w
ಮದೀನಃದ ಹಿರಿಯ ವಿದ್ವಾಂಸರಾದ ಅಲ್ಲಾಮಃ ಅಶ್ಶೈಖ್ ಉಬೈದ್ ಅಲ್-ಜಾಬಿರೀ (V) ರವರೊಂದಿಗೆ ಪ್ರಶ್ನಿಸಲಾಯಿತು :
ಪ್ರಶ್ನೆ : ದುಆಗೆ (ಪ್ರಾರ್ಥನೆಗೆ) ಉತ್ತರ ಲಭಿಸಬಹುದಾದ ಸಮಯಗಳಾವುವು?
ಉತ್ತರ : ನಿಷ್ಕಳಂಕವಾದ ಪ್ರಾರ್ಥನೆಗೆ ಉತ್ತರ ಲಭಿಸಬಹುದಾದ ಶ್ರೇಷ್ಠ ಸಮಯಗಳಿಗೆ ಸಂಬಂಧಿಸಿದಂತೆ ಸುಸ್ಪಷ್ಟವಾದ ಪುರಾವೆಗಳು ಸುನ್ನತ್‍ನಲ್ಲಿ ವರದಿಯಾಗಿದೆ. ಓರ್ವ ಮುಸ್ಲಿಮನು ಈ ವೇಳೆಗಳಲ್ಲಿ ನಿಷ್ಕಳಂಕವಾಗಿ ತನ್ನ ರಬ್ಬ್‌ನೊಂದಿಗೆ ಪ್ರಾರ್ಥಿಸಿದರೆ, ಅವನು ಅಲ್ಲಾಹುವಿನಿಂದ (ತನ್ನ ಪ್ರಾರ್ಥನೆಗೆ) ಉತ್ತರವನ್ನು ಪಡೆಯುವನು. إنْ شَاءَ اللَّهُ
ಅವುಗಳೆಂದರೆ :
1. ಅಝಾನ್ ಮತ್ತು ಇಕಾಮಃದ ನಡುವೆ
2. ನಮಾಝ್‍ನ ಕೊನೆಯ ತಶಹ್ಹುದ್‍ನಲ್ಲಿ
3. ನಮಾಝ್‍ನ ಸುಜೂದ್‍ನಲ್ಲಿ
4. (ಶುಕ್ರವಾರ) ಜುಮುಅಃ ದಿನದ ಕೊನೆಯ ಗಳಿಗೆಯಲ್ಲಿ (ಅರ್ಥಾತ್ ಅಸ್ರ್ ನಮಾಝಿನ ಬಳಿಕ ಸೂರ್ಯಾಸ್ತದವರೆಗಿನ ಸಮಯ)
5. ರಾತ್ರಿಯ ಕೊನೆಯ ಭಾಗದಲ್ಲಿ
6. ಮಳೆಸುರಿಯುವಾಗ
ಈ ಆರು ಸಮಯಗಳು – ಸುನ್ನತ್‍ನಲ್ಲಿ ವರದಿಯಾಗಿದೆ. ಆದ್ದರಿಂದ ಓರ್ವ ಮುಸ್ಲಿಮನು ಈ ವೇಳೆಗಳಲ್ಲಿ ನಿಷ್ಕಳಂಕವಾಗಿ ತನ್ನ ರಬ್ಬ್‌ನೊಂದಿಗೆ ಪ್ರಾರ್ಥಿಸಿದರೆ, ಅವನ ಪ್ರಾರ್ಥನೆಗೆ ರಬ್ಬ್ ಉತ್ತರವನ್ನು ನೀಡುವನು.
ಅನುವಾದ : ಅಬೂ ಹಮ್ಮಾದ್