ಪ್ರಶ್ನೆ: ಕೆಲವರು ಈ ದಾರಿಗೆಟ್ಟ ಗುಂಪುಗಳನ್ನು (ಖವಾರಿಜ್ ಗಳಾದ – ಐಸಿಸ್, ಅಲ್-ಖಾಯಿದ ಮುಂತಾದ ಉಗ್ರರನ್ನು) ಸಮರ್ಥಿಸಿಕೊಳ್ಳುತ್ತಾರೆ. ಅವರು ಹೇಳುವುದೇನೆಂದರೆ:
ಅವರು (ಉಗ್ರವಾದಿಗಳು) ದುಷ್ಕೃತ್ಯಗಳಲ್ಲಿ ತೊಡಗಿದ್ದರೂ ಅವರಲ್ಲಿ ಒಳಿತುಗಳೂ (ಕಾರ್ಯಗಳು) ಕೂಡ ಇದೆ. ಆದ್ದರಿಂದ ಅವರ ಒಳಿತು (ಕಾರ್ಯಗಳನ್ನು) ಕೂಡ ಪ್ರಸ್ತಾಪಿಸಬೇಕಾಗಿದೆ (ಅಲ್ಲವೇ)?
ಅಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಉತ್ತರಿಸುತ್ತಾರೆ :
ಅವರು (ಉಗ್ರವಾದಿಗಳು ಮಾಡಿರುವ) ಒಳಿತು ಕಾರ್ಯಗಳು ಯಾವುವು???
ಮನೆ ಹೊತ್ತಿಸುವುದು, ಕೊಲೆ ಪಾತಕ ಕೃತ್ಯಗಳನ್ನು ನಡೆಸುವುದು, ಉಗ್ರ ಚಟುವಟಿಕೆಗಳಲ್ಲಿ ತೊಡಗುವುದು, ಸಂಪತ್ತು ಕೊಳ್ಳೆ ಹೊಡೆಯುವುದು, (ಸಾಮಾನ್ಯ)ಮುಸ್ಲಿಮರನ್ನು ಕೊಲ್ಲುವುದು ಮತ್ತು (ಅದೇ ರೀತಿ) ಮುಸ್ಲಿಮ್ ಆಡಳಿತಗಾರರ ಸಂರಕ್ಷಣದಡಿಯಲ್ಲಿ (ಮುಸ್ಲಿಮ್ ದೇಶಗಳಲ್ಲಿ) ಜೀವಿಸುವ ಮುಸ್ಲಿಮೇತರರನ್ನು (ಕೂಡ) ಹತ್ಯೆಗೈಯ್ಯುವುದು. ಇವುಗಳೆಲ್ಲವೂ ಒಳಿತು ಕಾರ್ಯಗಳೇ!!??
ಮೇಲ್ನೋಟದಲ್ಲಿ (ನಮಗೆ ತಿಳಿದು ಬರುವುದೇನೆಂದರೆ) ಅವರಲ್ಲಿ ಯಾವುದೇ ಒಳಿತು ಕಾರ್ಯಗಳಿಲ್ಲ. ಇನ್ನು ಅವರ ಮತ್ತು ಅಲ್ಲಾಹನ ಮಧ್ಯೆಯಿರುವ (ಅವರ)ಕಾರ್ಯಗಳ ಕುರಿತು ಹೇಳುವುದಾದರೆ : ಅವುಗಳು ನಮ್ಮಿಂದ ಅಗೋಚರವಾಗಿದೆ (ನಾವ್ಯಾರೂ ಪ್ರತ್ಯಕ್ಷವಾಗಿ ನೋಡದ ಸಂಗತಿಗಳಾಗಿವೆ). ಆದರೆ ಪ್ರತ್ಯಕ್ಷವಾಗಿ ನಮಗೆ ಕಾಣುವುದೇನೆಂದರೆ “ಅವರಲ್ಲಿ (ಉಗ್ರವಾದಿ ಮತ್ತು ತೀವ್ರವಾದಿಗಳಲ್ಲಿ) ಯಾವುದೇ ಒಳಿತು ಕಾರ್ಯಗಳಿಲ್ಲ.
ಅದೇ ರೀತಿ, ಅವರನ್ನು (ಉಗ್ರವಾದಿಗಳನ್ನು) ಸಮರ್ಥಿಸುವವನು ಕೂಡ ಅವರಂತೆ ಉಗ್ರವಾದ ಮನೋಭಾವವನ್ನು ಹೊಂದಿರುವವನಾಗಿರುತ್ತಾನೆ. ಅವರಿಗಿರುವ (ಉಗ್ರವಾದಿಗಳಿಗಿರುವ) ಅದೇ ವಿಧಿಯು (ಶಿಕ್ಷೆ) ಅವನಿಗಿರುವುದು (ಸಮರ್ಥಿಕೊಳ್ಳುವವನಿಗೆ). ಅವರ (ಉಗ್ರವಾದಿಗಳ) ಜತೆಗೂಡಿ ಅವನು ಹೊರಹೋಗಿ ಸ್ಪೋಟಿಸದಿದ್ದರೂ (ಉಗ್ರವಾದಿಗಳು ಮಾಡುವಂತೆ ಆತ್ಮಹತ್ಯೆ ದಾಳಿ ಹಾಗೂ ಇನ್ನಿತರ ದಾಳಿ ನಡೆಸದೇ ಇದ್ದರೂ) ಅವರು ಸನ್ಮಾರ್ಗದಲ್ಲಿರುವರು ಎಂಬ (ಒಳಿತು ಕಾರ್ಯಗಳು ಮಾಡುತ್ತಿದ್ದಾರೆಂಬ) ನಂಬಿಕೆಯನ್ನು ಹೊಂದಿದ್ದರೆ ಅಲ್ಲಾಹುವಿನ ಬಳಿ ಅವನು ಅವರಂತೆ ಇರುವವನಾಗಿರವನು (ಉಗ್ರವಾದಿಗಳ ದುಷ್ಕೃತ್ಯಗಳಲ್ಲಿ ಭಾಗಿಯಾಗಿದವನಂತಿರುವನು). ಅವರಿಗಿರುವ ಅದೇ ವಿಧಿಯು ಅವನಿಗೂ ಅನ್ವಯವಾಗುವುದು.
ಆದ್ದರಿಂದ (ಪ್ರತಿಯೊಬ್ಬ) ಮುಸ್ಲಿಮನು ಈ ಬಗ್ಗೆ ಜಾಗೃತನಾಗಿರಬೇಕು.(ಇದರಿಂದ) ಅವನು ಅವರಂತೆ ಆಗುವ (ಎಲ್ಲಾ) ಸಾಧ್ಯತೆಗಳೂ ಇವೆ ಮತ್ತು ಅದನ್ನು ಅವನು ತಿಳಿಯದೇ ಇರಬಹುದು. ಯಾಕೆಂದರೆ ಅವನು ಅವರನ್ನು ಸಮರ್ಥಿಸಿಕೊಳ್ಳುತ್ತಾನೆ ಅಥವಾ ಅವರ ದುಷ್ಕೃತ್ಯಗಳನ್ನು ಧರ್ಮಸಮ್ಮತಗೊಳಿಸುತ್ತಾನೆ ಅಥವಾ ಅವರನ್ನು ಸಮರ್ಥಿಸಿಕೊಳ್ಳಲು ಅವನು ಸಬೂಬುಗಳನ್ನು ಹುಡುಕುತ್ತಾನೆ.
-ಅಶ್ಶೈಖ್ ಸ್ವಾಲಿಹ್ ಅಲ್ ಫೌಝಾನ್ (حَفِظَهُ اللَّهُ)
(ಹಿರಿಯ ಉಲಮಾ ಮಂಡಳಿಯ ಸದಸ್ಯರು ~ಸೌದಿ ಅರೇಬಿಯಾ)
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್