“ಇಸ್ಲಾಮಿನ ಹೆಸರಿನಲ್ಲಿ (ತಮ್ಮನ್ನು) ಗುರುತಿಸಿ ಕೊಳ್ಳುವ ಬಹಳ ಜನರಿರುವರು. ಆದರೆ ನೈಜ ಇಸ್ಲಾಮನ್ನು ಬಿಗಿಹಿಡಿದು (ಅದರಲ್ಲಿ ದೃಢವಾಗಿ) ನೆಲೆಗೊಳ್ಳುವವರು ಅತಿ ವಿರಳ.
ಅವರು (ಜನರ ಮಧ್ಯೆ) ಅಪರಿಚಿತರಾಗಿರುವರು.
ಜನರು ಅವರನ್ನು ಅಸಹಜ ರೀತಿಯಲ್ಲಿ (ಆಶ್ಚರ್ಯಭರಿತರಾಗಿ) ದಿಟ್ಟಿಸುವರು.
ಅವರನ್ನು (ದೀನೀ ಕಾರ್ಯಗಳಲ್ಲಿ) ಕಠಿಣ ನಿಲುವು ತಾಳುವವರೂ ಇತರರನ್ನು ಅವರು ಕಾಫಿರರನ್ನಾಗಿಸುತ್ತಾರೆಂದೂ ಮುಂತಾದ
(ಸುಳ್ಳಾರೋಪಗಳನ್ನು ಅವರ ಮೇಲೆ ಹೊರಿಸಿ) ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ.
ಆದರೆ ಅದು (ಈ ಸುಳ್ಳಾರೋಪಗಳೆಲ್ಲವೂ) ಅವರಿಗೆ ಯಾವುದೇ ಹಾನಿಯನ್ನುಂಟು ಮಾಡದು. ಏಕೆಂದರೆ ಅವರು ಅವರ ದೀನ್’ನನ್ನು ಬಿಗಿಹಿಡಿದು (ನಿಷ್ಠೆಯಿಂದ) ನಡೆದುಕೊಳ್ಳುವವರಾಗಿದ್ದಾರೆ.
ಹೌದು!! (ಅವರು ಸುಳ್ಳಾರೋಪಗಳನ್ನು ಹೊರಿಸಿದಂತೆ) ದಾರಿಗೆಟ್ಟ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡ ವಿಕೃತನಂತೆ ನೀನಾಗದಿರು.
ಅದೇ ರೀತಿ ವಿಧ್ವಂಸಗೈಯ್ಯುವ ಮತ್ತು ಅನ್ಯಾಯವಾಗಿ (ಮುಗ್ಧ ಜನರನ್ನು) ಹತ್ಯೆಗೈಯ್ಯುವ ಉಗ್ರವಾದಿ ನೀನಾಗಬಾರದು.
ಇದು (ನೈಜ) ಇಸ್ಲಾಮ್ ಅಲ್ಲ!! ಇದು (ನೈಜ) ಇಸ್ಲಾಮ್ ಅಲ್ಲ!!
ಅಂದರೆ ನೀನು ಬಂಡಾಯ ಹೂಡಿ ( ದಂಗೆಯೆಬ್ಬಿಸುವುದು) ಧ್ವಂಸಗೊಳಿಸುವುದು, ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗುವುದು, ಇವುಗಳು ಯಾವುದೂ (ನೈಜ) ಇಸ್ಲಾಮ್ ಅಲ್ಲ!!
(ಅದೇ ರೀತಿ) ಅನ್ಯಾಯವಾಗಿ ಜನರನ್ನು ಕಾಫಿರರನ್ನಾಗಿಸುವುದು. ಇಲ್ಲ! ಇದು (ನೈಜ) ಇಸ್ಲಾಮ್ ಅಲ್ಲ!!
ಇಸ್ಲಾಮ್ ನೈಜ ಧರ್ಮವಾಗಿದೆ. ಅದಕ್ಕೆ ಅದರದ್ದೇ ಆದ (ಭದ್ರವಾದ) ಬುನಾದಿ ಹಾಗೂ ಮೂಲಭೂತ ತತ್ವಗಳಿವೆ. ಅವುಗಳನ್ನು ಕಡ್ಡಾಯವಾಗಿ ನೀನು ಕಲಿತುಕೊಳ್ಳಲೇಬೇಕು. ಅದನ್ನು ನೀನು ಅರಿತುಕೊಳ್ಳಬೇಕು.
ಯಾರದೋ ಮಾತುಗಳನ್ನು (ಇಸ್ಲಾಮಿನ ಕಾರ್ಯದಲ್ಲಿ ಯಾವುದೇ ಪುರಾವೆಗಳಿಲ್ಲದೆ)
ಅಂಧಾನುಕರಣೆ ನೀನು ಮಾಡಕೂಡದು.
ಕುರ್’ಆನ್ ಮತ್ತು ಸುನ್ನತ್ತಿನಿಂದ (ಪ್ರವಾದಿ ಜೀವನ ಚರ್ಯೆಯಿಂದ) ನೀನು (ಇಸ್ಲಾಮಿನ ಸಂದೇಶಗಳನ್ನು) ಪಡೆದುಕೊಳ್ಳಬೇಕು.
ಅದು ನೀನು ಕಲಿಯುವ ಮೂಲಕ ಮಾತ್ರ ಸಾಧ್ಯ. ಅದು ನೀನು ಕೇವಲ ಗ್ರಂಥಗಳನ್ನು ತೆರೆದು ಸ್ವತಃ ನೀನೇ ಓದಿ ಕಲಿತುಕೊಳ್ಳುವುದಲ್ಲ.
ನೈಜ ಇಸ್ಲಾಮ್ (ಏನೆಂದು) ತಿಳಿದುಕೊಳ್ಳಲು ಉಲಮಾಗಳಿಂದ (ವಿದ್ವಾಂಸರಿಂದ) ನೀನು ಕಲಿತುಕೊಳ್ಳಬೇಕು.
ದೀನಿನ (ಇಸ್ಲಾಮಿನ) ವಕ್ತಾರರೆಂದು ವಾದಿಸುವವರು ಬಹಳ ಜನರಿರುವರು ಆದರೆ ನೈಜ ಇಸ್ಲಾಮನ್ನು ಬಿಗಿಹಿಡಿದು (ದೃಢವಾಗಿ ) ನೆಲೆಗೊಳ್ಳುವವರು ಬಹಳ ವಿರಳ!!
ಇದರ ಬಗ್ಗೆ ನೀನು (ಸರಿಯಾಗಿ) ಎಚ್ಚರಿಕೆ ವಹಿಸಿಕೋ!!!”
—————-
ಅಶ್ಶೈಖ್ ಸ್ವಾಲಿಹ್ ಅಲ್ ಫೌಝಾನ್ حفظه الله
( ಹಿರಿಯ ಉಲಮಾ ಮಂಡಳಿಯ ಸದಸ್ಯರು ~ಸೌದಿ ಅರೇಬಿಯಾ )
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್