w
“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”
“ಇತ್ತೀಚೆಗೆ ನಮ್ಮ ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಪೋಟ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಉಗ್ರರನ್ನು ಹಾಗೂ ಉಗ್ರ ಚಟುವಟಿಕೆಗಳಿಗೆ ನೆರವು ನೀಡುವವರನ್ನು ಸಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಇಸ್ಲಾಮಿನ ಹೆಸರಿನಲ್ಲಿ ಉಗ್ರ ಕೃತ್ಯಗಳನ್ನೆಸಗುವವರನ್ನು ಮುಸ್ಲಿಮರು ಖಂಡಿಸಲೇಬೇಕು. ಅವರ ದುಷ್ಟ ಸಿದ್ಧಾಂತಗಳನ್ನು ಬಯಲಿಗೆಳೆಯಬೇಕು ಹಾಗೂ ಮುಸ್ಲಿಮರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ಅನಿವಾರ್ಯತೆಯಿದೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾರಿಗೂ ಯಾವುದೇ ಇಬ್ಬಗೆಯ ಧೋರಣೆ ಇರಕೂಡದು. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಸಲು ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ.”
– ಅಬೂ ಹಮ್ಮಾದ್ ಸಲಾಹುದ್ದೀನ್