w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (V) ರವರೊಂದಿಗೆ ಪ್ರಶ್ನಿಸಲಾಯಿತು :
ಪ್ರಶ್ನೆ : ತೌಹೀದ್‍ನ ವಿಧಗಳಾವುವು?
ಉತ್ತರ : ತೌಹೀದ್‍ನ ವಿಧಗಳು ಮೂರು (ಅವುಗಳೆಂದರೆ :), 1) ತೌಹೀದ್ ಅರ್ರುಬೂಬಿಯ್ಯಃ 2) ತೌಹೀದ್ ಅಲ್-ಉಲೂಹಿಯ್ಯಃ 3) ತೌಹೀದ್ ಅಲ್-ಅಸ್ಮಾಇ ವಸ್ಸಿಫಾತ್
ಮೊದಲನೆಯದು : ತೌಹೀದ್ ಅರ್ರುಬೂಬಿಯ್ಯಃ
(ಅಂದರೆ) ಅಲ್ಲಾಹು ಸೃಷ್ಟಿಕರ್ತನಾಗಿರುವನು ಹಾಗೂ ಅನ್ನಧಾರ ಒದಗಿಸುವವನಾಗಿರುವನು, ಎಲ್ಲವನ್ನೂ ಸೃಷ್ಟಿಸಿದವನು ಅವನೇ ಆಗಿರುವನು, ಅವನು ಎಲ್ಲದರ ಸೃಷ್ಟಿಕರ್ತನೂ ಅರಿಯುವವನೂ ಆಗಿರುವನು, ಅವನು ಭೂಮಿಯನ್ನು ಹಾಗೂ ಆಕಾಶವನ್ನು ಸೃಷ್ಟಿಸಿರುವನು, ಅವನು ಜಿನ್ನ್‌ಗಳನ್ನೂ ಮನುಷ್ಯರನ್ನೂ ಹಾಗೂ ಸಕಲ ವಸ್ತುಗಳನ್ನೂ ಸೃಷ್ಟಿಸಿರುವನು ಎಂದು ಓರ್ವ ವ್ಯಕ್ತಿಯು ವಿಶ್ವಾಸವಿಡುವುದಾಗಿದೆ.
ಎರಡನೆಯದು : ತೌಹೀದ್ ಅಲ್-ಉಲೂಹಿಯ್ಯಃ
(ಅಂದರೆ) ಅಲ್ಲಾಹುವಿನ ಹೊರತು ಆರಾಧನೆಗೆ ನೈಜವಾಗಿ ಅರ್ಹತೆಯುಳ್ಳವನು ಯಾರೂ ಇಲ್ಲವೆಂದು ವಿಶ್ವಾಸವಿಡುವುದಾಗಿದೆ. ಅಲ್ಲಾಹು (E) ಹೇಳಿದನು :
﴿ فَاعْلَمْ أَنَّهُ لا إِلَهَ إِلَّا اللَّهُ وَاسْتَغْفِرْ لِذَنْبِكَ ﴾
“ಆದ್ದರಿಂದ ಖಂಡಿತವಾಗಿಯೂ ಅಲ್ಲಾಹುವಿನ ಹೊರತು ಆರಾಧಿಸಲ್ಪಡಲು ನೈಜ ಹಕ್ಕುದಾರರು ಯಾರೂ ಇಲ್ಲ ಎಂಬುದನ್ನು ತಾವು ಅರಿತುಕೊಳ್ಳಿರಿ ಹಾಗೂ ತಮ್ಮ ಪಾಪಕ್ಕಾಗಿ ಕ್ಷಮೆಯನ್ನು ಬೇಡಿರಿ.” (ಕುರ್‌ಆನ್ 47 : 19)
ಮೂರನೆಯದು : ತೌಹೀದ್ ಅಲ್-ಅಸ್ಮಾಇ ವಸ್ಸಿಫಾತ್
(ಅಂದರೆ) ಅಲ್ಲಾಹು ತನ್ನ ನಾಮ ಹಾಗೂ ಗುಣ ವಿಶೇಷಣಗಳ ಬಗ್ಗೆ ಸ್ವತಃ ಅಲ್ಲಾಹು ಮತ್ತು ಅವನ ರಸೂಲ್ (H) ಯಾವುದನ್ನೆಲ್ಲಾ ಹೇಳಿಕೊಟ್ಟಿರುವರೋ ಅವೆಲ್ಲವುಗಳಲ್ಲಿ ವಿಶ್ವಾಸವನ್ನು ಹೊಂದುವುದಾಗಿದೆ. ಅವನಿಗೆ ಅತ್ಯುತ್ತಮ ನಾಮಗಳು ಹಾಗೂ ಗುಣವಿಶೇಷಣಗಳಿವೆ, ಅವನಿಗೆ ಯಾವುದೇ ಹೋಲಿಕೆಯಿಲ್ಲ, ಅವನಿಗೆ ಯಾವುದೇ ಸರಿಸಾಟಿ ಇಲ್ಲ ಹಾಗೂ ಅವನಿಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲ.
﴿ وَلِلَّهِ الأَسْمَاءُ الْحُسْنَى فَادْعُوهُ بِهَا ﴾
“ಅತ್ಯುತ್ತಮ ನಾಮಗಳಿರುವುದು ಅಲ್ಲಾಹುವಿಗಾಗಿದೆ. ಆದ್ದರಿಂದ ನೀವು ಅವನನ್ನು ಅವುಗಳಿಂದ (ಅವನ ಅತ್ಯುತ್ತಮ ನಾಮಗಳಿಂದ) ಕರೆಯಿರಿ.” (ಕುರ್‌ಆನ್ 7 : 180)
ಟಿಪ್ಪಣಿ : ತೌಹೀದ್ ಅಲ್ ಅಸ್ಮಾಅ್ ವಸ್ಸಿಫಾತ್ ಅಂದರೆ ಅವನು (ಅಲ್ಲಾಹು) ತನ್ನನ್ನು ತಾನೇ ಹೇಗೆ ಹೆಸರಿಸಿರುವನೋ ಮತ್ತು ವಿವರಿಸಿರುವನೋ, ಹಾಗೂ ಸಹೀಹ್ (ಅಧಿಕೃತ) ಹದೀಸ್ ವಚನಗಳಲ್ಲಿ ಹೇಗೆ ಅವನ ಸಂದೇಶವಾಹಕರು (H) ಅವನನ್ನು ವಿವರಿಸಿರುವರೋ ಮತ್ತು ಹೆಸರಿಸಿರುವರೋ ಅದೇ ರೀತಿ ಅಲ್ಲಾಹುವನ್ನು ಹೆಸರಿಸುವುದು ಮತ್ತು ವಿವರಿಸುವುದಾಗಿದೆ.
ಉದಾಹರಣೆಗೆ ಅಲ್ಲಾಹು العليم ಆಗಿರುವನು ಅರ್ಥಾತ್ ಎಲ್ಲದರ ಕುರಿತು ಅರಿವುಳ್ಳವನಾಗಿರುವನು. ಅಲ್ಲಾಹುವಿನ ಈ ಅತ್ಯುತ್ತಮ ನಾಮವು ಅವನ ಅತ್ಯುನ್ನತ ಹಾಗೂ ಸಮಗ್ರ ಗುಣವಿಶೇಷಣವಾದ ಪರಿಪೂರ್ಣ ಅರಿವು ಮತ್ತು ಜ್ಞಾನವನ್ನು ಸೂಚಿಸುತ್ತದೆ.
ಹೀಗೆ ಅವನ ಅತ್ಯುತ್ತಮ ನಾಮ ಹಾಗೂ ಅವನ ಅತ್ಯುನ್ನತ ಹಾಗೂ ಸಮಗ್ರ ಗುಣವಿಶೇಷಣಗಳನ್ನು (ಯಾವುದೇ ಸೃಷ್ಟಿಗಳಿಗೆ) ಹೋಲಿಸದೇ ಹಾಗೂ (ಯಾವುದೇ ಸೃಷ್ಟಿಗಳಿಗೆ) ಸಮಾನಗೊಳಿಸದೇ, ಹಾಗೂ (ಅವುಗಳಾವುದನ್ನೂ ಬಾಹ್ಯ ಅರ್ಥದಿಂದ ಸರಿಸಿ ತಪ್ಪಾಗಿ) ವ್ಯಾಖ್ಯಾನಿಸದೇ ಅಥವಾ (ಅವುಗಳಾವುದನ್ನೂ) ನಿರಾಕರಿಸದೇ ಅಲ್ಲಾಹುವಿಗೆ ದೃಢೀಕರಿಸುವುದಾಗಿದೆ.
ಮೂಲ : https://binbaz.org.sa/fatwas/16827/ما-هي-اقسام-التوحيد
ಸಂಕ್ಷಿಪ್ತ ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂಬ ಸಾಕ್ಷ್ಯವಚನದ ಅರ್ಥವೇನು? -ಇಮಾಮ್ ಇಬ್ನ್ ಬಾಝ್ (V)
ಮರಣಹೊಂದಿದವರೊಡನೆ ಬೇಡುವುದು ಮತ್ತು ಅವರೊಂದಿಗೆ ಸಹಾಯ ಯಾಚಿಸುವುದರ ವಿಧಿಯೇನು? -ಇಮಾಮ್ ಇಬ್ನ್ ಬಾಝ್ (V)
ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವುದು ಶಿರ್ಕ್ಆಗಿದೆ -ಇಮಾಮ್ ಇಬ್ನ್ ಬಾಝ್ (V)