w
ಮದೀನಃದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಉಬೈದ್ ಬಿನ್ ಅಬ್ದಿಲ್ಲಾಹ್ ಅಲ್-ಜಾಬಿರೀ (حَفِظَهُ اللَّهُ) ರವರು ಹೇಳಿದರು :
(ತನ್ನ ಸೃಷ್ಟಿಗಳಿಗೆ) ಅಪಾರ ದಯಾಮಯನೂ, (ತನ್ನ ನೈಜ ವಿಶ್ವಾಸಿಗಳಾದ ದಾಸರಿಗೆ) ಸದಾ ಕರುಣಾಮಯಿಯೂ ಆದ ಅಲ್ಲಾಹುವಿನ ನಾಮದಿಂದ.
ಸರ್ವ ಸ್ತುತಿಗಳೂ ಸಕಲಲೋಕಗಳ ರಬ್ಬ್ಆದ ಅಲ್ಲಾಹುವಿಗೆ ಮೀಸಲು. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್ಗಳು ನಮ್ಮ ಪ್ರವಾದಿಯಾದ ಮುಹಮ್ಮದ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಮತ್ತು ಅವರ ಎಲ್ಲಾ ಸಹಾಬಿಗಳ ಮೇಲೂ ಇರಲಿ.
ಅಲ್ಲಾಹುವಿನ ರಕ್ಷೆ, ದಯೆ ಮತ್ತು ಅನುಗ್ರಹಗಳು ನಿಮ್ಮೆಲ್ಲರ ಮೇಲಿರಲಿ.
ಖಂಡಿತವಾಗಿಯೂ, ಈ ಸಾಂಕ್ರಾಮಿಕ ರೋಗವು ಅಲ್ಲಾಹುವಿನ ಸೈನ್ಯಗಳ ಪೈಕಿಯಿರುವ ಒಂದು ಸೈನ್ಯವಾಗಿದೆ. ಅವನಿಚ್ಚಿಸುವವನಿಗೆ ಅವನದನ್ನು ಗುರಿಯಾಗಿಸುತ್ತಾನೆ ಮತ್ತು ಅವನಿಚ್ಚಿಸುವವನಿಂದ ಅವನದನ್ನು ನಿವಾರಿಸುತ್ತಾನೆ. ಹಾಗಾಗಿ, ಓರ್ವ ವ್ಯಕ್ತಿಯು ಅಲ್ಲಾಹುವಿನೆಡೆಗೆ ಅಭಯವನ್ನು ಅರಸಬೇಕಾಗಿದೆ. ಈ ವಿಪತ್ತನ್ನು ಮೇಲೆತ್ತುವಂತೆಯೂ ಹಾಗೂ ಸಾರ್ವತ್ರಿಕವಾಗಿ ಮುಸ್ಲಿಮರಿಗೂ ಹೆಚ್ಚುವರಿಯಾಗಿ ಎಲ್ಲಾ ನಾಡುಗಳಲ್ಲಿರುವ ಇನ್ನಿತರರಿಗೂ ಬಾಧಿಸಿರುವ ಸಂಕಷ್ಟವನ್ನು ನಿವಾರಿಸುವಂತೆಯೂ ಅಲ್ಲಾಹುವಿನಲ್ಲಿ ಬೇಡಕೊಳ್ಳಬೇಕಾಗಿದೆ.
ಆದ್ದರಿಂದ ಅಲ್ಲಾಹುವಿನೆಡೆಗೆ ಅಭಯವನ್ನು ಅರಸುವುದು ಕಡ್ಡಾಯವಾಗಿದೆ ಹಾಗೂ ಯಾರು ಪಾಪಕೃತ್ಯಗಳಲ್ಲಿ ನಿರತರಾಗಿದ್ದರೋ ಅವರು ಅಲ್ಲಾಹುವಿನೊಂದಿಗೆ ಪಾಪಮುಕ್ತಿಯನ್ನು ಬೇಡುವಂತೆ ನಾವವರಿಗೆ ಉಪದೇಶಿಸುತ್ತೇವೆ.
ಪ್ರವಾದಿ (H) ರವರಿಂದ ಸಹೀಹ್ಆಗಿ ಸಾಬೀತಾದಂತೆ -ಅದು ತಿರ್ಮಿದಿಯವರಿಂದ ವರದಿಯಾಗಿದೆ ಎಂದು ನಾನು ಭಾವಿಸುತ್ತೇನೆ (ಅದೇನೆಂದರೆ),
“ಖಂಡಿತವಾಗಿಯೂ, ಅಲ್ಲಾಹು ತನ್ನ ದಾಸನ ಪಶ್ಚಾತ್ತಾಪವನ್ನು -ಅವನು (ತನ್ನ ಆತ್ಮದ ಜೊತೆ) ಬಡಬಡಿಸುವವರೆಗೂ (ಅರ್ಥಾತ್ ಅವನ ಆತ್ಮವು ಅವನ ಗಂಟಲಿಗೆ ತಲುಪುವ ವರೆಗೂ)- ಸ್ವೀಕರಿಸುವನು.” (ಅತ್ತಿರ್ಮಿದಿ : 3537)
ಬಡಬಡಿಸುವುದೆಂದರೆ ಗಂಟಲಿನಲ್ಲಿ ಆತ್ಮದ ಅಲೆದಾಟವಾಗಿದೆ, ಅರ್ಥಾತ್ ಯಾವಾಗ ಆತ್ಮವು ಗಂಟಲಿಗೆ ತಲುಪುವುದೋ ಮತ್ತು ಆ ವ್ಯಕ್ತಿಯು ಮಲಕುಲ್ ಮೌತ್ಅನ್ನು (ಮರಣದ ದೇವಚರರನ್ನು) ಕಾಣುತ್ತಾನೋ ಆ ಸಮಯದಲ್ಲಿ (ಅವನಿಂದ) ಯಾವುದೇ ಪಶ್ಚಾತ್ತಾಪವೂ ಸ್ವೀಕರಿಸಲ್ಪಡದು.
ಹಾಗಾಗಿ, ಗಂಟಲಲ್ಲಿ ಆತ್ಮವು ಬಡಬಡಿಸುವುದಕ್ಕಿಂತಲೂ ಮುಂಚಿತವಾಗಿ ಅಲ್ಲಾಹುವಿನೊಂದಿಗೆ ಪಾಪಮುಕ್ತಿ ಬೇಡುವಂತೆ ಎಲ್ಲಾ ಮುಸ್ಲಿಮರೊಂದಿಗೆ ಮತ್ತು ವಿಶೇಷವಾಗಿ ಅಹ್ಲುಸ್ಸುನ್ನಃದವರೊಂದಿಗೆ ನಾನು ಉಪದೇಶಿಸುತ್ತೇನೆ.
ಅಲ್ಲಾಹುವಿನ ರಕ್ಷೆ, ದಯೆ ಮತ್ತು ಅನುಗ್ರಹಗಳು ನಿಮ್ಮೆಲ್ಲರ ಮೇಲಿರಲಿ.
ಅಲ್ಲಾಹುವಿನ ಸಲಾತ್ ಮತ್ತು ಸಲಾಮ್ಗಳು ನಮ್ಮ ಪ್ರವಾದಿಯಾದ ಮುಹಮ್ಮದ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಮತ್ತು ಅವರ ಎಲ್ಲಾ ಸಹಾಬಿಗಳ ಮೇಲೂ ಇರಲಿ.
ದಿನಾಂಕ : 29ನೇ ರಜಬ್, ಹಿಜ್ರಿ 1441 / 24ನೇ ಮಾರ್ಚ್ 2020
ಅನುವಾದ : ಅಬೂ ಹಮ್ಮಾದ್