ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹೇಳಿದರು :
“ಕಷ್ಟ ಹಾಗೂ ಪ್ರಯಾಸ ಅನುಭವಿಸದಿದ್ದರೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಉಪವಾಸವು ಕಡ್ಡಾಯವಾಗಿದೆ. (ಇನ್ನು ಅವರು ಪ್ರಯಾಸವನ್ನು ಅನುಭವಿಸುವುದಾದರೆ) ರೋಗಿ ಹಾಗೂ ಪ್ರಯಾಣಿಕರ ಹಾಗೆಯೇ (ಇವರಿಗೆ ರಿಯಾಯಿತಿ ಇದ್ದಂತೆ) ಅವರಿಬ್ಬರಿಗೂ ಉಪವಾಸವನ್ನು ತೊರೆಯುವ ಅನುಮತಿಯನ್ನು (ಇಸ್ಲಾಮ್) ನಿರ್ಣಯಿಸಿದೆ ಹಾಗೂ ಇನ್ನಿತರ ದಿನಗಳಲ್ಲಿ ಆ ತೊರೆದ ಸಂಖ್ಯೆಯಷ್ಟು ಉಪವಾಸವನ್ನು ಅವರು ಆಚರಿಸಬೇಕು. ಈ ಕುರಿತಾಗಿ ವಿದ್ವಾಂಸರ ಎರಡು ಹೇಳಿಕೆಗಳ ಪೈಕಿ ಅತ್ಯಂತ ಸರಿಯಾದ ಅಭಿಪ್ರಾಯ ಇದೇ ಆಗಿದೆ.
“ಪ್ರಾಯ ಹೊಂದಿರುವ ವೃದ್ಧ ಮತ್ತು ವೃದ್ಧೆಯರ ಹಾಗೆಯೇ ಅವರು ಉಪವಾಸವನ್ನು ಸಂದಾಯ ಮಾಡದೆ (ಅದರ ಬದಲಿಗೆ ಒಬ್ಬ ಬಡವನಿಗೆ) ಆಹಾರ ನೀಡುವುದಾಗಿದೆಯೆಂದು ಸಲಫ್’ಗಳ ಪೈಕಿ (ಕೆಲವು) ವಿದ್ವಾಂಸರು ಹೇಳಿರುವರು. ಆದರೆ ರೋಗಿ ಮತ್ತು ಪ್ರಯಾಣಿಕರ ಹಾಗೆಯೇ ಉಪವಾಸವನ್ನು ತೊರೆದು (ಇನ್ನಿತರ ದಿನಗಳಲ್ಲಿ) ಅವರು ಅದನ್ನು ಸಂದಾಯ ಮಾಡುವುದು (ಅವುಗಳ ಪೈಕಿ) ಅತ್ಯಂತ ಸರಿಯಾದ ಕ್ರಮವಾಗಿದೆ.
ಅನಸ್ ಬಿನ್ ಮಾಲಿಕ್ (I) ರಿಂದ ಉಲ್ಲೇಖಗೊಂಡ ಪ್ರವಾದಿ (H) ರಿಂದ ವರದಿಯಾದ ಹದೀಸಿನಲ್ಲಿ “ಅವರಿಬ್ಬರು (ಗರ್ಭಿಣಿ ಮತ್ತು ಬಾಣಂತಿಯರು ಉಪವಾಸ ತೊರೆಯುವ ವಿಧಿಯು) ರೋಗಿ ಮತ್ತು ಪ್ರಯಾಣಿಕರ (ವಿಧಿಯ) ಹಾಗೆಯೇ ಎಂಬುದು ಸಾಬೀತಾಗುತ್ತದೆ.
ಪ್ರವಾದಿ (H) ಹೇಳಿರುವರು :
“ಖಂಡಿತವಾಗಿಯೂ ಅಲ್ಲಾಹು ಪ್ರಯಾಣಿಕರಿಗೆ ನಮಾಝಿನ ಅರ್ಧವನ್ನು (ನಿರ್ವಹಿಸಲು) ಮತ್ತು ಉಪವಾಸವನ್ನು (ತೊರೆಯಲು) ರಿಯಾಯಿತಿ ನೀಡಿರುವನು ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಉಪವಾಸದ ರಿಯಾಯಿತಿ ಕೊಟ್ಟಿರುವನು.” (ಅಬೂ ದಾವೂದ್ : 2408, ಅತ್ತಿರ್ಮಿದೀ : 715 , ಅನ್ನಸಾಈ : 2315, ಇಬ್ನ್ ಮಾಜಃ : 1667)
(ಅಲ್-ಇಖ್ತಿಯಾರಾತ್ ಅಲ್-ಫಿಕ್’ಹಿಯ್ಯಃ : 222)