ಜುಮುಅಃ ಮುಬಾರಕ್ ಎಂದು ಹೇಳುವುದರ ವಿಧಿಯೇನು? ಅಶ್ಶೈಖ್ ಸಾಲಿಹ್ ಅಲ್-ಫೌಝಾನ್

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರಶ್ನಿಸಲಾಯಿತು :

ಪ್ರಶ್ನೆ : ಓರ್ವ ಮುಸ್ಲಿಮನು ಇನ್ನೋರ್ವ ಮುಸ್ಲಿಮನಿಗೆ ಮೊಬೈಲ್ ಸಂದೇಶಗಳ ಮೂಲಕ ಅಥವಾ (ಸಾಮಾಜಿಕ ಜಾಲತಾಣಗಳ) ವಲಯಗಳ ಮೂಲಕ ಪ್ರತಿ ಜುಮುಅಃ ದಿನದಂದು “ಜುಮುಅಃ ಮುಬಾರಕ್” ಎಂದು ಹೇಳುವುದರ ವಿಧಿಯೇನು?

ಉತ್ತರ : (ದೀನ್‌ನಲ್ಲಿ) ಇದಕ್ಕೆ ಯಾವುದೇ ಪುರಾವೆಯಿಲ್ಲ. ಇದೊಂದು ಬಿದ್ಅತ್ಆಗಿದೆ (ಅರ್ಥಾತ್ ಹೊಸದಾಗಿ ಸೇರಿಸಲ್ಪಟ್ಟ ಕಾರ್ಯವಾಗಿದೆ). ಶುಕ್ರವಾರದಂದು ಪರಸ್ಪರ (ಈ ರೀತಿ) ಶುಭಾಶಯ ಕೋರುವುದು ಸಮ್ಮತಾರ್ಹವಲ್ಲ. ಈ ಕುರಿತು ಯಾವುದೇ ಪುರಾವೆಯು ಕುರ್‌ಆನ್‌ನಲ್ಲಾಗಲೀ ಸುನ್ನತ್‌ನಲ್ಲಾಗಲೀ ವರದಿಯಾಗಿಲ್ಲ. ಅದರಂತೆಯೇ ಇದು ಸಲಫ್‌ಗಳ (ಸಜ್ಜನ ಪೂರ್ವಿಕರ) ಕರ್ಮಗಳ ಪೈಕಿ ಸೇರಿದ್ದಲ್ಲ. ಬದಲಾಗಿ ಇದೊಂದು ನೂತನಾಚಾರವಾಗಿದೆ.

ಪ್ರಸ್ತುತವಾಗಿ ನೂತನವಾದಿಗಳು (ದೀನ್‌ನಲ್ಲಿ ಹೊಸ ಆಚಾರವನ್ನು ನಿರ್ವಹಿಸುವವರು) ಈ ಮೊದಲು ಉಲ್ಲೇಖಿಸಿರುವುದ್ದಕ್ಕೆ ಮೊಬೈಲ್ ಫೋನ್‌ಗಳನ್ನು ಮತ್ತು ಜಾಲತಾಣವನ್ನು ಬಳಸಿಕೊಳ್ಳುತ್ತಾರೆ ಮತ್ತು ಅದನ್ನವರು ಬಿದ್ಅತ್‌ಗಳನ್ನು ಹರಡಿಸಲು ಉಪಯೋಗಿಸುತ್ತಾರೆ.

ಮೂಲ : http://www.alfawzan.af.org.sa/ar/node/13651
ಅನುವಾದ : ಅಬೂ ಹಮ್ಮಾದ್ 

ಪ್ರವಾದಿ (H) ರವರು ಹೇಳಿದರು :

« وَشَرُّ الْأُمُورِ مُحْدَثَاتُهَا وَكُلُّ مُحْدَثَةٍ بِدْعَةٌ وَكُلُّ بِدْعَةٍ ضَلَالَةٌ وَكُلُّ ضَلَالَةٍ فِي النَّارِ »

“ಕಾರ್ಯಗಳ ಪೈಕಿ ಅತ್ಯಂತ ಹೇಯವಾದುದು ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳಾಗಿವೆ, ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳೆಲ್ಲವೂ ಬಿದ್ಅತ್‍ಗಳಾಗಿವೆ, ಬಿದ್ಅತ್‍ಗಳೆಲ್ಲವೂ ಪಥಭ್ರಷ್ಟತೆಯಾಗಿದೆ ಮತ್ತು ಪಥಭ್ರಷ್ಟತೆಗಳೆಲ್ಲವೂ ಇರುವುದು ನರಕಾಗ್ನಿಯಲ್ಲಾಗಿದೆ(ಅನ್ನಸಾಈ : 1/224)