ಪ್ರವಾದಿಯವರ ಜನ್ಮದಿನವನ್ನು ಆಚರಿಸುವುದು ಅವರನ್ನು ಪ್ರೀತಿಸುವುದರ ಸಂಕೇತವಾಗಿದೆಯೇ?

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರಶ್ನಿಸಲಾಯಿತು :

ಪ್ರಶ್ನೆ : ಪ್ರವಾದಿ (H) ರವರ ಮೌಲಿದನ್ನು (ಜನ್ಮದಿನವನ್ನು) ಆಚರಿಸುವುದು ಅವರಿಗೆ ತೋರಿಸುವ ಪ್ರೀತಿಯ ಭಾಗವಾಗಿದೆಯೇ? ಮತ್ತು “ಖಂಡಿತವಾಗಿಯೂ ಈ ಒಂದು ಆಚರಣೆಯೆಲ್ಲವೂ ರಸೂಲ್ (H) ರವರ ಮೇಲಿರುವ ಪ್ರೀತಿಯಿಂದಾಗಿ (ನಿರ್ವಹಿಸುವುದಾಗಿದೆ)” ಎಂದು ಹೇಳುವವನಿಗೆ ತಮ್ಮ ಪ್ರತಿಕ್ರಿಯೆಯೇನು?

ಉತ್ತರ : ರಸೂಲ್ (H) ರವರನ್ನು ಪ್ರೀತಿಸುವುದು ಅವರ ಸುನ್ನತ್‍ನ ಪ್ರಕಾರ ಕರ್ಮವೆಸಗುವುದರಲ್ಲಾಗಿದೆ, ಬಿದ್ಅತ್‍ಗಳ (ನೂತನಾಚಾರಗಳ) ಮೇಲೆ ಕರ್ಮವೆಸಗುವುದರಲ್ಲಲ್ಲ. ಇದು (ಅರ್ಥಾತ್ ಪ್ರವಾದಿ H ರವರ ಜನ್ಮದಿನವನ್ನು ಆಚರಿಸುವುದು) ಒಂದು ಬಿದ್ಅತ್ಆಗಿದೆ. ರಸೂಲ್ (H) ರವರು ಹೇಳಿದರು :

« مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ »

“ನಮ್ಮ (ದೀನ್‌ನ) ಕಾರ್ಯಕ್ಕೆ ಅದರಲ್ಲಿಲ್ಲದ ಹೊಸ ಆಚಾರವನ್ನು ಯಾರಾದರೂ ಹೊಸದಾಗಿ ಸೇರಿಸಿದರೆ ಅದು ತಿರಸ್ಕೃತವಾಗಿದೆ.” (ಸಹೀಹ್ ಅಲ್-ಬುಖಾರಿ : 2697, ಸಹೀಹ್ ಮುಸ್ಲಿಮ್ : 1718)

ಯಾರಾದರೂ ಒಂದು ಕರ್ಮವನ್ನು ಆಚರಿಸಿದರೆ, ಅದು ಅವನು ಸ್ವತಃ ಹೊಸತಾಗಿ ನಿರ್ಮಿಸದಿದ್ದರೂ (ಅಥವಾ) ಅವನು ಸ್ವತಃ ಹೊಸತಾಗಿ ನಿರ್ಮಿಸಿದ ಅಥವಾ ಇತರರು ಹೊಸತಾಗಿ ನಿರ್ಮಿಸಿದ ಕಾರ್ಯವನ್ನು ಅವನು ನಿರ್ವಹಿಸಿದರೂ, ಅದು ತಿರಸ್ಕೃತವಾಗಿದೆ.

ಹಾಗಾಗಿ, ಅವನು ಸ್ವತಃ ಹೊಸತಾಗಿ ಸೇರಿಸಿದರೂ ಅಥವಾ ಅವುಗಳ (ಈ ಮೊದಲೇ ಹೊಸತಾಗಿ ಸೇರಿಸಲ್ಪಟ್ಟ ಕಾರ್ಯಗಳ) ಮೇಲೆ ಕರ್ಮವೆಸಗಿದರೂ (ಅವು) ಬಿದ್ಅತ್‍ಗಳೇ ಆಗಿವೆ.

ಪ್ರವಾದಿ (H) ರವರ ಜನ್ಮದಿನವನ್ನು ಆಚರಿಸುವುದು ಹೊಸತಾಗಿ ಸೇರಿಸಲ್ಪಟ್ಟ ಆಚಾರವಾಗಿದೆ. ಅದು ಪ್ರವಾದಿ (H) ರವರ ಕಾಲದಲ್ಲಾಗಲೀ, ಖುಲಫಾಉರ್ರಾಶಿದೂನ್‍ಗಳ (ಸನ್ಮಾರ್ಗಿಗಳಾದ ಖಲೀಫರುಗಳ) ಕಾಲದಲ್ಲಾಗಲೀ ಅಥವಾ ಆದರಣೀಯ (ಪ್ರಥಮ ಮೂರು) ತಲೆಮಾರಿನ (ಜನರ) ಕಾಲದಲ್ಲಾಗಲೀ ಪರಿಚಿತವಾಗಿರಲಿಲ್ಲ. ಇದು ಅವರಿಗೆ ಅಪರಿಚಿತವಾದ ಕಾರ್ಯವಾಗಿತ್ತು. ಹಾಗಾದರೆ ನಾವೇನು ಸಹಾಬಿಗಳಿಗಿಂತ ಹೆಚ್ಚು, ಖುಲಫಾಉರ್ರಾಶಿದೂನ್‍ಗಳಿಗಿಂತಲೂ ಹೆಚ್ಚು ಮತ್ತು ಆದರಣೀಯ ತಲೆಮಾರಿನ ಉಲಮಾಗಳಿಗಿಂತಲೂ ಹೆಚ್ಚು ಪ್ರವಾದಿ (H) ರವರನ್ನು ಪ್ರೀತಿಸುತ್ತೇವೆ ಎಂದಾಗಿದೆಯೇ?

ಇದರ ಹೊರತಾಗಿಯೂ, ಅವರು ಇದನ್ನು ನಿರ್ವಹಿಸಲಿಲ್ಲ. (ಹಾಗಾಗಿ) ಇದು ಅವರನ್ನು (ಅರ್ಥಾತ್ ರಸೂಲ್ H ರನ್ನು) ಪ್ರೀತಿಸುವುದರ ಭಾಗವಲ್ಲ ಎಂಬುದಕ್ಕಿರುವ ಒಂದು ಸೂಚನೆಯಾಗಿದೆ. ಅವರನ್ನು ಪ್ರೀತಿಸುವುದು (ಅವರ) ಅನುಸರಣೆಯನ್ನು ಅವಶ್ಯಕಗೊಳಿಸುತ್ತದೆ ಮತ್ತು ಅದು ಅವರ (H) ಶರೀಅತ್‍ನಲ್ಲಿ ಹೊಸತಾಗಿ ಸೇರಿಸುವುದನ್ನು ಒಪ್ಪಿಗೆ ನೀಡುವುದಿಲ್ಲ. ಹಾಗಾಗಿ, ಇದೊಂದು ಬಿದ್ಅತ್ ಆಗಿದೆ ಮತ್ತು ಹೊಸತಾಗಿ ಸೇರಿಸಲ್ಪಟ್ಟ ಕಾರ್ಯವಾಗಿದೆ. ಬಿದ್ಅತ್‍ಗಳೆಲ್ಲವೂ ಪಥಭ್ರಷ್ಟತೆಯಾಗಿದೆ. ಹೊಸತಾಗಿ ಸೇರಿಸಲ್ಪಟ್ಟ ಕಾರ್ಯಗಳೆಲ್ಲವೂ ಬಿದ್ಅತ್‍ಗಳಾಗಿವೆ ಮತ್ತು ಬಿದ್ಅತ್‍ಗಳೆಲ್ಲವೂ ಪಥಭ್ರಷ್ಟತೆಯಾಗಿದೆ.

ಇದು ಪ್ರವಾದಿ (H) ರವರನ್ನು ಪ್ರೀತಿಸುವುದರ ಭಾಗವಲ್ಲ. ಯಾರು ಪ್ರವಾದಿ (H) ರವರನ್ನು ಪ್ರೀತಿಸುತ್ತಾನೋ ಅವನು ಅವರ ಸುನ್ನತ್ಅನ್ನು ಪುನಃಸ್ಥಾಪಿಸುತ್ತಾನೆ. ಪ್ರವಾದಿ (H) ರವರನ್ನು ಪ್ರೀತಿಸುವವನು ಅವರ ಸುನ್ನತ್ಅನ್ನು ಪುನಃಸ್ಥಾಪಿಸುತ್ತಾನೆ ಮತ್ತು ಅದಕ್ಕೆ ಅನುಸಾರವಾಗಿ ಕರ್ಮವೆಸಗುತ್ತಾನೆ.

ಇನ್ನು ಯಾರು ತಾನು ಪ್ರವಾದಿ (H) ರವರನ್ನು ಪ್ರೀತಿಸುತ್ತೇನೆಂದು ವಾದಿಸುತ್ತಾ ಹೊಸ ಆಚಾರಗಳನ್ನು ಸೇರಿಸುತ್ತಾನೋ, ಆಗ ಅದು ಶರೀಅತ್ ವಿರುದ್ಧವಾದುದಾಗಿದೆ (ಮತ್ತು) ಸತ್ಯತೆಗೆ ವಿರುದ್ಧವಾದುದಾಗಿದೆ.

ಇನ್ನು ಯಾರು ಪ್ರವಾದಿ (H) ರವರನ್ನು ಪ್ರೀತಿಸುತ್ತಾನೋ ಅವನು ಯಾವುದನ್ನು ಅವರು (ಅರ್ಥಾತ್ ರಸೂಲ್ H ರವರು) ಆಜ್ಞಾಪಿಸಿರುವರೋ ಅದನ್ನು ಅನುಸರಿಸುತ್ತಾನೆ ಮತ್ತು ಯಾವುದನ್ನು ಅವರು ನಿಷೇಧಿಸಿರುವರೋ ಮತ್ತು ತದೆದಿರುವರೋ ಅದರಿಂದ ಅವನು ದೂರಸರಿಯುತ್ತಾನೆ.

ಅನುವಾದ : ಅಬೂ ಹಮ್ಮಾದ್

ಹೆಚ್ಚಿನ ಓದಿಗಾಗಿ : 

ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ?  -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ಪ್ರವಾದಿಯವರನ್ನು ಪ್ರೀತಿಸುವುದು ಹೇಗೆ? -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.