللَّهُمَّ صَلِّ عَلَى مُحَمَّدٍ، وَعَلَى آلِ مُحَمَّدٍ، كَمَا صَلَّيْتَ عَلَى إِبْرَاهِيمَ وَآلِ إِبْرَاهِيمَ، إِنَّكَ حَمِيدٌ مَجِيدٌ، وَبَارِكْ عَلَى مُحَمَّدٍ، وَعَلَى آلِ مُحَمَّدٍ، كَمَا بَارَكْتَ عَلَى إِبْرَاهِيمَ، وَآلِ إِبْرَاهِيمَ، إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ. ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.”

 

04.

« اللَّهُمَّ صَلِّ عَلَى مُحَمَّدٍ النَّبِيِّ الْأُمِّيِّ، وَعَلَى آلِ مُحَمَّدٍ، كَمَا صَلَّيْتَ عَلَى آلِ إِبْرَاهِيمَ، وَبَارِكْ عَلَى مُحَمَّدٍ النَّبِيِّ الْأُمِّيِّ، وَعَلَى آلِ مُحَمَّدٍ، كَمَا بَارَكْتَ عَلَى آلِ إِبْرَاهِيمَ فِي الْعَالَمِين إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ, ನಿರಕ್ಷರಿ ಪ್ರವಾದಿಯಾದ ಮುಹಮ್ಮದ್ (H) ರವರಿಗೂ ಹಾಗೂ ಅವರ ಕುಟುಂಬಗಳಿಗೂ ಅನುಗ್ರಹಿಸು. ಸರ್ವ ಜನತೆಗಳ ಪೈಕಿ ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ, ನಿರಕ್ಷರಿ ಪ್ರವಾದಿಯಾದ ಮುಹಮ್ಮದ್ (H) ರವರಿಗೂ ಹಾಗೂ ಅವರ ಕುಟುಂಬಗಳಿಗೂ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.”

 

05.

« اللَّهُمَّ صَلِّ عَلَى مُحَمَّدٍ عَبْدِكَ وَرَسُولِكَ، كَمَا صَلَّيْتَ عَلَى آلِ إِبْرَاهِيمَ، وَبَارِكْ عَلَى مُحَمَّدٍ عَبْدِكَ وَرَسُولِكَ، وَعَلَى آلِ مُحَمَّدٍ، كَمَا بَارَكْتَ عَلَى إِبْرَاهِيمَ وَعَلَى آلِ إِبْرَاهِيمَ »

“ಓ ಅಲ್ಲಾಹ್! ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ನಿನ್ನ ದಾಸರೂ ಸಂದೇಶವಾಹಕರೂ ಆಗಿರುವ ಮುಹಮ್ಮದ್ (H) ರವರಿಗೂ ಅನುಗ್ರಹಿಸು. ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ನಿನ್ನ ದಾಸರೂ ಸಂದೇಶವಾಹಕರೂ ಆಗಿರುವ ಮುಹಮ್ಮದ್ (H) ರವರಿಗೂ ಹಾಗೂ ಅವರ ಕುಟುಂಬಗಳಿಗೂ ಸಮೃದ್ಧಿ ನೀಡು.”

 

06.

« اللَّهُمَّ صَلِّ عَلَى مُحَمَّدٍ وَعَلَى أَزْوَاجِهِ وَذُرِّيَّتِهِ، كَمَا صَلَّيْتَ عَلَى آلِ إِبْرَاهِيمَ، وَبَارِكْ عَلَى مُحَمَّدٍ وَعَلَى أَزْوَاجِهِ وَذُرِّيَّتِهِ، كَمَا بَارَكْتَ عَلَى آلِ إِبْرَاهِيمَ، إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಮುಹಮ್ಮದ್ (H) ರವರಿಗೂ ಅವರ ಪತ್ನಿಯರಿಗೂ ಹಾಗೂ ಅವರ ಸಂತತಿಗೂ ಅನುಗ್ರಹಿಸು. ಇಬ್ರಾಹೀಮ್ (S) ರವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ಮುಹಮ್ಮದ್ (H) ರವರಿಗೂ ಅವರ ಪತ್ನಿಯರಿಗೂ ಹಾಗೂ ಅವರ ಸಂತತಿಗೂ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.”

 

07.

« اللَّهُمَّ صَلِّ عَلَى مُحَمَّدٍ، وَعَلَى آلِ مُحَمَّدٍ، وَبَارِكْ عَلَى مُحَمَّدٍ، وَعَلَى آلِ مُحَمَّدٍ، كَمَا صَلَّيْتَ وَبَارَكْتَ عَلَى إِبْرَاهِيمَ، وَعَلَى آلِ إِبْرَاهِيمَ، إِنَّكَ حَمِيدٌ مَجِيدٌ »

“ಓ ಅಲ್ಲಾಹ್! ಇಬ್ರಾಹೀಮ್ (S) ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಹಾಗೂ ಸಮೃದ್ಧಿ ನೀಡಿರುವಂತೆ, ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೂ ಅನುಗ್ರಹಿಸು ಹಾಗೂ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.”

 

ಮೂಲ : ಸಿಫತು ಸಲಾತುನ್ನಬಿಯ್ಯ್, ಪುಟ ಸಂಖ್ಯೆ : 143-145
ಅನುವಾದ : ಅಬೂ ಹಮ್ಮಾದ್

ಹೆಚ್ಚಿನ ಓದಿಗಾಗಿ : 

ಮುಂಜಾನೆ ಮತ್ತು ಸಂಜೆಯ ದಿಕ್ರ್‌ಗಳು ಹಾಗೂ ಅದರ ಶ್ರೇಷ್ಠತೆಗಳು -ಅಬೂ ತಲ್‍ಹಾ ದಾವೂದ್ ಬರ್‌ಬ್ಯಾಂಕ್ (V)

ನಮ್ಮ ಪ್ರಾರ್ಥನೆಗಳಿಗೇಕೆ ಉತ್ತರ ಲಭಿಸುತ್ತಿಲ್ಲ? -ಇಮಾಮ್ ಇಬ್ರಾಹೀಮ್ ಬಿನ್ ಅದ್‍ಹಮ್ (V)

ದುಆಗಳಿಗೆ ಉತ್ತರ ಲಭಿಸುವ ಸಮಯಗಳು -ಅಲ್ಲಾಮಃ ಅಶ್ಶೈಖ್ ಉಬೈದ್ ಅಲ್-ಜಾಬಿರೀ (حَفِظَهُ اللَّهُ)