ನಮ್ಮ ಪ್ರಾರ್ಥನೆಗಳಿಗೇಕೆ ಉತ್ತರ ಲಭಿಸುತ್ತಿಲ್ಲ? : ಇಮಾಮ್ ಇಬ್ರಾಹೀಮ್ ಬಿನ್ ಅದ್‍ಹಮ್

w

ಅತ್‍ಬಾಅ್ ಅತ್ತಾಬಿಈನ್‍ಗಳ ಪೈಕಿ ಸೇರಿದ, ಹಿಜರಿ 163 ವರ್ಷದಲ್ಲಿ ಮರಣ ಹೊಂದಿದ ವಿದ್ವಾಂಸರಾದ ಇಮಾಮ್ ಇಬ್ರಾಹೀಮ್ ಬಿನ್ ಅದ್‍ಹಮ್ (V) ರವರೊಂದಿಗೆ ಕೇಳಲಾಯಿತು : ನಾವು ಪ್ರಾರ್ಥಿಸಿದರೂ ನಮಗೇಕೆ ಉತ್ತರ ಲಭಿಸುತ್ತಿಲ್ಲ?

ಅವರು (V) ಉತ್ತರಿಸಿದರು : ಅದೇಕೆಂದರೆ, ನಿಮಗೆ ಅಲ್ಲಾಹುವಿನ ಬಗ್ಗೆ ತಿಳಿದಿದೆ ಆದರೂ ನೀವು ಅವನನ್ನು ಅನುಸರಿಸುವುದಿಲ್ಲ, ನಿಮಗೆ ರಸೂಲ್ (H) ರವರ ಬಗ್ಗೆ ತಿಳಿದಿದೆ ಆದರೂ ನೀವು ಅವರ ಮಾರ್ಗದರ್ಶನವನ್ನು ಅನುಸರಿಸುವುದಿಲ್ಲ, ನಿಮಗೆ ಕುರ್‌ಆನ್‍ನ ಬಗ್ಗೆ ತಿಳಿದಿದೆ ಆದರೂ ನೀವು ಅದಕ್ಕೆ ಅನುಸಾರವಾಗಿ ವರ್ತಿಸುವುದಿಲ್ಲ. ನೀವು ಅಲ್ಲಾಹುವಿನ ಅನುಗ್ರಹದಿಂದ ತಿನ್ನುತ್ತೀರಿ ಆದರೂ ನೀವು ಅವನಿಗೆ ಕೃತಜ್ಞತೆ ತೋರುವುದಿಲ್ಲ, ನಿಮಗೆ ಸ್ವರ್ಗದ ಬಗ್ಗೆ ತಿಳಿದಿದೆ ಆದರೂ ನೀವದನ್ನು ಅರಸುವುದಿಲ್ಲ, ನಿಮಗೆ ನರಕದ ಬಗ್ಗೆ ತಿಳಿದಿದೆ ಆದರೂ ನೀವು ಅದರಿಂದ ದೂರಸರಿಯುವುದಿಲ್ಲ, ನಿಮಗೆ ಶೈತಾನ್‍ನ ಬಗ್ಗೆ ತಿಳಿದಿದೆ ಆದರೂ ನೀವವನ ವಿರುದ್ಧ ಹೋರಾಡುವುದಿಲ್ಲ, ಬದಲಾಗಿ ನೀವು ಅವನನ್ನು ಒಪ್ಪಿಕೊಳ್ಳುವಿರಿ. ನಿಮಗೆ ಮರಣದ ಬಗ್ಗೆ ತಿಳಿದಿದೆ ಆದರೂ ನೀವು ಅದಕ್ಕಾಗಿ ಸಜ್ಜಾಗುವುದಿಲ್ಲ, ನೀವು ಮರಣಹೊಂದಿದವರನ್ನು ದಫನ್ ಮಾಡಿರುವಿರಿ ಆದರೂ ನೀವು ಅದರಿಂದ ಪಾಠಕಲಿಯುವುದಿಲ್ಲ ಮತ್ತು ನೀವು ಸ್ವತಃ ನಿಮ್ಮ ತಪ್ಪನ್ನು ನಿರ್ಲಕ್ಷಿಸುತ್ತೀರಿ ಆದರೆ ಇತರ ಜನರ ತಪ್ಪುಗಳನ್ನು (ಹುಡುಕುವುದರಲ್ಲಿ) ನಿರತರಾಗಿರುವಿರಿ.”

(ಅಲ್-ಕುರ್ತುಬೀ V ರವರ ಜಾಮಿಅ್ ಲಿ-ಅಹ್‍ಕಾಮಿಲ್ ಕುರ್‌ಆನ್‍ 2 : 312)
ಅನುವಾದ : ಅಬೂ ಹಮ್ಮಾದ್