بسم الله الرحمن الرحيم
ಇಬ್ನು ಅಬೀ ಅವ್’ಫಾ رضي الله عنه ರಿಂದ ವರದಿ :
ಅಲ್ಲಾಹುವಿನ ರಸೂಲ್ (ಮುಹಮ್ಮದ್ صلى الله عليه وسلم) ಹೇಳಿರುವರು :
“ಖವಾರಿಜ್’ಗಳು ನರಕದ ನಾಯಿಗಳಾಗಿರುವರು.“[1.( ಇಬ್ನು ಮಾಜಃ – ಇಮಾಮ್ ಅಲ್-ಅಲ್ಬಾನಿ رحمه الله ಇದನ್ನು ಸಹೀಹ್ ಎಂದು ದೃಢೀಕರಿಸಿರುವರು)]
{ ಐಸಿಸ್, ಅಲ್-ಖಾಯಿದ, ಜಬ್’ಹತುನ್ನುಸ್ರ, ಲಷ್ಕರೆ ತಯ್ಯಿಬಃ, ಜಮಾತ್ ಅದ್-ದಅ್’ವಾ, ಹಿಝ್ಬುತ್ತಹ್ರೀರ್, ಬೋಕೋ ಹರಾಮ್, ಹಿಝ್ಬುಲ್ ಮುಜಾಹಿದೀನ್, ಹಿಝ್ಬುಲ್ಲಾ, ಹಮಾಸ್, ಇಖ್ವಾನುಲ್ ಮುಸ್ಲಿಮೀನ್, ಜೈಶ್ ರಿಜಾಲ್ ಅತ್ತರೀಖಃ ಅನ್ನಕ್ಷ್’ಬಂದೀಯ – ಮುಂತಾದ
ಎಲ್ಲಾ ತೀವ್ರವಾದಿಗಳು ಮತ್ತು ಉಗ್ರವಾದಿಗಳು ಖವಾರಿಜ್’ಗಳಾಗಿರುವರು}
ಕುರ’ಆನ್ ವ್ಯಾಖ್ಯಾನಕಾರರ ಪೈಕಿ ಪ್ರಮುಖರಾದ (ಹಿಜರಿ 774 – ಅಂದರೆ 1373 ರ ಇಸವಿಯಲ್ಲಿ ಮರಣಗೊಂಡ) ಇಸ್ಲಾಮಿನ ಶ್ರೇಷ್ಠ ವಿದ್ವಾಂಸರಾದ ಇಮಾಮ್ ಇಬ್ನ್ ಕಸೀರ್ رحمه الله – ತೀವ್ರಗಾಮಿಗಳಾದ – ಖವಾರಿಜ್ ಗಳು ಮುಂದೊಂದು ದಿನ ತನ್ನ ಅಟ್ಟಹಾಸವನ್ನು ಹೇಗೆ ಮೆರೆಯುವರೆಂದು ಈ ರೀತಿ ಹೇಳಿರುವರು :
ಅವರು (ಖವಾರಿಜ್’ಗಳು-ಐಸಿಸ್, ಅಲ್-ಖಾಯಿದ ಹಾಗೂ ಇತರ ಉಗ್ರರು) ಎಂದಾದರೂ ಅಧಿಕಾರ ಶಕ್ತಿಯನ್ನು ಪಡೆದುಕೊಂಡರೆ, ಖಂಡಿತವಾಗಿಯೂ ಅವರು ಭೂಮಿಯುದ್ದಕ್ಕೂ (ಅದರಲ್ಲೂ ವಿಶೇಷವಾಗಿ) ಇರಾಕ್ ಮತ್ತು ಸಿರಿಯಾದಲ್ಲಿ (ಭೀಕರ) ಕ್ಷೋಭೆಯನ್ನುಂಟು (ಫಸಾದ್) ಮಾಡುವರು. ಯಾವೊಂದು ಮಗುವನ್ನೂ – ಅದು ಗಂಡು ಅಥವಾ ಹೆಣ್ಣಾಗಲೀ, ಪುರುಷ ಅಥವಾ ಸ್ತ್ರೀಯಾಗಲೀ ಯಾರನ್ನೂ ಪರಿಗಣಿಸದೆ ಎಲ್ಲರನ್ನೂ ಅವರು (ನಿರ್ದಯವಾಗಿ ಕೊಲ್ಲದೆ) ಬಿಡಲಾರರು. ಏಕೆಂದರೆ ಅವರ (ಖವಾರಿಜ್ ಗಳ) ಪ್ರಕಾರ ಕ್ಷೋಭೆಯನ್ನುಂಟು ಮಾಡುವವರು ಜನರೇ ಆಗಿರುವುದರಿಂದ (ಖವಾರಿಜ್ ‘ಗಳ ಭ್ರಮೆ) , ಅವರನ್ನು (ಜನರನ್ನು) ಸಾಮೂಹಿಕವಾಗಿ ಹತ್ಯೆ ಮಾಡದ ಹೊರತು ಅವರು (ಜನರು) ಮಾಡಿದ ಕ್ಷೋಭೆಯನ್ನು ಸರಿಪಡಿಸಲಾಗದು !!![2.(ಅಲ್-ಬಿದಾಯತು ವನ್ನಿಹಾಯಃ : 10/574-575)]
ಸೌದಿ ಅರೇಬಿಯಾದ ಗ್ರಾಂಡ್ ಮುಫ್ತೀ, ವಿದ್ವಾಂಸ ಒಕ್ಕೂಟದ ಮುಖ್ಯಸ್ಥ, ಅತ್ಯಂತ ಹಿರಿಯ ವಿದ್ವಾಂಸರಾದ ಮುಫ್ತೀ ಅಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲ ಆಲ್-ಶೈಖ್ حفظه الله ಹೇಳುತ್ತಾರೆ :
ಯಾರು ನಮ್ಮ (ಮುಸ್ಲಿಮ್) ಯುವಕರನ್ನು ಐಸಿಸ್, ಅಲ್-ಖಾಯಿದ (ಮುಂತಾದ ಉಗ್ರವಾದಿಗಳ) ಆಶಯ ಸಿದ್ದಾಂತಗಳೆಡೆಗೆ ಸೇರಲು ಆಹ್ವಾನ ನೀಡುತ್ತಾನೋ ಅವನು (ಘೋರ) ಅಪರಾಧವನ್ನು ಎಸಗಿರುವನು ಹಾಗೂ (ಇಸ್ಲಾಮಿನ) ಸನ್ಮಾರ್ಗದಿಂದ ಸ್ಪಷ್ಟವಾಗಿ ದಾರಿತಪ್ಪಿದನು.
[3.https://mufti.af.org.sa/ar/content/المفتي-اختلافنا-مع-الإخوان-في-المنهج-وليس-الأصول]
ಅಬೂ ಝರ್ رضي الله عنه ರಿಂದ ವರದಿ :
ಅಲ್ಲಾಹುವಿನ ರಸೂಲ್ (ಮುಹಮ್ಮದ್ صلى الله عليه وسلم) ಹೇಳಿರುವರು :
ಅವರು (ಖವಾರಿಜ್’ಗಳು – ಐಸಿಸ್, ಅಲ್-ಖಾಯಿದ ದಂತಹ ತೀವ್ರವಾದಿಗಳು) ಜನರ ಪೈಕಿ ಅತ್ಯಂತ ಕೆಟ್ಟವರೂ, ಸೃಷ್ಟಿ ಜೀವಿಗಳಲ್ಲಿ ಅತ್ಯಂತ ನಿಕೃಷ್ಟರೂ ಆಗಿರುತ್ತಾರೆ.[4.(ಸಹೀಹ್ ಮುಸ್ಲಿಮ್)]
ಸೌದಿ ಅರೇಬಿಯಾದ ಗ್ರಾಂಡ್ ಮುಫ್ತೀ, ವಿದ್ವಾಂಸ ಒಕ್ಕೂಟದ ಮುಖ್ಯಸ್ಥ, ಅತ್ಯಂತ ಹಿರಿಯ ವಿದ್ವಾಂಸರಾದ ಮುಫ್ತೀ ಅಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲ ಆಲ್-ಶೈಖ್ حفظه الله ಹೇಳುತ್ತಾರೆ :
ಐಸಿಸ್ ಮತ್ತು ಅಲ್-ಖಾಯಿದ – ಇಸ್ಲಾಮಿನ ಪ್ರಥಮ ಶತ್ರುಗಳಾಗಿರುವರು.[5.http://www.alarabiya.net.] [6.http://alyahat.com]