ಕೇಡು ಬಾಧಿಸಿದಾಗ ಪ್ರವಾದಿ ಯೂನುಸ್‍ರವರ ಪ್ರಾರ್ಥನೆ

ಸಅ್‍ದ್ ಬಿನ್ ಅಬೀ ವಕ್ಕಾಸ್ (I) ಹೇಳಿದರು : ಅಲ್ಲಾಹುವಿನ ರಸೂಲ್ (H) ಹೇಳಿದರು : ಮೀನಿನ ಹೊಟ್ಟೆಯಲ್ಲಿರುವಾಗ ಪ್ರವಾದಿ ಯೂನುಸ್ (S) ಪ್ರಾರ್ಥಿಸಿದ ಪ್ರಾರ್ಥನೆ :

﴿ لاَ إِلَهَ إِلاَّ أَنْتَ سُبْحَانَكَ إِنِّي كُنْتُ مِنَ الظَّالِمِينَ ۝

“(ಓ ಅಲ್ಲಾಹ್) ನಿನ್ನ ಹೊರತು ಆರಾಧನೆಗೆ ಹಕ್ಕುದಾರನು ಯಾರೂ ಇಲ್ಲ, ನೀನು ಪರಮ ಪಾವನನು, ಖಂಡಿತವಾಗಿಯೂ ನಾನು ಅಕ್ರಮಿಗಳ ಪೈಕಿ ಸೇರಿದವನಾಗಿರುವೆನು.” (ಕುರ್‌ಆನ್ 21 : 87)

ಓರ್ವ ಮುಸ್ಲಿಮನು ಎಂದಾದರೂ ಇದರೊಂದಿಗೆ (ಈ ಪ್ರಾರ್ಥನೆಯ ಜೊತೆಗೆ) ಏನನ್ನಾದರೂ ಪ್ರಾರ್ಥಿಸಿದರೆ, ಅವನಿಗೆ ಅಲ್ಲಾಹು ಖಂಡಿತವಾಗಿಯೂ ಉತ್ತರ ನೀಡದಿರಲಾರನು. (ಅತ್ತಿರ್ಮಿದೀ : 3505)

ಶೈಖುಲ್ ಇಸ್ಲಾಮ್ ಇಬ್ನ್ ತಯ್‍ಮಿಯ್ಯಃ (V) ಹೇಳಿದರು :

ತನ್ನ ಆರಾಧನೆಯನ್ನು ಅಲ್ಲಾಹುವಿಗೆ ಮಾತ್ರ ಅರ್ಪಿಸುವುದನ್ನು ಹಾಗೂ ಪಾಪಮುಕ್ತಿ ಬೇಡುವುದನ್ನು ಯಾರು (ಜೀವನದಲ್ಲಿ) ಅಳವಡಿಸಿಕೊಳ್ಳುವನೋ, ಅವನಿಂದ ಹಾನಿಯು ಬಿಟ್ಟಗಲುವುದು ಅನಿವಾರ್ಯವಾಗಿದೆ. ಆದ್ದರಿಂದಲೇ ಯೂನುಸ್ (S) (ತಮ್ಮ ಪ್ರಾರ್ಥನೆಯಲ್ಲಿ) ಹೇಳಿದರು :

﴿ لاَ إِلَهَ إِلاَّ أَنْتَ سُبْحَانَكَ إِنِّي كُنْتُ مِنَ الظَّالِمِينَ ۝

“(ಓ ಅಲ್ಲಾಹ್) ನಿನ್ನ ಹೊರತು ಆರಾಧನೆಗೆ ಹಕ್ಕುದಾರನು ಯಾರೂ ಇಲ್ಲ, ನೀನು ಪರಮ ಪಾವನನು, ಖಂಡಿತವಾಗಿಯೂ ನಾನು ಅಕ್ರಮಿಗಳ ಪೈಕಿ ಸೇರಿದವನಾಗಿರುವೆನು.” (ಕುರ್‌ಆನ್ 21 : 87)

(ಮೂಲ : ಫತಾವಾ ಅಲ್-ಕುಬ್ರಾ 5 : 235)