ಅದು, ಮಹೋನ್ನತನಾದ ಅಲ್ಲಾಹುವನ್ನು ಸರ್ವ ರೀತಿಯ ಆರಾಧನೆಗಳಲ್ಲಿ – (ಅಲ್ಲಾಹುವಿನ ಭಯ, ಭರವಸೆ, ಪ್ರೀತಿ ಮುಂತಾದವುಗಳ ಮೂಲಕ) ಆಂತರಿಕವಾಗಿಯೂ ಹಾಗೂ (ನಮಾಝ್, ಪ್ರಾರ್ಥನೆ ಬಲಿಕರ್ಮ ಮುಂತಾವುಗಳ ಮೂಲಕ) ಬಾಹ್ಯವಾಗಿಯೂ, ನುಡಿ ಮತ್ತು ಕರ್ಮಗಳಲ್ಲಿ – ಏಕೈಕಗೊಳಿಸುವುದಾಗಿದೆ (ಅರ್ಥಾತ್ ಅಲ್ಲಾಹುವನ್ನು ಮಾತ್ರ ಆರಾಧಿಸುವುದಾಗಿದೆ). ಹಾಗೂ ಅಲ್ಲಾಹುವಿನ ಹೊರತು ಇತರೆಲ್ಲದರ ಆರಾಧನೆಗಳನ್ನು ನಿರಾಕರಿಸುವುದಾಗಿದೆ, ಅದು ಯಾರು ಅಥವಾ ಏನೇ ಆಗಿರಲಿ. ಮಹೋನ್ನತನಾದ ಆತನು (ಅಲ್ಲಾಹು) ಹೇಳಿದಂತೆ :
وَقَضَىٰ رَبُّكَ أَلَّا تَعْبُدُوا إِلَّا إِيَّاهُ
“ನಿಮ್ಮ ರಬ್ಬ್ (ಪಾಲಕಪ್ರಭು) ನಿಮಗೆ (ಹೀಗೆ) ವಿಧಿಸಿರುತ್ತಾನೆ : ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸದಿರಿ” (ಕುರ್ಆನ್ 17 : 23)
ಮಹೋನ್ನತನಾದ ಅಲ್ಲಾಹು ಹೇಳುತ್ತಾನೆ :
وَاعْبُدُوا اللَّـهَ وَلَا تُشْرِكُوا بِهِ شَيْئًا
“ಅಲ್ಲಾಹುವನ್ನು ಮಾತ್ರ ಆರಾಧಿಸಿರಿ ಹಾಗೂ ಅವನೊಂದಿಗೆ (ಆರಾಧನೆಯಲ್ಲಿ) ಯಾರನ್ನೂ ಸಹಭಾಗಿಗಳಾಗಿ (ಶಿರ್ಕ್) ಮಾಡದಿರಿ.” (ಕುರ್ಆನ್ 4 : 36)
ಮಹೋನ್ನತನಾದ ಅಲ್ಲಾಹು ಹೇಳುತ್ತಾನೆ :
إِنَّنِي أَنَا اللَّـهُ لَا إِلَـٰهَ إِلَّا أَنَا فَاعْبُدْنِي وَأَقِمِ الصَّلَاةَ لِذِكْرِي
“ಖಂಡಿತವಾಗಿಯೂ! ನಾನಾಗಿರುವೆನು ಅಲ್ಲಾಹ್! ನನ್ನ ಹೊರತು ಆರಾಧನೆಗೆ ನೈಜ ಹಕ್ಕುದಾರರು ಯಾರೂ ಇಲ್ಲ, ಹಾಗಾಗಿ ನನ್ನನ್ನು ಮಾತ್ರ ಆರಾಧಿಸಿರಿ, ಹಾಗೂ ನನ್ನ ಸ್ಮರಣೆಗಾಗಿ ನಮಾಝ್ ನಿರ್ವಹಿಸಿರಿ.” (ಕುರ್ಆನ್ 20 : 14)
– ಅಶ್ಶೈಖ್ ಅಲ್-ಹಾಫಿದ್ ಅಲ್-ಹಕಮಿಯ್ಯ್ (V)
(ಮೂಲ : ಅಅ್ಲಾಮ್ ಅಸ್ಸುನ್ನಃ ಅಲ್-ಮನ್ಶೂರಃ ಲಿ ಇಅ್ತಿಕಾದ್ ಅತ್ತಾಇಫಃ ಅನ್ನಾಜಿಯಃ ಅಲ್-ಮನ್ಸೂರಃ ಪುಟ : 19)