ಮನೆ ಸಂದರ್ಶಿಸುವ ವೇಳೆ ಪಾಲಿಸಬೇಕಾದ ಶಿಷ್ಟಾಚಾರಗಳು

مَا زَاغَ الْبَصَرُ وَمَا طَغَىٰ ۝

“(ರಸೂಲ್ صلى الله عليه وسلم ರವರ) ದೃಷ್ಟಿಯು (ಆಚೀಚೆ) ತಿರುಗಲೂ ಇಲ್ಲ, ಮಿತಿಮೀರಲೂ ಇಲ್ಲ.” (ಕುರ್’ಆನ್ 53 : 17)

ಈ ಕುರ್’ಆನ್ ಸೂಕ್ತಿಯ ತಫ್ಸೀರ್’ನಲ್ಲಿ (ವಿವರಣೆಯಲ್ಲಿ) ಅಶ್ಶೈಖ್ ಮುಹಮ್ಮದ್ ಬಿನ್ ಘಾಲಿಬ್ ಅಲ್ ಉಮರೀ (حفظه الله) ಹೇಳುತ್ತಾರೆ :

ಅಲ್ಲಾಹು ಹೇಳಿದನು : مَا زَاغَ – (ದೃಷ್ಟಿಯು) ಎಡ ಮತ್ತು ಬಲಕ್ಕೆ ಹೋಗಲಿಲ್ಲ. وَمَا طَغَىٰ – ಮಿತಿಯನ್ನು ದಾಟಲಿಲ್ಲ.

ಇದು (ಇತರರ ಮನೆಗೆ ಭೇಟಿನೀಡುವಾಗ ಪಾಲಿಸಬೇಕಾದ) ಸಂದರ್ಶನದ ಶಿಷ್ಟಾಚಾರಗಳ ಪೈಕಿಯಿರುವ ಒಂದು ಶಿಷ್ಟಾಚಾರವಾಗಿದೆ.

ಆದ್ದರಿಂದ ಸಂದರ್ಶಕನು (ಅತಿಥಿಯು) ಆತಿಥ್ಯ ನೀಡುವವನ ಬಳಿ ತನಗೆ ಸಂಬಂಧಿಸದ ವಿಷಯದಲ್ಲಿ ಅವನಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳುವುದಿರಲಿ, ಅವನ ಮನೆಯಲ್ಲಿ ಆಚೆ ಈಚೆ ಕೂಡ ಹೆಚ್ಚು ನೋಡಕೂಡದು (ಮನೆಯ ಇತರೆಡೆಗೆ ಅಸಭ್ಯ ರೀತಿಯಲ್ಲಿ ದೃಷ್ಟಿ ಕೂಡ ಹಾಯಿಸಬಾರದು).
ಆದ್ದರಿಂದ ನಿನಗೆ ಸಂಬಂಧವಿಲ್ಲದ ವಿಷಯದಲ್ಲಿ ನೀನು ಕೇಳಬಾರದು. ಇದು ನಿನ್ನ ಇಸ್ಲಾಮಿನ ಪರಿಪೂರ್ಣತೆಯ ಪೈಕಿ ಸೇರಿದ ವಿಷಯಗಳಾಗಿವೆ.

ಮೂಲ : https://www.baynoona.net/ar/betaqah/2794

ಅನುವಾದ : ಅಬೂ ಹಮ್ಮಾದ್