w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (V) ರವರೊಂದಿಗೆ ಪ್ರಶ್ನಿಸಲಾಯಿತು :
ಪ್ರಶ್ನೆ : ಕೆಲವೊಂದು ಅಜ್ಞಾನಿಗಳು ಕೆಲವು ಕಬ್‌ರ್‌ಗಳ ಸುತ್ತ (ಸಮಾಧಿ, ಗೋರಿ ಅಥವಾ ದರ್ಗಾಗಳಲ್ಲಿ) ನಿರ್ವಹಿಸುವ ಕಾರ್ಯಗಳ ಕುರಿತು ಇಸ್ಲಾಮ್‌ನ ವಿಧಿಯೇನು? (ರೋಗಗಳನ್ನು) ಗುಣಪಡಿಸುವಂತೆ ಅಥವಾ ಅವರ ಶತ್ರುಗಳ ವಿರುದ್ಧ ವಿಜಯ ಅಥವಾ ಸಹಾಯಕ್ಕಾಗಿ ಅವರು ಮರಣಹೊಂದಿದವರೊಂದಿಗೆ ಬೇಡುತ್ತಾರೆ ಹಾಗೂ ಅವರೊಂದಿಗೆ ಸಹಾಯವನ್ನು ಯಾಚಿಸುತ್ತಾರೆ. ಯಾಕೆಂದರೆ ಇದು ಅನೇಕ ಪ್ರದೇಶಗಳಲ್ಲಿ ಕಂಡುಬರುತ್ತಿದೆ. (ಈ ಕುರಿತು ಇಸ್ಲಾಮ್‌ನ ವಿಧಿಯೇನು?)
ಉತ್ತರ : ಅಲ್ಲಾಹುವಿನ ನಾಮದಿಂದ (ನಾನು ಆರಂಭಿಸುವೆನು), ಸರ್ವಸ್ತುತಿಗಳೂ ಅಲ್ಲಾಹುವಿಗಾಗಿದೆ. ಇದು (ಅರ್ಥಾತ್ ಮರಣಹೊಂದಿದವರೊಡನೆ ಬೇಡುವುದು ಮತ್ತು ಅವರೊಂದಿಗೆ ಸಹಾಯ ಯಾಚಿಸುವುದ) ಶಿರ್ಕ್ ಅಲ್-ಅಕ್ಬರ್ ಆಗಿದೆ (ಅಂದರೆ ಅಲ್ಲಾಹುವಿನೊಂದಿಗೆ ಇತರರನ್ನು ಆರಾಧನೆಯಲ್ಲಿ ಸಹಭಾಗಿಗಳಾಗಿ ಮಾಡುವ ಮಹಾಪಾಪವಾಗಿದೆ ಹಾಗೂ ಇಸ್ಲಾಮಿನಿಂದ ಹೊರತಳ್ಳಲ್ಪುಡುವ ಕಾರ್ಯವಾಗಿದೆ). ಇದು ಅಂದಿನ ಕಾಲಘಟ್ಟದ ಕುರೈಶ್‌ನ ಮುಶ್ರಿಕ್‌ಗಳಿಂದ ನಿರ್ವಹಿಸಲ್ಪಡುತ್ತಿದ್ದ ಶಿರ್ಕ್ಆಗಿದೆ. ಅವರು ಲಾತ್, ಉಝ್ಝಾ , ಮನಾತ್ ಮತ್ತು ಇನ್ನಿತರ ಅನೇಕ ವಿಗ್ರಹಗಳನ್ನು ಆರಾಧಿಸುತ್ತಿದ್ದರು.
ಅವರು ಅವುಗಳನ್ನು ಕರೆದು ಪ್ರಾರ್ಥಿಸುತ್ತಿದ್ದರು ಮತ್ತು ತಮ್ಮ ಶತ್ರುಗಳ ವಿರುದ್ಧ ಅವುಗಳೊಂದಿಗೆ ಸಹಾಯ ಯಾಚಿಸುತ್ತಿದ್ದರು –ನಮಗೆ ಉಝ್ಝಾ ಇದೆ ಆದರೆ ನಿಮಗೆ ಉಝ್ಝಾ ಇಲ್ಲ ಎಂದು ಅಬೂ ಸುಫ್ಯಾನ್‌ರವರು (ತಾವು ಇಸ್ಲಾಮ್ ಸ್ವೀಕರಿಸುವುದಕ್ಕಿಂತ ಮುಂಚೆ) ಉಹುದ್‌ನ ದಿನದಂದು ಹೇಳಿದಂತೆ. (ಪ್ರವಾದಿ H ರವರು ಸಹಾಬಿಗಳೊಂದಿಗೆ ಹೇಳಿದರು) : ಅವನೊಡನೆ (ಅರ್ಥಾತ್ ಅಬೂ ಸುಫ್ಯಾನ್‌ನೊಂದಿಗೆ) ಹೇಳಿರಿ, ಅಲ್ಲಾಹುವಾಗಿರುವನು ನಮ್ಮ ರಕ್ಷಕನು, ಆದರೆ ನಿಮಗೆ ರಕ್ಷಕರಾಗಿ ಯಾರೂ ಇಲ್ಲ. ಆಗ ಅಬೂ ಸುಫ್ಯಾನ್ ಹೇಳಿದರು : “ಹುಬಲ್ಆಗಿರುವನು ಶ್ರೇಷ್ಠನು!”, ‘ಹುಬಲ್’ ಅಂದರೆ ಮಕ್ಕಾದ ಕುರೈಶ್‌ಗಳು ಆರಾಧಿಸುತ್ತಿದ್ದ ವಿಗ್ರಹದ ಹೆಸರಾಗಿದೆ. ಆಗ ಪ್ರವಾದಿ (H) ರವರು ತಮ್ಮ ಸಹಾಬಿಗಳೊಡನೆ ಅವರಿಗೆ ಉತ್ತರಿಸುವಂತೆ ಹೇಳಿದರು, ಆಗ ಸಹಾಬಿಗಳು ಕೇಳಿದರು : ಓ ಅಲ್ಲಾಹುವಿನ ಸಂದೇಶವಾಹಕರೇ, ನಾವೇನು ಉತ್ತರಿಸಬೇಕು? ಅವರು (H) ಹೇಳಿದರು : “ಹೇಳಿರಿ, ಅಲ್ಲಾಹುವಾಗಿರುವನು ಅತ್ಯಂತ ಶ್ರೇಷ್ಠನು ಮತ್ತು ಮಹೋನ್ನತನು.”
ಮರಣಹೊಂದಿದವರು, ವಿಗ್ರಹಗಳು, ಕಲ್ಲುಗಳು, ಮರಗಳು ಮತ್ತು ಇನ್ನಿತರ ಸೃಷ್ಟಿಗಳೊಡನೆ ಪ್ರಾರ್ಥಿಸುವುದು, ಅವರೊಡನೆ ಸಹಾಯ ಯಾಚಿಸುವುದು, ಅವರಿಗೆ ಪ್ರಾಣಿಗಳನ್ನು ಬಲಿಯರ್ಪಿಸುವುದು, ಅವರ ಮೇಲೆ ಆಣೆಹಾಕುವುದು, ಮತ್ತು ಅವರ (ಅಥವಾ ಅವುಗಳ) ಸುತ್ತ ಪ್ರದಕ್ಷಿಣೆ ಹಾಕುವುದು ಇವುಗಳೆಲ್ಲವೂ ಶಿರ್ಕ್ ಅಲ್-ಅಕ್ಬರ್ ಆಗಿದೆ. ಏಕೆಂದರೆ ಅವುಗಳು ಅಲ್ಲಾಹುವಿನ ಹೊರತು ಅನ್ಯರಿಗೆ ಸಲ್ಲಿಸುವ ಆರಾಧನೆಯಾಗಿದೆ ಮತ್ತು ಅದು ಅಂದಿನ ಹಾಗೂ ನಂತರದ ಕಾಲಘಟ್ಟದ ಮುಶ್ರಿಕ್‌ಗಳು ನಿರ್ವಹಿಸುತ್ತಿದ್ದ ಕರ್ಮಗಳಾಗಿವೆ. ಹಾಗಾಗಿ, ನಾವು ಆ ಕುರಿತು ಜಾಗರೂಕರಾಗಬೇಕಾಗಿದೆ ಮತ್ತು ಅವುಗಳನ್ನು (ನಿರ್ವಹಿಸಿದ್ದರೆ, ಅಲ್ಲಾಹುವಿನೊಂದಿಗೆ) ತೌಬಾ ನಿರ್ವಹಿಸಬೇಕಾಗಿದೆ (ಅರ್ಥಾತ್ ಪಶ್ಚಾತ್ತಾಪ ಪಡಬೇಕಾಗಿದೆ).
ಅವುಗಳೆನ್ನೆಲ್ಲಾ ಮಾಡುವ ಜನರಿಗೆ ಉಲಮಾಗಳು ಮತ್ತು ದುಆತ್‌ಗಳು (ಅರ್ಥಾತ್ ಇಸ್ಲಾಮ್‌ನೆಡೆಗೆ ಆಹ್ವಾನಿಸುವ ದಾಈಗಳು) ಉಪದೇಶಿಸಬೇಕಾಗಿದೆ, ಅವರಿಗೆ ಕಲಿಸಿಕೊಡಬೇಕಾಗಿದೆ ಹಾಗೂ ಮಾರ್ಗದರ್ಶನವನ್ನು ನೀಡಬೇಕಾಗಿದೆ. ಇದು ಅಂದಿನ ಮುಶ್ರಿಕರು ಮಾಡುತ್ತಿದ್ದ ಶಿರ್ಕ್ ಆಗಿದೆಯೆಂದು ಅವರಿಗೆ ವಿವರಿಸಿಕೊಡಬೇಕಾಗಿದೆ. ಅವರ ಕುರಿತು (ಅರ್ಥಾತ್ ಅಂದಿನ ಮುಶ್ರಿಕ್‌ಗಳ ಕುರಿತು) ಅಲ್ಲಾಹು ಹೇಳಿರುವನು :
﴿ وَيَعْبُدُونَ مِن دُونِ اللَّـهِ مَا لَا يَضُرُّهُمْ وَلَا يَنفَعُهُمْ وَيَقُولُونَ هَـٰؤُلَاءِ شُفَعَاؤُنَا عِندَ اللَّـهِ ﴾
“ಅಲ್ಲಾಹುವಿನ ಹೊರತು ತಮಗೆ ಹಾನಿಯೋ ಅಥವಾ ಲಾಭವೋ ಮಾಡದವುಗಳನ್ನು ಅವರು ಆರಾಧಿಸುತ್ತಾರೆ ಮತ್ತು ಅವರು ಹೇಳುತ್ತಾರೆ ಇವರು ಅಲ್ಲಾಹುವಿನ ಬಳಿ ನಮ್ಮ ಶಿಫಾರಸುದಾರರಾಗಿರುವರು.” (ಕುರ್‌ಆನ್ 10 : 18)
ಅಲ್ಲಾಹು (E) ಹೇಳಿದನು :
﴿ إِنَّ اللَّهَ لا يَغْفِرُ أَنْ يُشْرَكَ بِهِ وَيَغْفِرُ مَا دُونَ ذَلِكَ لِمَنْ يَشَاءُ ﴾
“ತನ್ನೊಂದಿಗೆ ಶಿರ್ಕ್ ಮಾಡಲಾಗುವುದನ್ನು ಅಲ್ಲಾಹು ಖಂಡಿತವಾಗಿಯೂ ಕ್ಷಮಿಸಲಾರನು. ಅದರಹೊರತಾಗಿರುವುದನ್ನು ಅವನಿಚ್ಚಿಸುವವರಿಗೆ ಅವನು ಕ್ಷಮಿಸುವನು.” (ಕುರ್‌ಆನ್ 4 : 116)
ಅವನು (E) ಹೇಳಿದನು :
﴿ وَلَوْ أَشْرَكُوا لَحَبِطَ عَنْهُمْ مَا كَانُوا يَعْمَلُونَ ٨٨ ﴾
“ಅವರೊಂದುವೇಳೆ (ಅಲ್ಲಾಹುವಿನೊಂದಿಗೆ ಆರಾಧನೆಯಲ್ಲಿ) ಅನ್ಯರನ್ನು ಸಹಭಾಗಿಗಳಾಗಿ ಮಾಡಿರುತ್ತಿದ್ದರೆ, ಅವರು ನಿರ್ವಹಿಸುತ್ತಿದ್ದ ಸತ್ಕರ್ಮಗಳೆಲ್ಲವೂ ಅವರ ಪಾಲಿಗೆ ನಿಷ್ಫಲವಾಗಿಬಿಡುತ್ತಿದ್ದವು.” (ಕುರ್‌ಆನ್ 6 : 88)
ಅವನು (E) ಹೇಳಿದನು :
﴿ إِنَّهُ مَنْ يُشْرِكْ بِاللَّهِ فَقَدْ حَرَّمَ اللَّهُ عَلَيْهِ الْجَنَّةَ وَمَأْوَاهُ النَّارُ وَمَا لِلظَّالِمِينَ مِنْ أَنْصَارٍ ٢٧ ﴾
“ಖಂಡಿತವಾಗಿಯೂ, ಯಾರು ಅಲ್ಲಾಹುವಿನೊಂದಿಗೆ ಶಿರ್ಕ್ ಮಾಡುತ್ತಾನೋ, ಅವನಿಗೆ ಅಲ್ಲಾಹು ಸ್ವರ್ಗವನ್ನು ನಿಷಿದ್ಧಗೊಳಿಸಿರುವನು, ಅವನ ಅಂತ್ಯಾವಸಾನವು ನರಕಾಗ್ನಿಯಾಗಿದೆ. ಧಿಕ್ಕಾರಿಗಳಿಗೆ (ಸತ್ಯನಿಷೇಧಿಗಳಿಗೆ) ಸಹಾಯಕರಾಗಿ ಯಾರೂ ಇರಲಾರರು.” (ಕುರ್‌ಆನ್ 5:72)
ಅಲ್ಲಾಹು (E) ಹೇಳುತ್ತಾನೆ :
﴿ وَلَقَدْ أُوحِيَ إِلَيْكَ وَإِلَى الَّذِينَ مِن قَبْلِكَ لَئِنْ أَشْرَكْتَ لَيَحْبَطَنَّ عَمَلُكَ وَلَتَكُونَنَّ مِنَ الْخَاسِرِين ٥٦ ﴾
“ಖಂಡಿತವಾಗಿಯೂ ನಿಮಗಿಂತ ಮುಂಚಿನವರಿಗೆ (ಅಲ್ಲಾಹುವಿನ ಪ್ರವಾದಿಗಳಿಗೆ) ಅವತೀರ್ಣಗೊಳಿಸಲಾದಂತೆ, ನಿಮಗೂ ಅವತೀರ್ಣಗೊಳಿಸಲಾಗಿದೆ (ಓ ಪ್ರವಾದಿಯವರೇ!) (ಅದೇನೆಂದರೆ) “ಒಂದುವೇಳೆ ನೀವು ಅಲ್ಲಾಹುವಿನೊಂದಿಗೆ ಆರಾಧನೆಯಲ್ಲಿ ಇತರರನ್ನು ಸಹಭಾಗಿಗಳಾಗಿ ಮಾಡುವುದಾದರೆ ಖಂಡಿತವಾಗಿಯೂ ನಿಮ್ಮ (ಸರ್ವ) ಕರ್ಮಗಳೂ ನಿಷ್ಫಲವಾಗಿಬಿಡುವುದು ಹಾಗೂ ನಿಶ್ಚಯವಾಗಿಯೂ ನೀವು ನಷ್ಟಹೊಂದಿದವರ ಪೈಕಿ ಸೇರುವವರಾಗುವಿರಿ.” (ಕುರ್‌ಆನ್ 39 : 65)
ಪ್ರವಾದಿ (H) ರವರು ಹೇಳಿದರು :
« مَنْ مَاتَ وَهْوَ يَدْعُو مِنْ دُونِ اللَّهِ نِدًّا دَخَلَ النَّارَ »
“ಯಾರು ಅಲ್ಲಾಹುವಿನ ಹೊರತು ಅನ್ಯರನ್ನು – ಅವನಿಗೆ ಸರಿಸಮನಾಗಿ (ಮಾಡಿಕೊಂಡು ಅವುಗಳನ್ನು) – ಪ್ರಾರ್ಥಿಸುವ ಸ್ಥಿತಿಯಲ್ಲಿ ಮರಣಹೊಂದುವನೋ ಅವನು ನರಕಾಗ್ನಿಯನ್ನು ಪ್ರವೇಶಿಸುವನು.” (ಸಹೀಹ್ ಅಲ್-ಬುಖಾರಿ : 4227)
ಪ್ರವಾದಿ (H) ರವರು ಹೇಳಿದರು :
« حَقُّ اللَّهِ عَلَى الْعِبَادِ أَنْ يَعْبُدُوهُ وَلَا يُشْرِكُوا بِهِ شَيْئًا »
“ತನ್ನ ದಾಸರ ಮೇಲಿರುವ ಅಲ್ಲಾಹುವಿನ ಹಕ್ಕೇನೆಂದರೆ, ಅವರು ಅವನನ್ನು ಮಾತ್ರವೇ ಆರಾಧಿಸುವುದಾಗಿದೆ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಗಳಾಗಿ ಮಾಡದಿರುವುದಾಗಿದೆ.” (ಸಹೀಹ್ ಅಲ್-ಬುಖಾರಿ : 6938, ಸಹೀಹ್ ಮುಸ್ಲಿಮ್ : 30)
ಅವರು (H) ಹೇಳಿದರು :
« مَنْ لَقِيَ اللَّهَ لاَ يُشْرِكُ بِهِ شَيْئًا دَخَلَ الْجَنَّةَ وَمَنْ لَقِيَهُ يُشْرِكُ بِهِ دَخَلَ النَّارِ »
“ಯಾರು ಏನನ್ನೂ ಸಹಭಾಗಿಗಳಾಗಿಸದೆ (ಅರ್ಥಾತ್ ಶಿರ್ಕ್ ಮಾಡದ ಸ್ಥಿತಿಯಲ್ಲಿ) ಅಲ್ಲಾಹುವನ್ನು ಭೇಟಿಯಾಗುವನೋ ಅವನು ಸ್ವರ್ಗ ಪ್ರವೇಶಿಸುವನು ಮತ್ತು ಯಾರು ಅವನೊಂದಿಗೆ ಏನನ್ನಾದರೂ ಸಹಭಾಗಿಗಳಾಗಿ ಮಾಡುವ ಸ್ಥಿತಿಯಲ್ಲಿ ಭೇಟಿಯಾಗುವನೋ ಅವನು ನರಕಾಗ್ನಿಯನ್ನು ಪ್ರವೇಶಿಸುವನು.” (ಸಹೀಹ್ ಮುಸ್ಲಿಮ್ : 93)
ಇದೇ ಅರ್ಥವನ್ನು ಸೂಚಿಸುವ ಅನೇಕ ಆಯತ್ ಮತ್ತು ಹದೀಸ್‌ಗಳಿವೆ.
ಮುಸ್ಲಿಮರಿಗೆ ದೀನ್‌ನ ಅರಿವನ್ನು ದಯಪಾಲಿಸುವಂತೆಯೂ, ಅವನ ಕ್ರೋಧಕ್ಕೆ ಕಾರಣವಾಗುವ ಎಲ್ಲಾ ಕಾರ್ಯಗಳಿಂದಲೂ ಅವರನ್ನು ರಕ್ಷಿಸುವಂತೆಯೂ, ಎಲ್ಲಾ ಕೆಡುಕುಗಳಿಂದಲೂ ನಿಷ್ಕಳಂಕವಾದ ತೌಬಾವನ್ನು ಅವರಿಗೆ ದಯಪಾಲಿಸುವಂತೆಯೂ, (ಸರಿಯಾದ ಇಸ್ಲಾಮೀ ಜ್ಞಾನವನ್ನು) ಇಲ್ಮ್ಅನ್ನು ಹಬ್ಬಿಸಲು ಮತ್ತು ಅರಿವಿಲ್ಲದ ಜನರಿಗೆ ಯಾವುದಕ್ಕಾಗಿ ಅವನು ಅವರನ್ನು ಸೃಷ್ಟಿಸಿರುವನೋ – ಅರ್ಥಾತ್ ಅಲ್ಲಾಹುವಿನ ತೌಹೀದನ್ನು (ಅಲ್ಲಾಹುವನ್ನು ಮಾತ್ರ ಆರಾಧಿಸಲು) ಮತ್ತು ಅವನ ಆಜ್ಞಾನುಸರಣೆಯನ್ನು ಕಲಿಸಿಕೊಡಲು ಅವನ ದೀನ್‌ಗೆ ಸಹಾಯ ನೀಡಲು ಹಾಗೂ ಅವನ ವಚನವನ್ನು ಉತ್ಕೃಷ್ಟಗೊಳಿಸಲು ಎಲ್ಲೆಡೆಯೂ ಮುಸ್ಲಿಮ್ ಉಲಮಾಗಳಿಗೆ ಅಲ್ಲಾಹು ಅನುಗ್ರಹಿಸಲಿ ಹಾಗೂ ಮುಸ್ಲಿಮ್ ಆಡಳಿತಗಾರರಿಗೆ ದೀನ್‌ನ ಅಗಾಧ ಅರಿವನ್ನು ನೀಡಿ ಮಾರ್ಗದರ್ಶನ ಮಾಡುವಂತೆಯೂ ಹಾಗೂ ಅಲ್ಲಾಹುವಿನ ನಿಯಮಗಳ ಅನುಸಾರವಾಗಿ ತೀರ್ಪನ್ನು ನೀಡಲು ಮತ್ತು ಅದನ್ನು ತಮ್ಮ ಜನತೆಯ ಮೇಲೆ (ಉತ್ತಮ ರೀತಿಯಲ್ಲಿ) ಕಾರ್ಯಗತಗೊಳಿಸಲು ಅಲ್ಲಾಹು ಅನುಗ್ರಹಿಸಲಿ ಎಂದು ನಾವು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇವೆ. ಖಂಡಿತವಾಗಿಯೂ ಅವನು ಅತ್ಯಂತ ಉದಾರಿಯಾಗಿರುವನು.
ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ನಮ್ಮ ಪ್ರವಾದಿವರ್ಯರಾದ ಮುಹಮ್ಮದ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಅವರ ಸಹಾಬಿಗಳ ಮೇಲೂ ಇರಲಿ.
ಮೂಲ : ಮಜ್ಮೂಅ್ ಅಲ್-ಫತಾವಾ ಇಬ್ನ್ ಬಾಝ್ 7/432
ನೋಡಿರಿ : https://binbaz.org.sa/fatwas/2073/حكم-سوال-الميت-والاستغاثة-به
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವುದು ಶಿರ್ಕ್ಆಗಿದೆ -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂಬ ಸಾಕ್ಷ್ಯವಚನದ ಅರ್ಥವೇನು? -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ತೌಹೀದ್‍ನ ವಿಧಗಳಾವುವು? ಹಾಗೂ ಅವುಗಳ ಅರ್ಥವಿವರಣೆಯೇನು? -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.