ಉಗ್ರವಾದಿಗಳ ವಿರುದ್ಧ ಇಸ್ಲಾಮ್

 بسم الله الرحمن الرحيم

ಕ್ರೌರ್ಯದ ಅಟ್ಟಹಾಸವನ್ನು ಮೆರೆಯುವ ಐಸಿಸ್ ಉಗ್ರವಾದಿಗಳ ಅಮಾನುಷ ಕೃತ್ಯಗಳಿಗೆ ಸಾಮಾನ್ಯ ಜನರು ಮಾತ್ರವಲ್ಲದೇ – ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರೂ ಕೂಡ ಬಲಿಯಾಗುತ್ತಾರೆ!!

ಐಸಿಸ್, ಅಲ್-ಖಾಯಿದ ಹಾಗೂ ಇನ್ನಿತರ ಉಗ್ರರ ಅಟ್ಟಹಾಸಕ್ಕೆ ಅತಿ ಹೆಚ್ಚು ಬಲಿಯಾದವರು ಮುಸ್ಲಿಮರೇ ಆಗಿರುತ್ತಾರೆ. ಶಾಂತಿಯ ಕೇಂದ್ರಬಿಂದು, ಮುಸ್ಲಿಮರು ಐದು ಹೊತ್ತು ನಮಾಝ್ ನಿರ್ವಹಿಸುವ ಮಸೀದಿಗಳು ಅದರಲ್ಲೂ ವಿಶೇಷವಾಗಿ ಮದೀನದಲ್ಲಿರುವ ಪ್ರವಾದಿ صلى الله عليه وسلم ರವರ ಮಸೀದಿಯು ಕೂಡ ಉಗ್ರರ ದಾಳಿಯಿಂದ ಹೊರತಾಗಿಲ್ಲ.

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರ ಪೈಕಿ ಓರ್ವರಾದ ಅಶ್ಶೈಖ್ ಅಬ್ದುಲ್ ಮುಹ್ಸಿನ್ ಬಿನ್ ಹಮದ್ ಅಲ್-ಅಬ್ಬಾದ್ ಅಲ್-ಬದ್ರ್ حفظه الله ಐಸಿಸ್ ಉಗ್ರವಾದಿಗಳ ಕುಕೃತ್ಯವನ್ನು ಖಂಡಿಸುತ್ತಾ ಅವರ ಬಗ್ಗೆ ಎಚ್ಚರಿಕೆಯನ್ನು ನೀಡುವ ವೇಳೆ ಈ ಕೆಳಗಿನ ವಿಷಯಗಳನ್ನು ಪ್ರಸ್ತಾಪಿಸಿರುವರು :

ಅನ್ಯಾಯವಾಗಿ ಅಮಾಯಕರ ಹತ್ಯೆ ನಡೆಸುವುದು ಮಹಾಪಾಪಗಳ ಪೈಕಿ ಸೇರಿದ ಮಹಾ ದುಷ್ಕೃತ್ಯವಾಗಿದೆ. ನಮಾಝ್’ನಲ್ಲಿ ನಿರತರಾಗಿರುವವರನ್ನು ಹತ್ಯೆಗೈಯ್ಯುವುದು ಅದರ ದುಷ್ಟತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಆಶ್ರಮಗಳಲ್ಲಿರುವ ಸನ್ಯಾಸಿಯರನ್ನು ಹತ್ಯೆಗೈಯ್ಯುವುದನ್ನು ಹೇಗೆ ಇಸ್ಲಾಮೀ ಶರೀಅತ್ ನಿಷೇಧಿಸಿದೆಯೋ ಅದೇ ರೀತಿ ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರ ಹತ್ಯೆಗೈಯ್ಯುವುದನ್ನು ಮೊಟ್ಟಮೊದಲನೆಯದಾಗಿ ನಿಷೇಧಿಸಿದೆ.

ಸೊಂಟಪಟ್ಟಿಯಲ್ಲಿ ಸ್ಫೋಟಕವನ್ನಿಟ್ಟುಕೊಂಡು ಆತ್ಮಹತ್ಯಾ ದಾಳಿ ನಡೆಸಿ ತನ್ನನ್ನು ಸ್ವತಃ ಸ್ಪೋಟಿಸಿಕೊಳ್ಳಲು ಯಾವೊಬ್ಬ ಮುಸ್ಲಿಮನಿಗೂ ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಸಮ್ಮತಾರ್ಹವಲ್ಲ. ಯಾಕೆಂದರೆ ಅಲ್ಲಾಹು ಹೇಳುತ್ತಾನೆ :
“ನೀವು ನಿಮ್ಮನ್ನೇ ವಧಿಸದಿರಿ (ಪರಸ್ಪರ ಕೊಲ್ಲಬೇಡಿರಿ). “[9.ಅಲ್-ಕುರ್’ಆನ್ 4 :29]

ಯುದ್ಧ ಸಂದರ್ಭಗಳಲ್ಲಿಯೂ ಕೂಡ ಮಕ್ಕಳನ್ನು ವಧಿಸುವುದನ್ನು ಇಸ್ಲಾಮಿನ ಶರೀಅತ್ ನಿಷೇಧಿಸಿದೆ [10.ಸಹೀಹ್ ಮುಸ್ಲಿಮ್ ‘ ಹದೀಸ್’ :1731] ಹಾಗಿದ್ದರೂ ಸೊಂಟಪಟ್ಟಿಯಲ್ಲಿರುವ ಸ್ಪೋಟಕಕ್ಕೆ ಬಲಿಯಾದವರ ಪೈಕಿ (ಹೆಚ್ಚಿನವರೂ) ಸಣ್ಣ ಪ್ರಾಯದ ಮಕ್ಕಳಾಗಿರುವರು[11.http://al-abbaad.com/index.php/articles/138-135]