w
ದುಬೈ (ಯು.ಎ.ಇ)ಯ ವಿದ್ವಾಂಸರಾದ ಅಶ್ಶೈಖ್ ಹಾಮಿದ್ ಬಿನ್ ಖಮೀಸ್ ಅಲ್-ಜುನೈಬೀ (حَفِظَهُ اللَّهُ) ಹೇಳಿದರು :
(ಮುಸ್ಲಿಮನಾದ) ಓರ್ವ ವ್ಯಕ್ತಿಯು ಅಮಾಯಕರ ಮೇಲೆ ಅಕ್ರಮವನ್ನು ಎಸಗಲಾರನು. ಅಲ್ಲಾಹು (E) ಹೇಳುತ್ತಾನೆ :
﴿لَّا يَنْهَاكُمُ اللَّـهُ عَنِ الَّذِينَ لَمْ يُقَاتِلُوكُمْ فِي الدِّينِ وَلَمْ يُخْرِجُوكُم مِّن دِيَارِكُمْ أَن تَبَرُّوهُمْ وَتُقْسِطُوا إِلَيْهِمْ ۚ إِنَّ اللَّـهَ يُحِبُّ الْمُقْسِطِينَ٨﴾
“ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡದವರು ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರಹಾಕದ ಜನರೊಡನೆ ನೀವು ಒಳಿತು ಮತ್ತು ಸೌಜನ್ಯ ತೋರುವುದರಿಂದ ಹಾಗೂ ಅವರೊಂದಿಗೆ ನ್ಯಾಯಪಾಲಿಸುವುದರಿಂದ ಅಲ್ಲಾಹು ನಿಮ್ಮನ್ನು ತಡೆಯುವುದಿಲ್ಲ. ನ್ಯಾಯಪಾಲಿಸುವವರನ್ನು ಅಲ್ಲಾಹು ಖಂಡಿತವಾಗಿಯೂ ಇಷ್ಟಪಡುತ್ತಾನೆ.” (ಕುರ್ಆನ್ 60 : 8)
ವಿದ್ವಾಂಸರು ಹೇಳಿದಂತೆ ‘ಅಲ್-ಬಿರ್ರ್’ ಎಂಬುದು ಎಲ್ಲಾ ರೀತಿಯ ಒಳಿತುಗಳಿಗಿರುವ ಒಂದು ಸಾರ್ವತ್ರಿಕ ನಾಮವಾಗಿದೆ.
ಆದ್ದರಿಂದ (ಜನರೊಡನೆ) ಉತ್ತಮ ರೀತಿಯ ವರ್ತನೆಯು ಅತ್ಯಗತ್ಯವಾಗಿದೆ. ಅತಿಕ್ರಮವನ್ನು ನಡೆಸಲು ಅಲ್ಲಾಹು ನಮಗೆ ಆಜ್ಞಾಪಿಸಲಿಲ್ಲ ಹಾಗೂ ಅನ್ಯಾಯವಾಗಿ ರಕ್ತ ಹರಿಸುವುದನ್ನು ಕೂಡ ಅಲ್ಲಾಹು ನಮಗೆ ಆಜ್ಞಾಪಿಸಲಿಲ್ಲ. ಇದ್ಯಾವುದನ್ನೂ ಕೂಡ ಅಲ್ಲಾಹು ನಮಗೆ ಆಜ್ಞಾಪಿಸಲಿಲ್ಲ. ಅತಿಕ್ರಮಿಯು ನಿನ್ನ ಮೇಲೆ ಅತಿಕ್ರಮಣವನ್ನು ಎಸಗಿದರೂ ಅನ್ಯಾಯ ಹಾಗೂ ಅತಿಕ್ರಮಣದ ಮೂಲಕ ಅತಿಕ್ರಮಿಸಲು ಅಲ್ಲಾಹು ನಿನಗೆ ಆಜ್ಞಾಪಿಸಲಿಲ್ಲ. ಹಾಗಾದರೆ ಅಮಾಯಕ ಜೀವಗಳ ಬಲಿ ತೆಗೆಯುವುದಾದರೆ (ಅದರ ದುಷ್ಟತನ) ಹೇಗಿರಬಹುದು?
ಅವರು ತಮ್ಮ ವಿರುದ್ಧ (ಸ್ವತಃ) ಅತಿಕ್ರಮಗಳಲ್ಲಿ ತೊಡಗಿಕೊಂಡರೂ (ಅವರು) ಪಾಪಕೃತ್ಯಗಳು ಹಾಗೂ ಕೆಡುಕುಗಳೊಂದಿಗೆ ಪಾನಮತ್ತರಾದ ಸ್ಥಿತಿಯಲ್ಲಿದ್ದರೂ, ಅಲಕ್ಷ್ಯ ಹಾಗೂ ಅಲ್ಲಾಹುವಿನಿಂದ (ಆಜ್ಞೆಗಳ ಅನುಸರಣೆಯಿಂದ) ವಿದೂರವಾಗಿದ್ದರೂ ಸರಿ! (ಅತಿಕ್ರಮವನ್ನೆಸಗುವುದು ನಿಷಿದ್ಧವಾಗಿದೆ).
ದುಬೈ (ಯು.ಎ.ಇ)ಯ ಇನ್ನೋರ್ವ ವಿದ್ವಾಂಸರಾದ ಅಶ್ಶೈಖ್ ಡಾ. ಮುಹಮ್ಮದ್ ಬಿನ್ ಘಾಲಿಬ್ ಅಲ್-ಉಮರೀ (حَفِظَهُ اللَّهُ) ಹೇಳಿದರು :
(ಉಗ್ರವಾದಿಗಳ) ಈ ಸಿದ್ಧಾಂತವು ಅಕ್ರಮ, ಹಿಂಸೆ, ಉಗ್ರವಾದ, ಕೊಲೆ ಹಾಗೂ ಭೂಮಿಯಲ್ಲಿ ಕ್ಷೋಭೆಯ ಹೊರತು ಇನ್ನೇನೂ ಪ್ರತಿಬಿಂಬಿಸುವುದಿಲ್ಲ. ಇದು ಇಸ್ಲಾಮ್ ಹಾಗೂ ಅದರ ಉದಾರತೆಯ ಸಂದೇಶದಿಂದ ಬಹಳ ವಿದೂರವಾಗಿದೆ.
ಆದ್ದರಿಂದ (ಐಸಿಸ್ ಹಾಗೂ ಇತರ ಉಗ್ರರ) ಕೆಡುಕುಗಳಿಂದ ಮುಸ್ಲಿಮರನ್ನು ವಿಮುಕ್ತಿಗೊಳಿಸಲು, ಅವರನ್ನು ದಮನ ಮಾಡಲು, ಅವರ ಪತಾಕೆಯನ್ನು ಮೇಲೆತ್ತದೆ ಬುಡ ಸಮೇತ ಅದನ್ನು ಕಿತ್ತೆಸೆಯಲು ಹಾಗೂ ಅವರ ವಿರುದ್ಧ ಮುಸ್ಲಿಮರಿಗೆ ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡಲು ನಾವು ಅಲ್ಲಾಹುವಿನಲ್ಲಿ ಬೇಡುತ್ತೇವೆ.
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಭಯೋತ್ಪಾದನೆಯನ್ನು ಇಸ್ಲಾಮ್ ಕಟುವಾಗಿ ಖಂಡಿಸುತ್ತದೆ -ಅಬೂ ಹಮ್ಮಾದ್ ಸಲಾಹುದ್ದೀನ್
ಪ್ರವಾದಿ ಮುಹಮ್ಮದ್ ರವರ ವಿರುದ್ಧ ನಿಂದನೆಗಳ ಕುರಿತು ಮುಸ್ಲಿಮರ ನಿಲುವೇನು? -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ