ಮನ್‌ಹಜ್ ಅಸ್ಸಲಫ್ ಎಂದರೇನು? : ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್

w

“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”

ಸೌದಿ ಅರೇಬಿಯಾದ ಶ್ರೇಷ್ಠ ಸಲಫೀ ವಿದ್ವಾಂಸರಾದ ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್ (V) ರೊಂದಿಗೆ ಪ್ರಶ್ನಿಸಲಾಯಿತು:

ಪ್ರಶ್ನೆ: “ಮನ್‌ಹಜ್ ಅಸ್ಸಲಫ್-ಅಸ್ಸಾಲಿಹ್” ಎಂಬ ಪದದ ಅರ್ಥವೇನು? ಈ ಮನ್‌ಹಜ್ ಅನ್ನು ಅನುಸರಿಸುವವನ ಗುಣಲಕ್ಷಣಗಳೇನು? ಈ ಮನ್‌ಹಜ್ ಅನ್ನು ಅನುಸರಿಸುವುದು ಕಡ್ಡಾಯವೇ?

ಉತ್ತರ: ಮನ್‌ಹಜ್ ಅಸ್ಸಲಫ್-ಅಸ್ಸಾಲಿಹ್ ಎಂಬ ಪದದ ಅರ್ಥವೇನೆಂದರೆ – ವಿಶ್ವಾಸ, ಆರಾಧನೆ ಹಾಗೂ ಜನರ ಮಧ್ಯೆ ವ್ಯವಹರಿಸುವ ರೀತಿಗಳಲ್ಲಿ – ಪ್ರವಾದಿ (H) ಹಾಗೂ ಅವರ ಸಹಾಬಾಗಳ ಮಾರ್ಗವನ್ನು ಅನುಸರಿಸುವುದಾಗಿದೆ. ಹಾಗಾಗಿ ಇದೊಂದು ಸಮಗ್ರವಾದ ಪದವಾಗಿದೆ.

ಪ್ರತಿಯೊಂದು ನಿರ್ದಿಷ್ಟ ವಿಚಾರವನ್ನೂ ಅದು ಸಲಫ್‌ಗಳ (ಸಜ್ಜನ ಪೂರ್ವಿಕರ) ಮಾರ್ಗಕ್ಕೆ ಅನುಗುಣವಾಗಿದೆಯೋ ಅಥವಾ ಅವರ ಮಾರ್ಗಕ್ಕೆ ವಿರುದ್ಧವಾಗಿದೆಯೋ ಎಂದು ಅರಿತು ಅದನ್ನು ತೀರ್ಮಾನಿಸಲು ನಮಗೆ ಸಾಧ್ಯವಿದೆ. ಹಾಗಿದ್ದರೂ ಸಲಫ್‌ಗಳ ಮನ್‌ಹಜ್ ಎಂದರೆ ಆರಾಧನೆಯಲ್ಲಿ, ಜನರೊಂದಿಗೆ ವ್ಯವಹರಿಸುವ ರೀತಿಯಲ್ಲಿ, ಶಿಷ್ಟಾಚಾರ ಮುಂತಾದವುಗಳಲ್ಲಿ ಅವರು ಮುನ್ನಡೆದುಕೊಂಡ ಮಾರ್ಗವಾಗಿದೆ.

ಓರ್ವನು ಸಲಫ್‌ಗಳ ಮನ್‌ಹಜ್‌ ಅನ್ನು ಅನುಸರಿಸುತ್ತಿದ್ದಾನೆ ಎಂಬುವುದಕ್ಕಿರುವ ಸೂಚನೆ ಏನೆಂದರೆ: ಅವರ ಸ್ವಭಾವ ಶಿಷ್ಟಾಚಾರಗಳನ್ನು ಅವನು ತನ್ನಲ್ಲಿ ಮೈಗೂಡಿಸಿಕೊಳ್ಳುವನು. ಧಾರ್ಮಿಕ ಹಾಗೂ ಲೌಕಿಕ ವಿಷಯಗಳಲ್ಲಿ ಅವರ (ಸಜ್ಜನ ಪೂರ್ವಿಕರು ತಮ್ಮ ಜೀವನದಲ್ಲಿ ಮಾದರಿಯಾಗಿ ತೋರಿಸಿಕೊಟ್ಟ) ಒಳಿತು ಕಾರ್ಯಗಳನ್ನು ಅವನು (ತನ್ನ ಬದುಕಿನುದ್ದಕ್ಕೂ) ಅನುಕರಿಸುವನು.

ಯಾರು ಸುರಕ್ಷೆ ಹೊಂದಲು ಬಯಸುವನೋ ಅವನು ಸಲಫ್‌ಗಳ ಸಚ್ಚರಿತ ಮಾರ್ಗವನ್ನು ಅನುಸರಿಸಲಿ.

[ಮೂಲ: ಅತ್ತಮಸ್ಸುಕು-ಬಿಸ್ಸುನ್ನತಿ ಅನ್ನಬವಿಯ್ಯಃ ವಆಸಾರುಹು ಪುಟ:57-58]
ಅನುವಾದ : ಅಬೂ ಹಮ್ಮಾದ್